ವಚನ ದರ್ಶನ ಪುಸ್ತಕದ ಆರಂಭಿಕ ಎಂಟು ಲೇಖನಗಳನ್ನು ಓದಿದ್ದೇವೆ.
ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಿರುಚುವ ಯತ್ನ ನಡೆದಿದೆ. ವೇದ, ಉಪನಿಷತ್, ಸನಾತನ ಧರ್ಮ ಇತ್ಯಾದಿಗಳನ್ನು ವಿಜೃಂಭಿಸುವ ಕಾರ್ಯ ಉದ್ಧೇಶಪೂರ್ವಕವಾಗಿ ನಡೆದಿದೆ.
ಇದಕ್ಕೆ ಮುಖಪುಟ ಸಾಕ್ಷಿ ನುಡಿಯುವುದು. ವೈದಿಕ ಪರಂಪರೆಯ ಹುನ್ನಾರ ಎದ್ದು ತೋರುವುದು. ಈ ಪುಸ್ತಕದ ಬಗ್ಗೆ ಪ್ರಚಾರ ಕೊಡುವ ಬದಲು ಬಸವ ಸಿದ್ಧಾಂತ, ಲಿಂಗಾಯತ ಧರ್ಮದ ಜಾಗೃತಿಯನ್ನು ಸಮಾಜದಲ್ಲಿ ಮೂಡಿಸುವ ವ್ಯವಸ್ಥಿತ ಕಾರ್ಯ ನಡೆಯಬೇಕು.
ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು