ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಗೋಷ್ಠಿ ಇಲ್ಲದಿದ್ದರೂ ಗೊ.ರು.ಚನ್ನಬಸಪ್ಪನವರು ಸುಮ್ಮನಿರುವುದು ಬೇಸರದ ಸಂಗತಿ ಎಂದು ಗುಣತೀರ್ಥದ ಕಲ್ಯಾಣ ಮಹಾಮನೆ ಬಸವಪ್ರಭು ಸ್ವಾಮೀಜಿಯವರು ಅಪಸ್ವರ ಎತ್ತಿದ್ದಾರೆ.
ಬಸವ ಕಲ್ಯಾಣ
ಕನ್ನಡ ಸಾಹಿತ್ಯದ ಆತ್ಮವೆಂದರೆ ವಚನ ಸಾಹಿತ್ಯ ಅಂತಹ ವಚನಸಾಹಿತ್ಯದ ಪಿತಾಮಹ ಎಂದರೆ ಬಸವಣ್ಣನವರು. ಹನ್ನೆರಡನೆ ಶತಮಾನದಲ್ಲಿ ಇವನಾರವ ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಇವನಮ್ಮವ ಎಂದು ಯಾವುದೇ ಜಾತಿ ಮತ ಪಂಥ ಪಂಗಡ ಭೇದವಿಲ್ಲದೆ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯದೊಂದಿಗೆ ಜಗಬದುಕಲಿ ಜನ ಬದುಕುವ ತತ್ವವನ್ನು ನೀಡಿ, ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನು ಸ್ಥಾಪಿಸಿ ತನ್ಮೂಲಕ ವಿಶ್ವ ಸಮಾನತೆಯನ್ನು ಸಾರಿದವರು ಬಸವಣ್ಣನವರು.
ಕನ್ನಡದಲ್ಲಿಯೇ ವಚನಗಳನ್ನು ಬರೆದು ಕನ್ನಡದ ಭಾಷೆಯನ್ನು ದೇವ ಭಾಷೆಯನ್ನಾಗಿಸಿದವರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು ಗುರು ಬಸವಾದಿ ಶರಣರು ಇಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಕನ್ನಡ ನೆಲದ ರಾಯಭಾರಿ, ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಗೌರವ ನೀಡಿದೆ, ಪ್ರತಿಯೊಂದು ಕಛೇರಿಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿದೆ.
ಹೀಗಿರುವಾಗ ಈ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕದಿರುವುದು ಹಾಗೂ ಸಮ್ಮೇಳನದಲ್ಲಿ ಶರಣರಿಗೆ ಸಂಬಂಧಿಸಿದ ಒಂದು ಗೋಷ್ಠಿಯನ್ನೂ ಏರ್ಪಡಿಸದೇ ಅಗೌರವ ತೋರಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಜ್ಞಾನವೋ ಅಥವಾ ವೈದಿಕ ಮನಸ್ಸುಗಳ ಕುತಂತ್ರವೋ ಎಂದು ಪ್ರಶ್ನಿಸಿದ್ದಾರೆ.
ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು ಅವರು ಬಸವಾದಿ ಪ್ರಮಥರ ಬಗ್ಗೆ ಅಪಾರ ಗೌರವವನ್ನು ಹೊಂದಿರುವವರು, ಅನುಭವ ಮಂಟಪ ನಿರ್ಮಾಣದ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಅವರು ಈ ಬಗ್ಗೆ ಗಮನ ಹರಿಸದೇ ಇರುವುದು ಮತ್ತು ಅವರ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಗೋಷ್ಠಿಯೂ ಇಲ್ಲದಿರುವುದು ಬೇಸರದ ಸಂಗತಿ.
ಬಸವಣ್ಣನವರು ಕುವೆಂಪು ಮತ್ತು ಕನ್ನಡ ನೆಲದ ಎರಡು ಕಣ್ಣುಗಳು ಅವರನ್ನೇ ಕಡೆಗಣಿಸಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಭಂಡತನದ ಪರಮಾವಧಿ ಎಂದರು. ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಎತ್ತೆಚ್ಚುಕೊಂಡು ಈ ಎರಡು ಮಹಾನ್ ಚೇತನಗಳ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಯಲ್ಲಿ ಹಾಕುವಂತೆ ಹಾಗೂ ಸಮ್ಮೇಳನಗಳಲ್ಲಿ ವಚನಸಾಹಿತ್ಯದ ಕುರಿತಾದ ಗೋಷ್ಟಿಗಳನ್ನು ಏರ್ಪಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೂಚಿಸಿ ಆದೇಶ ಹೊರಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ಹಾಕದೇ ಹೋದರೆ ಕಸಾಪ ನಡೆಸುವ ಸಮ್ಮೇಳನದಲ್ಲಿ ಬಸವಪರ ಸಂಘಟನೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳಿಂದ ಕಪ್ಪುಬಟ್ಟೆ ಪ್ರದರ್ಶಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಪ್ರಶ್ನೆ ಕೇಳುವ ಅವಶ್ಯಕತೆ ಇದೆಯೇ?
ನಿಮ್ಮ ಮಾತಿನ ಅರ್ಥ ಏನು
ಇದೊಂದು ದೊಡ್ಡ ಕುತಂತ್ರವೇ ಆಗಿದೆ. ಲಿಂಗಾಯತರು ಹೆಚ್ಚೆತ್ತುಕೊಳ್ಳಬೇಕಿದೆ