ಶರಣ ಎಂ.ಎಂ. ಕಲ್ಬುರ್ಗಿಯವರು, ಶರಣೆ ಗೌರಿ ಲಂಕೇಶ, ಶರಣ ಲಿಂಗಣ್ಣ ಸತ್ಯಂಪೇಟೆಯವರು ಯಾರಿಂದ ಹುತಾತ್ಮರಾದರು? ಅವು ಯಾರ ಕೈಗಳು?
ಗದಗ
(ರೇಣುಕಾಚಾರ್ಯ ಜಯಂತಿಗೆ ಶರಣ ತತ್ವ ಚಿಂತಕ ನಿಂಗನಗೌಡ ಹಿರೇಸಕ್ಕರಗೌಡ್ರ ಅವರ ಪ್ರತಿಕ್ರಿಯೆ.)
1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?
ಹೌದು, ಬೊಮ್ಮಾಯಿ ಅವಧಿಯಿಂದ ಹೆಚ್ಚು ಹಚ್ಚಾಗಿ ವ್ಯವಸ್ಥಿತವಾಗಿ ನಡೆಸುವ ಪ್ರಯತ್ನವಾಗುತ್ತಿದೆ.
2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?
ರೇಣುಕರ ಜಯಂತಿಯ ಹುಚ್ಚು ಪಂಚಾಚಾರ್ಯರಲ್ಲಿ ಈಗ ಹೆಚ್ಚಾಗಿದೆ. ತಮಗೆ ಭಕ್ತರೇ ಇಲ್ಲದ ಕಾಲ ಬಂದಿತೇನೋ ಎಂಬ ಭಾವನೆ ಅವರಿಗೀಗ ಕಾಡತೊಡಗಿದೆ. ಬಸವ ಭಯ ಹೆಚ್ಚಾಗಿ ತಮ್ಮ ಹಿಡಿ ಶ್ರೀಮಂತರಿಂದ, ಪ್ರಚೋದನೆಯಿಂದ ಇದು ಜನಪ್ರಿಯ ಆಚರಣೆ ಎಂದವರು ತಿಳಿದಿದ್ದಾರೆ. ಬಸವ ಸಮೂಹಗಳನ್ನು ಹತ್ತಿಕ್ಕುವುದೇ ಇದರ ಹಿಂದಿನ ಮುಖ್ಯ ಉದ್ಧೇಶವಾಗಿದೆ.
3) ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?
ಯಾವುದಾದರೂ ಬೆಳವಣಿಗೆಗಳು ಏಕೆ! ಬಸವ ಬಳಗ, ಬಸವದಳದ ಸಾವಿರ ಸಾವಿರ ಶಾಖೆಗಳು, ಜನರು ತಿರುಗಿ ಬಿದ್ದಾರು ಎಂದು ಕೆಲವರು, ಇನ್ನು ಕೆಲವರು ಬಸವ ಪ್ರಜ್ಞೆ ಬೆಳಗಲೆಂದೇ ಬಂದಂಥವರು-ವಿರಕ್ತರು, ಬಸವನನ್ನು ಹಾಸಿ, ಹೊದ್ದುವಂಥ ಬಸವಧೀರರ ಪಡೆಯೂ ಹೆಚ್ಚುತ್ತಾ ಸಾಗಿದೆ.
ಕೆಲವರಿಗಂತೂ ಈ ಎರಡು ಕಾಲಿನ ಸ್ವಾಮಿಗಳು ಇದುವರೆಗೆ ತಮ್ಮನ್ನು ಎಷ್ಟು ಮೂಢರನ್ನಾಗಿ ಮಾಡಿದ್ದಾರಲ್ಲ ಎಂಬ ಸಿಟ್ಟೂ ಇದೆ. ಅದಕ್ಕಾಗಿ ಕಲ್ಲಲ್ಲಿ ಹುಟ್ಟಿದವರ ಆಚರಣೆ ಜೋರು ಮಾಡಿದೆ-ಅನಿಸುತ್ತದೆ.
4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?
ಅವರಲ್ಲಿ ಸಂದೇಶ ಏನಿದೆ, ಮಣ್ಣು? ಮಹಾ ನೀಚತನ ಒಳಗಿಟ್ಟು- ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಕೊಟ್ಟಿ ಘೋಷಣೆಗಳಷ್ಟೇ.
(ಥೇಟ್ ವಿಪ್ರರಂತೆ, ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ ಎಂಬಂತೆ ತಮ್ಮ ಉದ್ಧಾರಕ್ಕೆ ಮಾತ್ರ…… ಜಯವಾಗಲಿ ಎಂಬ ಘೋಷಣೆ) ಆದರೆ ಬಸವಾದಿ ಶರಣರು “ಸಕಲ ಜೀವರಾಶಿಗಳಿಗೆ ಲೇಸನು ಬಯಸಿದವರು, ಹರಿಸಿದವರು.” ಶರಣರ ಸಂದೇಶಕ್ಕಿಂತ ಇವರಲ್ಲಿ ಹೆಚ್ಚಿನದೇನಿದೆ.
5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?
ಶರಣ ಎಂ.ಎಂ. ಕಲ್ಬುರ್ಗಿಯವರು, ಶರಣೆ ಗೌರಿ ಲಂಕೇಶ, ಶರಣ ಲಿಂಗಣ್ಣ ಸತ್ಯಂಪೇಟೆಯವರು, ಯಾರಿಂದ ಹುತಾತ್ಮರಾದರು? ಅವು ಯಾರ ಕೈಗಳು?
