ಅಕ್ಕನ ಬದುಕನ್ನ ಸರಳವಾಗಿ ನಿರೂಪಿಸುವ ʼಶರಣಸತಿ ಲಿಂಗಪತಿʼ ನಾಟಕ

ಸಾಣೇಹಳ್ಳಿ

ರಂಗಭೂಮಿಯು ತಪಸ್ಸು ಇದ್ದ ಹಾಗೆ. ಕಾಟಾಚಾರಕ್ಕಲ್ಲದೆ ಸಂಪೂರ್ಣವಾಗಿ ತೊಡಗಿಸಿಕಂಡರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಇಲ್ಲಿನ ಎಸ್‌.ಎಸ್‌.ಒಳಾಂಗಣ ರಂಗಮಂದಿರದಲ್ಲಿ ಮಂಗಳವಾರ ʼಶರಣಸತಿ ಲಿಂಗಪತಿʼ ನಾಟಕ ಪ್ರದರ್ಶನದ ನಂತರ ನಡೆದ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ʼಶರಣಸತಿ ಲಿಂಗಪತಿʼ ನಾಟಕದಲ್ಲಿ ಅಕ್ಕಮಹಾದೇವಿಯ ಬದುಕಿನ ಕಥನವನ್ನು ಸರಳವಾಗಿ ನಿರೂಪಿಸಲಾಗಿದೆ. ವಚನಗಳ ಮೂಲಕ ಅವುಗಳ ವಿಚಾರಗಳನ್ನು ತಿಳಿಸುವ ನಾಟಕವಿದು. ಈ ನಾಟಕವನ್ನು ನಮ್ಮ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ರಚಿಸಿದ್ದು, ತರಳಬಾಳು ಕಲಾ ಸಂಘ, ಸಾಣೇಹಳ್ಳಿ ಶಿವಕುಮಾರ ಕಲಾ ಸಂಘ ಹಾಗೂ ಶಿವಸಂಚಾರದ ತಂಡದಿಂದ ಸಾವಿರಾರು ಪ್ರಯೋಗಗಳಾಗಿವೆ. ಅಲ್ಲದೆ ಇದೇ ನಾಟಕವು ಹಿಂದಿಯಲ್ಲೂ ದೇಶದ ೪೦ ಕಡೆ ಪ್ರದರ್ಶನಗಳಾಗಿವೆ.

ಚಂಡಿಗಡದಲ್ಲಿ ನಾಟಕದ ಪ್ರದರ್ಶನವಾದಾಗ ಪ್ರೇಕ್ಷಕರು ಕಿವಿಗಡಚಿಕ್ಕುವ ಹಾಗೆ ಚಪ್ಪಾಳೆ ತಟ್ಟಿದರು. ಅಕ್ಕಮಹಾದೇವಿ ಪಾತ್ರವನ್ನು ಮುಸ್ಲಿಂ ಹುಡುಗಿ ಮಾಡಿದ್ದು ಎಂದು ಗೊತ್ತದಾಗ ಪ್ರೇಕ್ಷಕರು ಭಾವುಕರಾದರು. ಅಲ್ಲಿನ ಸರ್ಕಾರವು ಕಲಾಸಂಘಕ್ಕೆ ೨ ಲಕ್ಷ ರೂಪಾಯಿ ಕಾಣಿಕೆಯಾಗಿ ನೀಡಿತು ಎಂದು ಸ್ಮರಿಸಿದರು.

ಅತಿಥಿಯಾದ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್‌ ತಿಪಟೂರು ಮಾತನಾಡಿ, ಸಾಣೇಹಳ್ಳಿ ಶ್ರೀಗಳು ರಂಗಶಿಕ್ಷಣದ ಮೂಲಕ ವೈಚಾರಿಕಪ್ರಜ್ಞೆ ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಜಿ.ಮೂಳೆ ವೇದಿಕೆ ಮೇಲಿದ್ದರು.

ಇದಕ್ಕೂ ಮೊದಲು ಬೆಂಗಳೂರಿನ ರಂಗವಿನೂತನ ಟ್ರಸ್ಟ್‌ ʼಶರಣಸತಿ ಲಿಂಗಪತಿʼ ನಾಟಕವನ್ನು ಪ್ರಸ್ತುತಪಡಿಸಿತು. ಮಾಲತೇಶ ಬಡಿಗೇರ ನಿರ್ದೇಶಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *