ಹೊಸದುರ್ಗ
ಸಾಣೇಹಳ್ಳಿ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಹೊಸ ದುರ್ಗ ಠಾಣೆಯಲ್ಲಿ ದೂರು ನೀಡಲಾಗಿದೆ.
ವಿದ್ಯಾರ್ಥಿಯ ಸಾವಿನಲ್ಲಿ ಸ್ವಾಮೀಜಿ ಮತ್ತು ಶಾಸಕ ಬಿಜಿ ಗೋವಿಂದಪ್ಪನವರ ಕೈವಾಡವಿದೆ ಎಂದು ಆರೋಪಿಸಿದ್ದ ಪೋಸ್ಟ್ ಅನ್ನು ಮೋಹನ್ ಬಾಬು ಅಲಿಯಾಸ್ ಮೋಹನ್‌ಕುಮಾರ್ ಎಂ ಎಲ್ ಎಂಬವರ ಖಾತೆಯಿಂದ ಮಾಡಲಾಗಿತ್ತು.
ಸಾಣೇಹಳ್ಳಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಗುರುಪಾದೇಶ್ವರ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪವನ್ ಎಂಬಾತ ಬೈಕ್‌ನಲ್ಲಿ ಹೊಗುವಾಗ ಪಾಳ್ಯದ ಹಳ್ಳಿ-ಶೆಟ್ಟಿಹಳ್ಳಿ ಗೇಟ್ ಬಿದ್ದು ಮೃತಪಟ್ಟಿದ್ದನು. ಈ ಬಗ್ಗೆ ಹೊಸದುರ್ಗ ಠಾಣೆ ಯಲ್ಲಿ ಅಕ್ಟೋಬರ್ 4 ದೂರು ದಾಖಲಾಗಿತ್ತು.
ಆದರೆ ವೈರಲ್ ಆಗಿರುವ ಪೋಸ್ಟಿನಲ್ಲಿ “10ನೇ ತರಗತಿಯ ವಿದ್ಯಾರ್ಥಿಯ ಬರ್ಬರ ಹತ್ಯೆ, ಗುಟ್ಟು ಬಿಟ್ಟು ಕೊಡದ ಸ್ವಾಮೀಜಿ” ಎಂದೆಲ್ಲಾ ಆರೋಪವಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸದಿದ್ದರೆ ಮಠಕ್ಕೆ ಬೀಗ ಜಡಿಯುವುದಾಗಿ ಬೆದರಿಕೆ ಕೂಡ ಇದೆ.
ಈ ಹಿನ್ನಲೆಯಲ್ಲಿ ಹೆಬ್ಬಳ್ಳಿ ಗ್ರಾಮದ ಕುಬೇಂದ್ರಪ್ಪ ಅವರು ಮೋಹನ್ ಬಾಬು ಎಂಬವವನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು FIR ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
Correct.