ಸರ್ವೋದಯ ಪಾದಯಾತ್ರೆಯ ಕೊನೆಯ ದಿನ
ಸಾಣೇಹಳ್ಳಿಯಿಂದ ಶುರುವಾದ ಸರ್ವೋದಯ ಪಾದಯಾತ್ರೆಯ ನಾಲ್ಕನೇ ಮತ್ತು ಕೊನೆಯ ದಿನ. ಚನ್ನಗಿರಿಯಿಂದ ಹೊರಟಿದೆ, ಸಂತೇಬೆನ್ನೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಸ್ವಾತಂತ್ರ್ಯ ಹೋರಾಟದಂತೆಯೇ ಸರ್ವೋದಯ ಚಳುವಳಿ ನಡೆಯಬೇಕು: ಸಾಹಿತಿ ಪ್ರಕಾಶ್ ಅರಸ್
ಪಂಡಿತಾರಾಧ್ಯ ಶ್ರೀಗಳು ಕ್ರಾಂತಿಕಾರಕ ಗುರುಗಳು: ಲೀಲಾ ಸಂಪಗಿ
ಬುಕ್ಕಾಂಬುದಿ ಗ್ರಾಮದಲ್ಲಿ ಸರ್ವೋದಯ ಪಾದಯಾತ್ರೆಯ ಬೃಹತ್ ಸಭೆ
ಜನವರಿ 28ರ ಕಾರ್ಯಕ್ರಮ
ಇಂದು ಬೆಳಗೆ ಅಜ್ಜಂಪುರದಿಂದ ಹೋರಾಟ ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ ಸುಮಾರು 8 km ದೂರ ಸಾಗಿಬಂದಿದೆ. ಈ ದಿನದ ಮಧ್ಯಾಹ್ನದ ಸಭೆ ಬುಕ್ಕಾಂಬುದಿ ಊರಿನಲ್ಲಿ.
ಎರಡು ಉಪನ್ಯಾಸಗಳು, ಸ್ವಾಮೀಜಿಯವರ ಆಶೀರ್ವಚನ ಮತ್ತು ‘ಒಕ್ಕಲಿಗರು ಒಕ್ಕಿದರೆ ಊರೆಲ್ಲಾ ನಕ್ಕೀತು’ ಎಂಬ ಬೀದಿ ನಾಟಕ ನಡೆಯಲಿದೆ. ಊಟ, ವಿಶ್ರಾಂತಿಯ ನಂತರ ಮತ್ತೆ 3 ಗಂಟೆಗೆ ಪಾದಯಾತ್ರೆ ಹೊರತು ಸಂಜೆ ತಾವರಕೆರೆಯಲ್ಲಿ ಸಭೆ ನಡೆಸಿ ತಂಗಲಿದೆ.
ಹೊಸ ಸಂವಿಧಾನ ರಚಿಸುವ ಪ್ರಯತ್ನ ಖಂಡನೀಯ: ಪಾಂಡೋಮಟ್ಟಿ ಶ್ರೀ
ಸರ್ವೋದಯ ಪಾದಯಾತ್ರೆಯ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ
ಹಿಂದೂ ರಾಷ್ಟ್ರದ ಸನಾತನ ಸಂವಿಧಾನ ವಿರೋಧಿಸಿ: ಸಾಣೇಹಳ್ಳಿ ಶ್ರೀ
ಹಳ್ಳಿಹಳ್ಳಿಗಳಲ್ಲಿ ಸಂಭ್ರಮದ ಸ್ವಾಗತ (ವಿಡಿಯೋ)
ಹಳ್ಳಿಹಳ್ಳಿಗಳಲ್ಲಿ ಜನರು ಸಂಭ್ರಮದಿಂದ ಪಾದಯಾತ್ರಿಗಳನ್ನು ಸ್ವಾಗತಿಸುತ್ತಿದ್ದಾರೆ, ಪಾನಕ, ಫಲಾಹಾರ ನೀಡುತ್ತಿದ್ದಾರೆ. ಮಂಜುನಾಥಪುರದಲ್ಲಿ ಸ್ವಾಮೀಜಿಯವರಿಗೆ ಹಾರ ಹಾಕಿ ಮುಸ್ಲಿಂ ಬಾಂಧವರಿಂದ ಸುಸ್ವಾಗತ.
ಪಾದಯಾತ್ರೆಯಲ್ಲಿ ಸುಮಾರು 200 ಜನರು ಭಾಗಿ (ವಿಡಿಯೋ)
ಪಾದಯಾತ್ರೆಯಲ್ಲಿ ಸುಮಾರು 200 ಜನರು ಭಾಗವಹಿಸುತ್ತಿದ್ದಾರೆ. ಹಲವಾರು ವಾಹನಗಳು, ಟ್ಯಾಬ್ಲೋಗಳು ಜೊತೆಗಿವೆ. 72 ವರ್ಷದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮತ್ತು ಇತರ ಪೂಜ್ಯರು ಯಾತ್ರಿಗಳ ಜೊತೆ ಹೆಜ್ಜೆಯಿಡುತ್ತಿದ್ದಾರೆ.
ಪಾದಯಾತ್ರೆ ಚಿತ್ರಗಳು




ಇವು ಇಲ್ಲಿಯವರೆಗೆ ಬಸವ ಮೀಡಿಯಾದಲ್ಲಿ ಬಂದಿರುವ ವರದಿಗಳು. ಈಗ ಸಾಣೇಹಳ್ಳಿಯಿಂದ-ಸಂತೇಬೆನ್ನೂರಿನವರಿಗೆ ಪಾದಯಾತ್ರೆ ಶುರುವಾಗಿದೆ. ನಾಲ್ಕು ದಿನಗಳ ಕಾಲ 75 ಕಿಮಿ ದೂರವನ್ನು ಪಾದಯಾತ್ರಿಗಳು ಸವೆಸಲಿದ್ದಾರೆ.
ಪಾದಯಾತ್ರೆ ಬಹಿರಂಗವಾಗಿ ಶುರುವಾಗಿ ಅಂತರಂಗದಲ್ಲಿ ಮುಕ್ತಾಯವಾಗಲಿ: ಪೂಜಾ ಗಾಂಧಿ
ನಟಿ ಪೂಜಾ ಗಾಂಧಿ ಅವರಿಂದ ಶಿವ ಧ್ವಜಾರೋಹಣ
ಇಂದು ಬೆಳಗೆ ಶ್ರೀಮಠದಲ್ಲಿ ನಡೆದ ‘ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ’ಯ ಉದ್ಘಾಟನಾ ಕಾರ್ಯಕ್ರಮದ ವಿಡಿಯೋ