ಸಾಣೇಹಳ್ಳಿ ಶ್ರೀಗಳ ಬೆಂಬಲಕ್ಕೆ ಬಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ ಶ್ರೀಗಳ ವಿರುದ್ಧ ಅವಹೇಳನಕಾರಿ ಲೇಖನ ಬರೆದಿದ್ದ ವಿಶ್ವೇಶ್ವರ ಭಟ್ ಅವರನ್ನು ತೀವ್ರವಾಗಿ ಖಂಡಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸಾಣೇಹಳ್ಳಿ ಶ್ರೀಗಳ ಬೆಂಬಲಕ್ಕೆ ಬಂದಿದೆ.

ವಿಶ್ವೇಶ್ವರ ಭಟ್ ತಮ್ಮದೇ ಆದ ವಿಶ್ವವಾಣಿ ದಿನಪತ್ರಿಕೆಯಲ್ಲಿ ಸಾಣೆಹಳ್ಳಿ ಶ್ರೀಗಳ ಕುರಿತು ಹಗುರವಾಗಿ ಮಾತನಾಡಿರುವುದು ಭಟ್ಟರ ಪತ್ರಿಕಾ ಧರ್ಮಕ್ಕೂ ಮತ್ತು ವ್ಯಕ್ತಿತ್ವಕ್ಕೂ ಶೋಭೆ ತರುವಂತಹದ್ದಲ್ಲ, ಎಂದು ಒಕ್ಕೂಟ ಹೇಳಿದೆ.

ಹೊಳಲ್ಕೆರೆ ಕಾರ್ಯಕ್ರಮದಲ್ಲಿ ಹೇಳಿದ್ದ ಸಾಣೇಹಳ್ಳಿ ಶ್ರೀಗಳ ಮಾತುಗಳು ನೂರಕ್ಕೆ ನೂರು ಸತ್ಯವಾಗಿವೆ. ಪೂಜ್ಯರು ಆಯುಷ್ಯದುದಗಲಕ್ಕೂ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಅಂಗಾಯತರಲ್ಲಿ ಜಾಗೃತಿ ಉಂಟು ಮಾಡುವ ಜಂಗಮಕಾರ್ಯ ಮಾಡುತ್ತಾ ಬಂದಿದ್ದಾರೆ. ಅವರು ಹೇಳಿರುವ ಮಾತುಗಳನ್ನು ಹೊಸದೆನಲ್ಲ, ಎಂದು ಒಕ್ಕೂಟದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಪೂಜ್ಯ ಶ್ರೀ ನಾಡೋಜ ಬಸವಲಿಂಗ ಪಟ್ಟದ್ದೇವರು ಲಿಂಗಾಯತ ಧರ್ಮಗುರುಗಳಿಗೆ ತಮ್ಮ ಅನುಯಾಯಿಗಳಿಗೆ ಏನು ಹೇಳಬೇಕೆಂಬ ಸ್ವಾತಂತ್ರ್ಯವೂ ಇಲ್ಲವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಕಳುಹಿಸಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪತ್ರಿಕಾ ಪ್ರಕಟಣೆ

‘ಲಿಂಗಾಯತ’ ಸ್ವತಂತ್ರ ಧರ್ಮ ಎಂಬುದು ಶತಸಿದ್ದ

“ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ ‘ಲಿಂಗಾಯತ’ ಸ್ವತಂತ್ರ ಧರ್ಮ ಎಂಬುದು ಶತಸಿದ್ದ. ಅದರಲ್ಲಿ ಯಾವುದೇ ಸಂಶಯ, ಸಂದೇಹವಿಲ್ಲ. ಇದನ್ನು 12ನೇ ಶತಮಾನದ ಶರಣರಿಂದ ಇತ್ತೀಚಿನ ಸಂಶೋಧಕರು, ಸಾಹಿತಿಗಳು, ಮಠಾಧೀಶರು ಮತ್ತು ಈ ನಾಡಿನ ಬಹುದೊಡ್ಡ ಸಮಾಜದ ಅನುಯಾಯಿಗಳು ನಂಬಿಕೊಂಡು ಬಂದಿದ್ದಾರೆ.