ಮೊನ್ನೆ ಮೊನ್ನೆ ನಮ್ಮದೇ ಲಿಂಗಾಯತ ಮಠದ ಮರಿಯಿಂದ ವಚನ ದರ್ಶನ ಸಂಪಾದಿಸಿದ್ದು ಇನ್ನೂ ಮರಿತಿಲ್ಲ. ಆ ಜನರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ- ಈ ಪೀಠಿಗಳು. ದೇಶಕ್ಕಾಗಿ ಹೋರಾಡಿದವರೇ ಬೇರೆ.
ಆಗ ಈ ಪುರೋಹಿತರು ಆಂಗ್ಲರಿಂದ ಬೇಡಿ, ಜಮೀನ್ದಾರರಾದರು, ಜಾಗೀರ್ದಾರರಾದರು. ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಅಪ್ಪಟ ದೇಶಾಭಿಮಾನಿಗಳಾದರು- ರಾಷ್ಟ್ರ ಸೇನೆ ಕಟ್ಟಿದರು.
ಅದು ಇಂದಿಗೂ ಮುಂದುವರಿದಿದೆ. ಅರಿವು-ಆಚಾರವಲ್ಲ. ಬರೀ ಬುದ್ಧಿವಂತಿಕೆ ಸಾಕು ಈ ಜನಕ್ಕೆ. ಒಳ್ಳೆಯತನ, ಸನ್ನಡತೆ ಯಾರಿಗೆ ಬೇಕಾಗಿದೆ. ಅಧಿಕಾರ ಬೇಕು, ಅಂಥ ಜನರು ಈ ಪೀಠಿಗಳ ಹತ್ತಿರ ಇದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಏನೆಂದರೆ ಈ ಪೀಠಿಗಳಿಗೂ ಅದು ಗೊತ್ತಿದೆ.
6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?
ಜನರೊಳಗಿನ ಮೌಢ್ಯ ಅವರ ಬಂಡವಾಳ. ಜನರಲ್ಲಿ ಇನ್ನೂ ಹೆಚ್ಚು ಬಸವ ಪ್ರಜ್ಞೆ ಮೂಡಬೇಕಿದೆ. 10 ಸಾವಿರ ಜನರಲ್ಲಿ 100 ಜನ ಬಸವನ ಹೊಸ ಭಕುತಿಯನ್ನು, ಸರಳತೆಯನ್ನು, ಶೋಷಣೆ ರಹಿತತೆಯನ್ನು ಅರಿತಿರಬಹುದು.
ಬಹಳ ಜನಕ್ಕೆ ಊದಿನ ಕಡ್ಡಿ ಹಚ್ಚಿ ಬೆಳಗಿದರೆ ಸಾಕು-ಅದೇ ಪೂಜೆ. ಕಾರಣ “ಕಳಬೇಡ ಕೊಲಬೇಡ……….”. ಈ ವಚನದ ಸಪ್ತ ಸೂತ್ರಗಳ ಆಚರಣೆ ಬೇಡ. ಅದು ಕಷ್ಟ ಅಲ್ಲ, ಸರಳ ಇದೆ ಎಂಬ ಎದೆಗಾರಿಕೆ ತೋರುವ ವಚನಗಳನ್ನು ಬಲ್ಲ, ಘಟ್ಟಿಯಾದ ‘ಗಣಾಚಾರ’ ಪಡೆ ತಯಾರಾಗಬೇಕಿದೆ.
ಗಣಾಚಾರ ಇಲ್ಲವಾದಲ್ಲಿ ಲಿಂಗಾಯತ ಉಳಿಯದು. ನಮ್ಮವರೇ ಕೆಲವರು- ಪ್ರೀತಿಸಬೇಕು, ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳುತ್ತಾರೆ. ಒಬ್ಬ ಸಿಖ್ಖ, ಒಬ್ಬ ಜೈನ್, ಒಬ್ಬ ಮುಸ್ಲಿಂ ಅವರ ಧರ್ಮದ ಬಗ್ಗೆ ಮಾತಾಡಿದರೆ ಮುಗಿಬೀಳುತ್ತಾರೆ. ಆ ಗುಣ, ಗತ್ತು, ಗೈರತ್ತು ನಮ್ಮಲ್ಲಿ ಬಾರದಿದ್ದಲ್ಲಿ ಧರ್ಮ ಹೇಗೆ ಉಳಿದೀತು. ಎಂದಿಗಿಂತ ಇಂದು ಗಣಾಚಾರ ಪಡೆ ಬಲಪಡಬೇಕಿದೆ.
ಇದು ಈ ಕೊಲೆ ಇಂದು ಗೌಪ್ಯವಾಗಿ ಏನೂ ಉಳಿದಿಲ್ಲ. ನಾಳೆ ಅವರೇ ಒಂದುದಿನ ನಾವೇಕೊಲೆಮಾಡಿರುವುದಾಗಿ ಹೇಳಿಕೊಳ್ಳಲು ಹಿಂಜರಿಯಲಾರರು, ನಾವುಗಳು ಜಾಗೃತರು ಆಗದಿದ್ದರೆ? ಇಂದು ನಾವುಗಳು ನೇರವಾಗಿ ಬೊಟ್ಟುಮಾಡಿ ಇವರ ಈ ಕುತಂತ್ರವನ್ನು ನೇರವಾಗಿ ಪ್ರತಿಭಟಿಸಬೇಕು ಅವರ ನೀಚತನವನ್ನು ಕೊನೆಗಾಣಿಸಬೇಕು. ಜಾಗೃತರಾಗಿ ಜಾಣರಾಗಿ. ಈ ವೖದಿಕಶಾಹಿಯ ಕುತಿಸಿತ ಬುದ್ದಿಯನ್ನು ಪ್ರಶ್ನೆ ಮಾಡಿದ ಏಕೖಕ ಧರ್ಮ ನಮ್ಮ ಲಿಂಗಾಯತ ಧರ್ಮ. ವಂದನೆಗಳೊಂದಿಗೆ