ಬಸವಕಲ್ಯಾಣ:
ಬಸವಣ್ಣ ಈ ನೆಲದ ಸಾಮಾಜಿಕ ನ್ಯಾಯದ ಹರಿಕಾರ, ವಚನಗಳ ಆಶಯಗಳೇ ಸಂವಿಧಾನ ಒಳಗೊಂಡಿದೆ. ಬಸವ ತತ್ವದಲ್ಲಿ ಬುದ್ಧ, ಅಂಬೇಡ್ಕರ, ಗಾಂಧಿ ಇದ್ದಾರೆ, ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು ಬಸವ ಧರ್ಮ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತರು ಹಾಗೂ ಚಿಂತಕರಾದ ದಿನೇಶ ಅಮಿನಮಟ್ಟು ಹೇಳಿದರು.
ಮನುವಾದ ಒಪ್ಪುವವರು ಬಸವಣ್ಣನವರನ್ನು ಒಪ್ಪುವುದಿಲ್ಲ. ಬಸವ ಸಿದ್ಧಾಂತ, ಹೋರಾಟ, ಶರಣ ಸಂಘಟನೆ ಬಸವ ಚಳುವಳಿ ಒಳಗೊಂಡಿದೆ. ಅನ್ಯಾಯ, ತಾರತಮ್ಯ, ಸುಳ್ಳು, ವಂಚನೆ ವಿರುದ್ಧ ಧ್ವನಿ ಎತ್ತಿದ್ದರೆ ಅಲ್ಲಿ ಬಸವಣ್ಣನಿದ್ದಾನೆ. ಜಾತಿ, ಮತ, ಪಂಥಗಳಿಗೆ ಕೊರತೆ ಇಲ್ಲ ಆದರೆ ಶರಣರ ಮೌಲ್ಯಗಳು ಎತ್ತಿ ಹಿಡಿದಾಗ ಎಲ್ಲಾ ವರ್ಗಕ್ಕೂ ಸಮಾನತೆ ಸಿಗಲೂ ಸಾಧ್ಯ, ಇಂದು ಬಸವತತ್ವದ ಕುರಿತು ವ್ಯಾಪಕ ಚರ್ಚೆ ನಡೆಯಬೇಕು ಎಂದರು.
ನಗರದ ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯ ಏಳನೇ ದಿನದಂದು ನಡೆದ ಬಸವ ಚಳುವಳಿ ಅಂದು, ಇಂದು, ಮುಂದು ಗೋಷ್ಠಿಯಲ್ಲಿ ಅನುಭಾವ ನೀಡಿದರು.
ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಅಂದು ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿ ನಡೆಸುವ ಮೂಲಕ ಲಿಂಗಾಯತ ಎಂಬ ಹೊಸ ಧರ್ಮ ಕಟ್ಟಿದ್ದರು. ಶರಣರು ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ದೇವರ ಕಲ್ಪನೆ ಹೀಗೆ ಎಲ್ಲಾ ರಂಗಗಳಲ್ಲಿ ಬದಲಾವಣೆ ತಂದರು. ಕ್ರಿಯೇಯಲ್ಲದ ಜ್ಞಾನ ಪೊಳ್ಳು ಎಂದು ಹೇಳಿದವರು ಶರಣರು. ಜಗತ್ತಿನ ಎಲ್ಲಾ ಕ್ರಾಂತಿಗಳ ತಾಯಿ ಕಲ್ಯಾಣ ಕ್ರಾಂತಿ ಇಂದು ಸಮಾಜದಲ್ಲಿ ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆ ಎಂದರು.

ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು
ಮಾಜಿ ಎಂಎಲ್‌ಸಿ ವಿಜಯಸಿಂಗ್, ಅಧ್ಯಕ್ಷತೆ ವಹಿಸಿಕೊಂಡಿದ್ದ ಸಾಹಿತಿ ಡಾ. ಸೋಮನಾಥ ಯಾಳವಾರ, ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಸಿಂಡಿಕೇಟ್ ಸದಸ್ಯ ಸಿದ್ಧಪ್ಪಾ ಮೂಲಗೆ, ಮಾತನಾಡಿದರು. ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ, ಬಸೇಪ್ರ ಕಲಬುರಗಿಯ ರಾಜಶೇಖರ ಯಂಕಂಚಿ, ಕಂಟೆಪ್ಪಾ ದಾನಾ, ಚನ್ನಬಸಪ್ಪಾ ವಡ್ಡನಕೇರೆ, ಲಕ್ಷ್ಮಿಕಾಂತ ಜ್ಯಾಂತೆ, ಮಲ್ಲಿಕಾರ್ಜುನ ಪಾಟೀಲ ಮಂಠಾಳ, ರೋಷನ ಶಾಶೆಟ್ಟೆ ಇತರರಿದ್ದರು.
ರಾಷ್ಟ್ರೀಯ ಬಸವ ದಳ ತಾಲೂಕಾಧ್ಯಕ್ಷ ರವಿಂದ್ರ ಕೊಳಕೂರ ಸ್ವಾಗತಿಸಿದರೆ, ದತ್ತಾತ್ರೆ ಬಾಂದೆಕರ್ ನಿರೂಪಿಸಿದರು. ನಾಗನ್ನಾಥ ಮುಕ್ತಾ ಭಕ್ತಿ ದಾಸೋಹಗೈದರು.
ದಿನೇಶ ಅಮಿನಮಟ್ಟು ಬುದ್ದ,ಬಸವ,ಅಂಬೇಡ್ಕರ ಹಾಗೂ ಕುವೆಂಪು ವಿಚಾರವಾದಿಗಳು
Fine.