ಹೊಸಪೇಟೆ ನಗರದಲ್ಲಿ ಬಸವಮಯ ವಾತಾವರಣ ಸೃಷ್ಟಿಸಿದ ಅಭಿಯಾನ

ನಾಗರಾಜ ಗಂಟಿ
ನಾಗರಾಜ ಗಂಟಿ

ಗೌರಿ ಲಂಕೇಶ್ ಸಭಾಂಗಣ, ಕಲಬುರ್ಗಿ ವೇದಿಕೆಯಲ್ಲಿ ನಡೆದ ಅಭಿಯಾನ

ಹೊಸಪೇಟೆ

ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನದ ಹುತಾತ್ಮೆ ಗೌರಿ ಲಂಕೇಶ್ ಸಭಾಂಗಣ, ಹುತಾತ್ಮ ಡಾ: ಎಂ. ಎಂ. ಕಲಬುರ್ಗಿ ವೇದಿಕೆಯಲ್ಲಿ ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನ ನಡೆಯಿತು.

ಇಡೀ ದಿನ ಹೊಸಪೇಟೆ ನಗರದಲ್ಲಿ ಬಸವಮಯ ವಾತಾವರಣವನ್ನು ಸೃಷ್ಟಿಸಿ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಂಜೆ 3:30 ಕ್ಕೆ ಹೊಸಪೇಟೆ ನಗರದ ಬಸ್ ನಿಲ್ದಾಣದ ಮುಂದೆ ಬಸವ ಸಂಸ್ಕೃತಿ ಅಭಿಯಾನದ ಯಾತ್ರೆ, ವಚನ ವಿಜಯೋತ್ಸವಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಡಾ. ನಾಡೋಜ ಬಸವಲಿಂಗಪಟ್ಟದೇವರು, ಒಕ್ಕೂಟದ ಇತರೆ ಶ್ರೀಗಳು ಚಾಲನೆ ನೀಡಿದರು.

ಬಸ್ಟ್ಯಾಂಡ್ ಕೇಂದ್ರದ ವೃತ್ತದಿಂದ ವಿಶ್ವಗುರು ಬಸವೇಶ್ವರರ ವೃತ್ತದವರೆಗೆ ವಚನವಿಜಯ ಬಸವಯಾತ್ರೆ, ವೈಭವದಿಂದ ಸಮಾಳ ನಂದಿ ಕೋಲು, ಭಜನಾ ತಂಡ, ಸ್ಥಳೀಯ ಜಾನಪದ ಸುಡುಗಾಡು ಸಿದ್ದರ ಶಂಖ ಗಂಟೆ ನಾದ, ವಿವಿಧ ಶರಣರ ವೇಷ ಧರಿಸಿದ ಪುಟ್ಟ ಮಕ್ಕಳ ಶರಣ ದರ್ಶನ, ತಲೆಯ ಮೇಲೆ ವಚನ ಜ್ಞಾನದ ಬುತ್ತಿಯನ್ನು ಹೊತ್ತ ಪುರುಷ – ಮಹಿಳೆಯರು 12ನೇ ಶತಮಾನದ ಶರಣರು ತಲೆಯ ಮೇಲೆ ಹೊತ್ತ ವಚನ ಕಟ್ಟುಗಳಂತೆ ಭಾಸವಾಯಿತು.

ಜಿಲ್ಲೆಯ ಬಸವ ಅಭಿಮಾನಿಗಳ ಉತ್ಸಾಹ ಜಾನಪದ ಕಲೆಗಳಿಗೆ ಮನದೂಗಿ, ಸಮಾಳ ನಂದಿಕೊಳು ಬಸವ ಅಭಿಮಾನಿಗಳು ಕುಣಿದು ಆನಂದ ಭಾವದಿಂದ ಮೆರೆದರು. ಸಂಜೆ ಬಸವ ಅಭಿಯಾನದ ಯಾತ್ರೆ ಜಿಲ್ಲೆಯ ನೋಡುಗರ ಕಣ್ಮನ ಸೆಳೆದು, ನಂತರ ಸಾರ್ವಜನಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾರ್ವಜನಿಕ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಾಣೇಹಳ್ಳಿ ಶಿವ ಸಂಚಾರದ ಕಲಾವಿದರು ನೆರವೇರಿಸಿದರು.

ಕಾರ್ಯಕ್ರಮದ ಸ್ವಾಗತವನ್ನು ವಿಜಯನಗರ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಆಧ್ಯಾಪಕರು, ಚಿಂತಕರಾದ ಡಾ. ಕೆ. ರವೀಂದ್ರನಾಥ ಅವರು ಮಾಡಿದರು.

ಪ್ರಾಸ್ತಾವಿಕ ನುಡಿ:

ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸಂಚಾಲಕರಾದ ಡಾ: ಟಿ. ಎಚ್. ಬಸವರಾಜ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಅಮುಲಾಗ್ರವಾದ ಬದಲಾವಣೆ ತಂದ ಮಹಾನಾಯಕರು. ಇಡೀ ವಿಶ್ವವೇ ಮೆಚ್ಚುವಂತಹ ಪ್ರಜಾಸತಾತ್ಮಕವಾಗಿ ಜನರಿಗೆ ಅನುಕೂಲಕರ ಜೀವನವನ್ನು ರೂಪಿಸಿ, ಒಬ್ಬ ವ್ಯಕ್ತಿಯು ಸಹ ಮಹಾದೇವನು ಆಗಬಲ್ಲ ಎಂದು ಸರಳಗನ್ನಡತೆಯಿಂದ ಲೋಕವನ್ನು ಉದ್ದರಿಸಿದ ಮಹಿಮಾ ಪುರುಷ ಬಸವಣ್ಣನವರು.

ಇಂತಹ ಸದುಪಯೋಗ ಅರಿವಿನ ಕೆಲಸ ಮಾಡುತ್ತಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಈ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕೆಂದು ವಿನಂತಿಸಿ, ಅಭಿಯಾನಕ್ಕೆ ಕೈಜೋಡಿಸಿದ ಸರ್ವರಿಗೂ ವಂದನೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಉಪನ್ಯಾಸವನ್ನು ನೀಡುತ್ತಾ, ಇಡೀ ವಿಶ್ವದ ಇತಿಹಾಸದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನ ನೀಡಿದ ಸ್ಥಳ ಎಂದರೆ ಅದು ಕರ್ನಾಟಕದ 12ನೇ ಶತಮಾನದ ಬಸವ ಯುಗ. ಒಬ್ಬ ಸ್ತ್ರೀಯು ಸಹ ಸಾಹಿತ್ಯ ರಚನೆ ಮಾಡಲಿಕ್ಕೆ ಪ್ರೇರಣೆ ನೀಡಿದ ಯುಗವೇ ಶರಣ ಯುಗ, ಎಂದು ಅತ್ಯಂತ ವಿಸ್ತಾರವಾಗಿ ಉಪನ್ಯಾಸ ನೀಡಿದರು.

ನಂತರ ಬಸವ ತತ್ವಪೀಠ ಚಿಕ್ಕಮಗಳೂರಿನ ಡಾ. ಬಸವ ಮರುಳಸಿದ್ದ ಮಹಾಸ್ವಾಮಿಗಳು ‘ಸ್ಥಾವರ ಜಂಗಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ, ಸ್ಥಾವರ ಎಂದರೆ ಚಲನೆ ಇಲ್ಲದ್ದು. ಜಂಗಮ ಎಂದರೆ ಚಲನಾಶೀಲವಾದದ್ದು. ಸಮಾಜದಲ್ಲಿ ಯಾವುದೇ ನಿಂದನೆ ಅಪಮಾನಗಳಿಗೆ ಕಿವಿಗೊಡದೆ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಾಗುವುದೇ ಜಂಗಮತ್ವಕ್ಕೆ ಉದಾಹರಣೆಯಾಗಿದೆ. ನಮ್ಮ ನಮ್ಮ ಲಾಂಛನಗಳನ್ನು ಸ್ಥಾವರ ಮಾಡದೆ ಅವುಗಳ ತಾತ್ವಿಕತೆ ತಿಳಿದುಕೊಂಡು ಅನುಸರಿಸಿದಾಗ ಮಾತ್ರ ಜಂಗಮವಾಗುತ್ತದೆ ಎಂದರು.

ನಂತರದಲ್ಲಿ ಶರಣ ಸಾಹಿತಿ ರಂಜಾನ್ ದರ್ಗಾ ಅವರ ‘ಬಸವ ಬೆಳಗು’ ಎಂಬ ಪುಸ್ತಕವನ್ನು ಸಂಡೂರಿನ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬ ಇನ್ನೊಂದು ಪುಸ್ತಕವನ್ನು ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಶ್ರೀ ಬಿಡುಗಡೆಗೊಳಿಸಿದರು.

ನಂತರದಲ್ಲಿ ಆಶೀರ್ವಚನವನ್ನು ದಯಪಾಲಿಸಿದ ಸಂಡೂರಿನ ವಿರಕ್ತ ಮಠದ ಪ್ರಭುಗಳು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಬಸವ ತತ್ವವನ್ನು ಬಿತ್ತಿ ಬೆಳೆದ ಜಾಗೃತ ಸ್ಥಾನಗಳು. ಪ್ರೌಢದೇವರ ಕಾಲದಲ್ಲಿ ಬಸವ ಸಂಸ್ಕೃತಿ ಪುನರುತ್ಥಾನ ಸರ್ವರಿಗೂ ಪ್ರೇರಣದಾಯಕ, ಈ ನೆಲದಲ್ಲಿ ಹಲವಾರು ಮಹನೀಯರು ಬಸವ ತತ್ವವನ್ನು ಉಳಿಸಿ ಬೆಳೆಸಿದ್ದಾರೆ. ಅಂತವರಲ್ಲಿ ಕೊಟ್ಟೂರು ಸ್ವಾಮಿಮಠದ ಡಾ. ಸಂಗನಬಸವ ಮಹಾಸ್ವಾಮಿಗಳು, ಜೋಳದರಾಶಿ ದೊಡ್ಡನಗೌಡರು, ಗೊಗ್ಗ ಚೆನ್ನಬಸಯ್ಯನವರು, ಇನ್ನು ಅನೇಕ ಮಹನೀಯರಾಗಿದ್ದಾರೆ ಎಂದರು.

ಬಸವ ಸಂಸ್ಕೃತಿ ಅಭಿಯಾನದ ಪ್ರಯುಕ್ತ ಜಿಲ್ಲಾಮಟ್ಟದಲ್ಲಿ ವಿವಿಧ ಶಾಲೆಯ ಕಾಲೇಜುಗಳಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬ ವಿಷಯದ ಕುರಿತು ಹಲವಾರು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರು ಪೂಜ್ಯರಿಂದ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ಬಹುಮಾನವನ್ನು ಸ್ವೀಕರಿಸಿದರು.

ನಂತರ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನವನ್ನು ದಯಪಾಲಿಸುತ್ತಾ, ಕೊಟ್ಟೂರುಸ್ವಾಮಿ ಮಠ ವಿಶೇಷವಾಗಿ ವಿಜಯನಗರ ಜಿಲ್ಲಾ ಮತ್ತು ಸುತ್ತಮುತ್ತ ಬಸವತತ್ವ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು. ಇನ್ನು ಅನೇಕ ಶರಣ ಸಂಸ್ಕೃತಿ ಬಸವ ಸಂಸ್ಕೃತಿ ಬಿತ್ತುವಲ್ಲಿ ಯೋಜನೆಯ ಮುಂದಿನ ದಿನಮಾನಗಳಲ್ಲಿ ಮಠದ ವತಿಯಿಂದ ನೆರವೇರುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವ ಸಂಚಾರ ತಂಡದ ವತಿಯಿಂದ ಜಂಗಮದಡೆಗೆ ಎಂಬ ನಾಟಕ ನೆರೆದಿರುವ ಜನರನ್ನು ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಬಾಲ್ಕಿಯ ಡಾ: ಬಸವಲಿಂಗ ಪಟ್ಟದೇವರು, ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ವಿರತೀಶಾನಂದ ಸ್ವಾಮಿಗಳು, ಗುರುಬಸವ ಪಟ್ಟದೇವರು, ಮಹಾಂತ ಪ್ರಭುಗಳು, ಬಾಚಿ ಗೊಂಡನಹಳ್ಳಿಯ ತೋಂಟದಾರ್ಯ ಶಾಖ ಮಠದ ಶಿವಮಹಾಂತ ಸ್ವಾಮಿಗಳು, ಬಸವ ತತ್ವದ ಅನೇಕ ಶ್ರೀಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಅಧ್ಯಕ್ಷರಾದ ಮಹಾಬಲೇಶ್ವರರೆಡ್ಡಿ, ಸಂಚಾಲಕರಾದ ಡಾ: ಬಿ ಎಚ್ ಬಸವರಾಜ, ಮಾವಿನಹಳ್ಳಿ ಬಸವರಾಜ, ಮಧುರಚೆನ್ನ ಶಾಸ್ತ್ರಿ, ಅಕ್ಕಿ ಮಲ್ಲಿಕಾರ್ಜುನ, ವಿಜಯನಗರ ಕಾಲೇಜಿನ ಪ್ರಾಂಶುಪಾಲರಾದ ಪ್ರಭುಗೌಡ, ಬಸವ ಬಳಗದ ಅಧ್ಯಕ್ಷರಾದ ಬಸವಕಿರಣ್, ಡಾಕ್ಟರ್ ಅಜಯ್ ತಾಂಡೂರ್, ಯುವರಾಜ್, ಡಾ. ನಂದೀಶ್ವರ ದಂಡೆ, ಮೀನಾಕ್ಷಿ ಜಂಗಮನಿ, ಸೌಭಾಗ್ಯ ಲಕ್ಷ್ಮಿ, ಡಾ: ಅಕ್ಮಹಾದೇವಿ. ಎಸ್ ಎಂ ಕಾಶಿನಾಥಯ್ಯ, ಮಹಾಂತೇಶ್ ಪಿಕೆ ಹಳ್ಳಿ, ಎಲ್. ಬಸವರಾಜ ಹಡಪದ ಬಸವರಾಜ, ಬಸಾಪುರ ಬಸವರಾಜ, ಗೊಗ್ಗ ಚನ್ನಬಸವರಾಜ, ನೀಲಕಂಠನಗೌಡ, ಕೆ ರವಿಶಂಕರ, ಬಿ.ಜಿ. ಈಶ್ವರಪ್ಪ ,ವಿಜಯ್ ಸಿಂದಗಿ, ಅಶ್ವಿನಿ ಕೊತ್ತಂಬರಿ, ಆರ್‌.ಪಿ. ಪ್ರಕಾಶ್, ಕೆ. ಗಂಗಾಧರಪ್ಪ, ಎನ್. ಜಡಿಯಪ್ಪ, ಏನ್. ಮಲ್ಲಿಕಾರ್ಜುನ, ಎಲ್ ಬಸವರಾಜ, ತಿಪ್ಪಣ್ಣ ಹನುಮನ ಗೌಡ, ಪಾಲಾಕ್ಷ ರೆಡ್ಡಿ, ಬಸವರಾಜ ಅಕ್ಕಿ, ಬಿ ಎಂ ಅನ್ನಪೂರ್ಣ, ಸ್ವಾತಿ ಅವರಾದಿ, ಮಂಜುಳಾ ಮಹಾಂತರೆಡ್ಡಿ, ಚೈತ್ರ ಸತ್ಯಂಪೇಟೆ, ಅಕ್ಕನ ಬಳಗ, ಬಸವ ಬಳಗ, ಕಾರ್ಯಕ್ರಮದಲ್ಲಿ ಬಸವ ಅಭಿಮಾನಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು, ಯುವಕರು ಹಿರಿಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *