ಬಸವ ಅನುಯಾಯಿಗಳನ್ನು ‘ತಾಲಿಬಾನ್’ ಎಂದು ಅವಮಾನಿಸಿರುವುದು ಖಂಡನಾರ್ಹ

ಸಾಣೇಹಳ್ಳಿ

ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ‘ಸುವರ್ಣ ನ್ಯೂಸ್’ನಲ್ಲಿ ಬಸವ ಅನುಯಾಯಿಗಳನ್ನು ‘ತಾಲಿಬಾನ್’ಗಳು ಎನ್ನುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ತಂದುಕೊಂಡಿದ್ದಾರೆ. ಬಸವಾನುಯಾಯಿಗಳನ್ನು ಅವಮಾನಿಸಿದ್ದಾರೆ.

ಕೃಷಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಅವರ ಸಾಧನೆ ಮೆಚ್ಚಿಕೊಂಡವರಲ್ಲಿ ನಾವೂ ಒಬ್ಬರು. ಹಾಗಾಗಿ ಅವರನ್ನು ನಮ್ಮ ನಾಟಕೋತ್ಸವಕ್ಕೆ ಆಹ್ವಾನಿಸಿದ್ದೆವು. ಅರ್ಥಪೂರ್ಣ ಮಾತುಗಳನ್ನಾಡಿ ಎಲ್ಲ ಪ್ರೇಕ್ಷಕರ ಗೌರವಕ್ಕೆ ಪಾತ್ರರಾಗಿದ್ದರು. ಈಗ ಯಾರದೋ ಕಪಿಮುಷ್ಠಿಗೆ ಸಿಲುಕಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ.

ಬಸವಾನುಯಾಯಿಗಳು ‘ದಯವಿಲ್ಲದ ಧರ್ಮ ಅದಾವುದಯ್ಯಾ’ ಎಂದು ನಂಬಿದವರು. ಸಕಲಜೀವಾತ್ಮರಿಗೆ ಒಳಿತು ಬಯಸುವವರು. ಸದುವಿನಯದ ಮೃದುಹೃದಯಿಗಳು. ಅಂತಹ ಸಾತ್ವಿಕರನ್ನು ‘ತಾಲಿಬಾನ್’ಗಳೆಂದು ಅವಮಾನಿಸಿರುವುದು ಖಂಡನಾರ್ಹ.

ಅವರು ತಮ್ಮ ಮಾತಿನ ಮೇಲೆ ಅದೇಕೆ ಹತೋಟಿ ಕಳೆದುಕೊಂಡರೋ? ಶ್ರೀಗಳವರು ಬಸವಾನುಯಾಯಿಗಳ ಪ್ರತಿಭಟನೆಗೆ ಮುನ್ನವೇ ಅವರ ಕ್ಷಮೆ ಕೇಳಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವ ವಿವೇಕ ತೋರುವರೆಂದು ನಂಬಿದ್ದೇವೆ.

Share This Article
3 Comments
  • ಸೌಮ್ಯವಾದ ಸ್ವಾಗತಾರ್ಹ ಪ್ರತಿಕ್ರಿಯೆ. ಕನ್ನೇರಿ ಸ್ವಾಮೀಜಿಯವರು ಧನಾತ್ಮಕವಾಗಿ ಪ್ರತಿಕ್ರಿಯಿಸಬಹುದು ಎಂದು ಆಶಿಸುತ್ತೇನೆ.

  • It seems he has lost balance on his mind
    Wether he knows the difference between Taleban and Basava dharma
    By his irrational statements,he will create enemies himself
    Better he correct himself and should ask apology from Lyngayth community

  • ಸಾಣೆಹಳ್ಳಿ ಶ್ರೀಗಳು ತುಂಬಾ ಒಳ್ಳೆಯ ಸಲಹೆ ನೀಡಿದ್ದಾರೆ. ಬಲ್ಲವರ ಮಾತೆ ಹೀಗೆ. ಅವರ ಮಾತಿಗೆ ಬೆಲೆಕೊಟ್ಟು ಕನ್ಹೇರಿ ಶ್ರೀಗಳು ನಡೆದುಕೊಳ್ಳುವದು ಉತ್ತಮ! ಇದೇ ರೀತಿ ಎಲ್ಲಾ ಬಸವತತ್ವದ ಪೂಜ್ಯ ರು, ಹಿರಿಯರು ಅವರಿಗೆ ಸಲಹೆ ಕೊಟ್ಟು ಬಸವಾಭಿಮಾನಿಗಳು ತಮ್ಮ ಸಹನೆಯ ಮಿತಿ ಮೀರುವದರೊಳಗೆ ಪರಿಸ್ಥಿತಿ ಸರಿಯಾದರೆ ಒಳ್ಳೆಯದು ಎನಿಸುತ್ತದೆ. ಶರಣು, ಶರಣಾರ್ಥಿಗಳು!

Leave a Reply

Your email address will not be published. Required fields are marked *