ಬಸವಕಲ್ಯಾಣ
ಕನ್ನಡದ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪಗೆ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ʻ2024 ರ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿʼ ಪ್ರಶಸ್ತಿ ಶುಕ್ರವಾರ ಪ್ರಧಾನ ಮಾಡಲಾಯಿತು.
ಪ್ರಶಸ್ತಿಯೂ ₹1 ಲಕ್ಷ ನಗದು, 10 ಗ್ರಾಂ. ಬಂಗಾರದ ಪದಕ ಹಾಗೂ ಫಲಕ ಒಳಗೊಂಡಿದೆ. ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ನೀಡಿದರು. ಶಾಸಕ ಶರಣು ಸಲಗರ, ಸಾಹಿತಿ ಮನು ಬಳಿಗಾರ, ಸಂಗಮೇಶ ಸವದತ್ತಿಮಠ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ.ಭಾಸ್ಕರ ಉಪಸ್ಥಿತರಿದ್ದರು.
ಪ್ರಶಸ್ತಿ ಪಡೆದ ನಂತರ ಭೈರಪ್ಪ ಮಾತನಾಡಿ, ‘ಎಲ್ಲರೂ ಇಷ್ಟಪಡುವ ಸಾಹಿತ್ಯವನ್ನೇ ನಾನು ರಚಿಸಿದ್ದೇನೆ. ಯಾವುದೇ ಒಂದು ಭಾಗದ ಭಾಷೆ ಅಥವಾ ಪರಂಪರೆಗೆ ಮಾತ್ರ ಮಹತ್ವ ನೀಡಿಲ್ಲ’ ಎಂದರು.