ರಂಭಾಪುರಿ ಶ್ರೀಗಳಿಗೆ ಬಹಿರಂಗ ಪತ್ರ

ರಂಭಾಪುರಿ ಶ್ರೀಗಳೇ ನೀವು ಮತ್ತು ನಿಮ್ಮ ತಂಡ ಪದೇ ಪದೇ ಬಸವಣ್ಣನವರು ನಮ್ಮ ಶಿಷ್ಯರು ಅಂತ ಹೇಳುತ್ತಲೇ ಇದ್ದೀರಾ.

ಒಂದು ವೇಳೆ ಬಸವಣ್ಣನವರು ನಿಮ್ಮ ಶಿಷ್ಯನೇ ಎಂದು ಒಪ್ಪಿದರೂ ನಿಮ್ಮ ನಡಾವಳಿಗೂ ಬಸವಣ್ಣನವರು ಪ್ರತಿಪಾದಿಸಿದ ವಿಚಾರಗಳಿಗೂ ಸಾಕಷ್ಟು ಭಿನ್ನತೆ ಇದೆ. ಅಂತಹ‌ ಭಿನ್ನತೆಯ ಕೆಲವು ಅಂಶಗಳನ್ನು ಈ ರೀತಿಯಾಗಿ ಪಟ್ಟಿ ಮಾಡಿದ್ದೇವೆ.

ನಿಮ್ಮ ಮೂಲ ಪುರುಷ ಕಲ್ಲಿನಿಂದ ಟಕ್ ಅಂತ ಎದ್ದು ಬಂದಿದ್ದಾರೆ ಅಂತ ಹೇಳುವಿರಿ

ಆದರೆ ಬಸವಣ್ಣನವರು ನೈಸರ್ಗಿಕವಾಗಿ ಹುಟ್ಟಲು ಅಸಾಧ್ಯ ಎಂದು ಹೇಳಿದ್ದಾರೆ

ಹಾಗೂ ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ ಎಂದು ಪ್ರಶ್ನೆ ಮಾಡಿದ್ದಾರೆ

ನೀವು ಮತ್ತು ನಿಮ್ಮ ತಂಡ ಹೇಳುವುದು ಗುರು ಆಗಲು ಎಲ್ಲರಿಗೂ ಅಸಾಧ್ಯ ಎಂದು

ಬಸವಣ್ಣನವರು ಹೇಳುವರು ಅರಿವು ಆಚಾರ ಇದ್ದವರೆಲ್ಲರೂ ಗುರು ಅಂತ

ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎಂದಿದ್ದಾರೆ

ಆದರೆ ನೀವು ಮತ್ತು ನಿಮ್ಮ ತಂಡ ಎತ್ತರದ ಕುರ್ಚಿಯಲ್ಲಿ ಕೂತು ನಾವು ದೊಡ್ಡವರು ಎಂದು ಸಾರುತಿದ್ದೀರೀ

ಬಸವಣ್ಣನವರು ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಅಲ್ಲಗಳೆದರು
ನಿಮಗೆ ಅವುಗಳೇ ಬಂಡವಾಳ

ನೀವು ಹೇಳಿದಿರಿ ಲಿಂಗಾಯಿತಕ್ಕೂ ವೀರಶೈವರಿಗೂ ಕಂದಕ ಸೃಷ್ಟಿಸುತ್ತಿದ್ದಾರೆ ಅಂತ

ಈ ಕಂದಕ ನಿರ್ಮಾಣ ಮಾಡಲು ಪ್ರಾರಂಭ ಮಾಡಿದವರು ನೀವೇ

ಕೆಲವು ವರ್ಷಗಳ ಹಿಂದೆ ನಿಮ್ಮ ಅಡ್ಡಪಲ್ಲಕ್ಕಿ ಮೆರವಣಿಗೆ ಹೋಗುವಾಗ ಬಸವಣ್ಣನವರ ಭಾವಚಿತ್ರದ ಕೆಳಗೆ ನಾವು ಹೋಗುವುದಿಲ್ಲ ಎಂದು ಭಾವಚಿತ್ರ ತೆಗೆದ ಮೇಲೆ ಮೆರವಣಿಗೆ ಹೋದದ್ದು ನೆನಪಿಲ್ಲವೇ

ನಿಮ್ಮ ವೀರಶೈವ ಮಠಾಧೀಶರ ಶೃಂಗ ಸಭೆಯಲ್ಲಿ ನಿಮ್ಮ ಇತರೆ ಮಠಾಧಿಶರು ನಿಮ್ಮ ಸರಿಸಮ ಕೂರಲು ವ್ಯವಸ್ಥೆ ಮಾಡಿರಲಿಲ್ಲ

ಇನ್ನೂ ಆಲ್ಲಿ ಎಲ್ಲಿಯೂ ಬಸವಣ್ಣನವರ ಭಾವಚಿತ್ರ ಇರಲಿಲ್ಲ
ಇದು ಕಂದಕ ಅಲ್ಲವೇ

ರಂಭಾಪುರಿ ಮಠಾಧೀಶರೇ ವೀರಶೈವ ಲಿಂಗಾಯತ ಒಂದಾಗಬೇಕು ಅಂದರೆ ಬಸವಣ್ಣನವರೇ ಧರ್ಮ ಗುರು ಅಂತ ಒಪ್ಪಿದರೆ ಮಾತ್ರ ಸಾಧ್ಯ

ಕಾಲ್ಪನಿಕ ರೇಣುಕಾಚಾರ್ಯ ಅವರನ್ನು ನೀವು ಬಿಡುವವರೆಗೂ ವೀರಶೈವ ಲಿಂಗಾಯತ ಒಂದಾಗುವುದು ಅಸಾಧ್ಯ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು