ಸಾಣೇಹಳ್ಳಿ
‘ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟಿ ಪೂಜಾ ಗಾಂಧಿ ಇಂದು ಬೆಳಗ್ಗೆ ಶ್ರೀಮಠದಲ್ಲಿ ಶಿವ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳವಾಗಿ ಬದುಕಿನ ಪಾಠ ಕಲಿಸಿರುವುದು ಶರಣ ಸಂಸ್ಕೃತಿಯ ವೈಶಿಷ್ಟತೆ, ಎಂದರು.
“ಅದೇ ರೀತಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ವಿಚಾರಗಳನ್ನು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಪಾದಯಾತ್ರೆಯ ಪ್ರಣಾಳಿಕೆಯಲ್ಲಿ ಸರಳವಾಗಿ ಬರೆದಿದ್ದಾರೆ. ಅದನ್ನು ಓದಿ ಸಾರ್ಥಕವಾದ ಜೀವನ ಹೇಗೆ ನಡೆಸಬೇಕೆಂದು ಕಲಿಯಬಹುದು.
ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳವಾಗಿ ಬದುಕಿನ ಪಾಠ ಕಲಿಸಿರುವುದು ಶರಣ ಸಂಸ್ಕೃತಿಯ ವೈಶಿಷ್ಟತೆ

ಪಾದಯಾತ್ರೆಯ ಉದ್ದೇಶ ಜನ ಜಾಗೃತಿಗೊಳಿಸುವುದು. ಇದರಿಂದ ನನ್ನ ಮನ ಜಾಗೃತಿಯೂ ಆಗಿದೆ. ಪಾದಯಾತ್ರೆ ಬಹಿರಂಗವಾಗಿ ಶುರುವಾಗಿ ಅಂತರಂಗದಲ್ಲಿ ಮುಕ್ತಾಯವಾಗಲಿ,” ಎಂದು ಪೂಜಾ ಗಾಂಧಿ ಹಾರೈಸಿದರು.
ಪಾದಯಾತ್ರೆಯ ಉದ್ದೇಶ ಜನ ಜಾಗೃತಿಗೊಳಿಸುವುದು.
ಇದರಿಂದ ನನ್ನ ಮನ ಜಾಗೃತಿಯೂ ಆಗಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶ್ರೀಗಳು ಬಸವಣ್ಣ, ಅಮುಗೆ ರಾಯಮ್ಮನವರ ವಚನಗಳನ್ನು ಉಲ್ಲೇಖಿಸಿ ಕನ್ನಡದಲ್ಲಿ ಮಾತನಾಡಿದ ಪೂಜಾ ಗಾಂಧಿಯವರನ್ನು ಪ್ರಶಂಸಿಸಿ ಅವರು ಪಂಜಾಬಿನವರು ಎಂದು ನಮಗೆ ಅನಿಸಲಿಲ್ಲ, ಪಾದಯಾತ್ರೆಯನ್ನು ಮನಸ್ಸಿನ ಯಾತ್ರೆ ಎಂದು ಅವರು ವರ್ಣಿಸಿರುವುದು ಸೂಕ್ತವಾಗಿದೆ ಎಂದರು.
“ಇಂದು ಸಮಾಜ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಅದಕ್ಕೆ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕಾರಣಗಳಂತಹ ಐದು ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಪಾದಯಾತ್ರೆ ನಡೆಯುತ್ತಿದೆ.

ಬದಲಾವಣೆ ತರುವ ಪ್ರಯತ್ನ ಪಾದಯಾತ್ರೆಗೆ ಸೀಮಿತವಾಗದೆ ಪ್ರತಿ ಊರಿನಲ್ಲೂ ಸರ್ವೋದಯ ಸಂಘ ರಚನೆಯಾಗಿ ಜನರಲ್ಲಿ ಈ ಐದು ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ನಿರಂತರ ಕೆಲಸವಾಗಬೇಕು,” ಎಂದರು.
ಈ ದಿಟ್ಟಿನಲ್ಲಿ ಸಾಣೇಹಳ್ಳಿಯಲ್ಲಿ 12 ಯುವಕರಿಂದ ಸರ್ವೋದಯ ಸಂಘದ ರಚನೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು.
ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮೀಜಿ, ಮುರುಘಾ ಮಠ ಬಸವ ಕುಮಾರ ಸ್ವಾಮೀಜಿ ಮತ್ತು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈಗ ಪಾದಯಾತ್ರೆ ಶುರುವಾಗಿದೆ.