ಇದನ್ನೆ ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಒಂದು ವೇದಿಕೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅವರ ಮಾತುಗಳು ನೂರಕ್ಕೆ ನೂರು ಸತ್ಯವಾಗಿವೆ. ಪೂಜ್ಯರು ಆಯುಷ್ಯದುದಗಲಕ್ಕೂ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಲಿಂಗಾಯತರಲ್ಲಿ ಜಾಗೃತಿ ಉಂಟು ಮಾಡುವ ಜಂಗಮಕಾರ್ಯ ಮಾಡುತ್ತಾ ಬಂದಿದ್ದಾರೆ. ಅವರು ಹೇಳಿರುವ ಮಾತುಗಳನ್ನು ಹೊಸದೆನಲ್ಲ.

ಆದರೆ ವಿಶ್ವೇಶ್ವರ ಭಟ್ ಅವರು ತಮ್ಮದೇ ಆದ ವಿಶ್ವವಾಣಿ ದಿನಪತ್ರಿಕೆಯಲ್ಲಿ ಸಾಣೆಹಳ್ಳಿ ಶ್ರೀಗಳ ಈ ಹೇಳಿಕೆಯ ನೆಪಮಾಡಿಕೊಂಡು ಅವರ ಕುರಿತು ಹಗುರವಾಗಿ ಮಾತನಾಡಿರುವುದು ಭಟ್ರರ ಪತ್ರಿಕಾ ಧರ್ಮಕ್ಕೂ ಮತ್ತು ವ್ಯಕ್ತಿತ್ವಕ್ಕೂ ಶೋಭೆ ತರುವಂತಹದ್ದಲ್ಲ.

ವಿಶ್ವೇಶ್ವರ ಭಟ್‌ರು ಸಾಣೇಹಳ್ಳಿ ಶ್ರೀಗಳ ಕುರಿತು ಬರೆದ ಲೇಖನ ಶೀರ್ಷಿಕೆಯಲ್ಲಿ ಗೊಡ್ಡುಪುರಾಣ ಎಂಬ ಶಬ್ದ ಬಳಕೆ ಮಾಡಿದ್ದಾರೆ. ಲಿಂಗಾಯತರದು ಪುರಾಣ ಸಂಸ್ಕೃತಿ ಅಲ್ಲದೆ, ವಚನ ಸಂಸ್ಕೃತಿ ಆಗಿದೆ. ವಚನಗಳು ಯಾವ ಚಿಂತನೆಗಳನ್ನು ಹೇಳುತ್ತವೆಯೋ ಅದನ್ನೆ ಸಾಣೇಹಳ್ಳಿಯ ಶ್ರೀಗಳು ಧೈರ್ಯವಾಗಿ ಹೇಳಿದ್ದಾರೆ.

ಅದನ್ನು ಅಪವ್ಯಾಖ್ಯಾನ ಮಾಡುವ ಮೂಲಕ ಭಟ್‌ರು ಈ ನೆಪದಲ್ಲಿ ತಮ್ಮ ಗಣೇಶ ಪುರಾಣವನ್ನು ಮುಂದೆವರೆಸಿದ್ದಾರೆ. 2017 ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮವೆಂಬ ಹೋರಾಟ ಇಡೀ ದೇಶದಲ್ಲಿಯೇ ಸಂಚಲನವನ್ನುಂಟು ಮಾಡಿರುವುದು ಪತ್ರಕರ್ತನಾದ ವಿಶ್ವೇಶ್ವರ ಭಟ್ ಅವರಿಗೆ ಗೊತ್ತಿಲ್ಲವೆ? ಕರ್ನಾಟಕ ಸರಕಾರ ನ್ಯಾಯಮೂರ್ತಿ ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯನ್ನು ಅಂಗಾಯತ ಧರ್ಮ ಸ್ವತಂತ್ರ ಧರ್ಮವೆಂಬ ವರದಿ ನೀಡಿತ್ತು.

ಅದನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಸಿಫಾರಸ್ಸು ಕೂಡ ಮಾಡಿದೆ. ಆ ಸಂದರ್ಭದಲ್ಲಿ ಸ್ವತಂತ್ರ ಧರ್ಮ ಹೋರಾಟದ ಪರವಾಗಿ ಬರೆದ ವಿಶ್ವೇಶ್ವರ ಭಟ್‌ರು ಇದೀಗ ಈ ರೀತಿ ಮಾತನಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುಂತಹದ್ದಲ್ಲ. ಭಟ್‌ರು ನಮ್ಮ ನಾಡಿನ ಹಿರಿಯ ಪತ್ರಕರ್ತರಾಗಿ ಒಬ್ಬ ಪ್ರತಿಷ್ಠಿತ ಮಠಾಧೀಶರ ಕುರಿತು ಈ ರೀತಿಯ ಭಾಷೆ ಬಳಸಿರುವುದು ಎಷ್ಟರ ಮೆಟ್ಟಿಗೆ ಸರಿ ಎಂಬುದು ಅವರೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಲಿಂಗಾಯತ ಧರ್ಮಗುರುಗಳಿಗೆ ತಮ್ಮ ಅನುಯಾಯಿಗಳಿಗೆ ಏನು ಹೇಳಬೇಕೆಂಬ ಸ್ವಾತಂತ್ರ್ಯವೂ ಇಲ್ಲವೆ? ಕೆಲವರು ಲಿಂಗಾಯತ ಹೋರಾಟ ನಿಂತುಹೋಗಿದೆ ಎಂಬ ಭ್ರಮೆಯಿಂದ ಲಿಂಗಾಯತ ಸಮಾಜದ ಮೇಲೆ ಅನೇಕ ರೀತಿಯ ಆಕ್ರಮಣಗಳನ್ನು ಮಾಡುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನಗಳು ಎಂದಿಗೂ ಫಲಿಸುವುದಿಲ್ಲ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಎಂದಿಗೂ ನಿಲ್ಲುವುದಿಲ್ಲ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.”

Share This Article
3 Comments
  • ಲಿಂಗಾಯತ ಧರ್ಮದ ಬಗ್ಗೆ ಪೂಜ್ಯ ಶ್ರೀ ಪಂಡಿತಾರಾಧ್ಯ ಮಹಾಸ್ವಾಮಿಗಳ ನಿಲುವನ್ನು ಬೆಂಬಲಿಸುತ್ತೇನೆ.

  • ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು ಬುದ್ಧಿ ಮಠಾಧೀಶ್ವರ ಪರಿಷತ್ತಿನಿಂದ ಒಂದು ಪ್ರೆಸ್ ಮೀಟ್ ಆಗಬೇಕು ಅಂತ ನನ್ನ ಅನಿಸಿಕೆ ಬುದಿ

  • ಲಿಂಗಾಯತ ಮಠಾಧೀಶರ ಒಕ್ಕೂಟವು ವಾಚನಾನಂದ ಸ್ವಾಮೀಜಿಯ ನಿರಂತರ ಲಿಂಗಾಯತ ಧರ್ಮದ ವಿರೋಧೀ ಹೇಳಿಕೆಗಳು ಮತ್ತು ಸಂದರ್ಶನಗಳಿಗೆ ಕಡಿವಾಣ ಹಾಕುವ ಅವಶ್ಯಕತೆಯಿದೆ. ಅವರು ಸತತವಾಗಿ ಧರ್ಮ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

Leave a Reply

Your email address will not be published. Required fields are marked *