ಸಾಣೇಹಳ್ಳಿಯಲ್ಲಿ ಎಪ್ರೀಲ್ 13ರಿಂದ ‘ಮಕ್ಕಳ ಹಬ್ಬ’

ಸಾಣೇಹಳ್ಳಿ:

ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ‘ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ)ವನ್ನು ಆಯೋಜಿಸಲಾಗಿದೆ.

ಏಪ್ರಿಲ್ ೧೩ ರಿಂದ ೩೦ರವರೆಗೆ ನಡೆಯುವ ಈ ಶಿಬಿರದಲ್ಲಿ ಕೋಲಾಟ, ಚಿತ್ರಕಲೆ, ಮಣ್ಣಾಟ, ವೀರಗಾಸೆ, ಯೋಗಾಸನ, ರಂಗಾಟಗಳು, ದಿನಕ್ಕೊಂದು ಪದ್ಯ ರಚನೆ, ಮುಖವಾಡ ತಯಾರಿ, ಒಂದು ದಿನದ ಪ್ರವಾಸ, ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮಕ್ಕಳ ಸಿನೇಮಾ ವೀಕ್ಷಣೆ, ಮಕ್ಕಳ ತೇರು, ಪರಿಸರದ ಮೇಲಿನ ಉಪನ್ಯಾಸ, ೨ ಅಥವಾ ೩ ನಾಟಕಗಳ ತಯಾರಿ ಹಾಗೂ ಪ್ರದರ್ಶನ ಮುಂತಾದ ಚಟುವಟಿಕೆಗಳಿರುತ್ತವೆ.

ಶಿಬಿರದ ಅವಧಿಯಲ್ಲಿ ಮಕ್ಕಳು ಸಾಣೇಹಳ್ಳಿಯಲ್ಲಿಯೇ ಇರುವುದು ಕಡ್ಡಾಯವಾಗಿದ್ದು, ಅವರಿಗೆ ಊಟ-ವಸತಿಯ ಸೌಲಭ್ಯವಿದೆ. ೧೦ ರಿಂದ ೧೪ ವರ್ಷದ ವಯಸ್ಸಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು.

ಆಸಕ್ತರು ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿಗಳ ಮೂಲಕ ಸಂಪರ್ಕಿಸಬಹುದೆಂದು ಕಲಾಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ೯೪೪೮೩೯೮೧೪೪, ೯೯೭೨೦೦೭೦೧೫, ೯೬೬೩೧೭೭೨೫೪.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *