ಸಾಣೇಹಳ್ಳಿ ಶ್ರೀಗಳ ವಿರುದ್ಧ ದಾವಣಗೆರೆ ಪೊಲೀಸ್‌ ಠಾಣೆಯಲ್ಲಿ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಹಿಂದುಗಳ ಭಾವನೆಗೆ ನೋವುಂಟು ಮಾಡಿರುವುದಕ್ಕೆ ಸಾಣೇಹಳ್ಳಿ ಶ್ರೀಗಳ ವಿರುದ್ಧ ದೂರು ನೀಡಲಾಗಿದೆ ಎಂದು ಹಿಂದು ಹಿತರಕ್ಷಣಾ ಸಮಿತಿ ಸಂಚಾಲಕ ಸತೀಶ ಪೂಜಾರಿ ಸೋಮವಾರ ಹೇಳಿದರು.

ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, “ಉತ್ತಮ ಮಠದಲ್ಲಿರುವ, ಸಮಾಜವನ್ನು ತಿದ್ದಬೇಕಾದ ಸ್ಥಾನದಲ್ಲಿರುವ ಸ್ವಾಮೀಜಿ ಹೊಳಲ್ಕೆರೆ ಸಮಾರಂಭದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ದಾವಣಗೆರೆ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ, ಎಂದು ಪೂಜಾರಿ ತಿಳಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು ಕೆಲವರು ಬಂದು ದೂರು ಕೊಟ್ಟಿದ್ದಾರೆ ಆದರೆ FIR ಧಾಖಲಾಗಿಲ್ಲ ಎಂದು ಹೇಳಿದರು.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಕೂಡ ಗಣೇಶ ಪೂಜೆ ಲಿಂಗಾಯತ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದ ಸಾಣೇಹಳ್ಳಿ ಶ್ರೀಗಳ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಸಂಬರಗಿ ಆರೋಪಿಸಿದ್ದರು.

ಅದಕ್ಕೆ ಪ್ರತಿಯಾಗಿ ಸಾಣೇಹಳ್ಳಿ ಶ್ರೀಗಳು “…ಈಗಲೂ ಹೇಳುತ್ತೇನೆ ಗಣಪತಿ ಪೂಜಿಸುವುದು ನಮ್ಮ ಸಂಸ್ಕೃತಿಯಲ್ಲ,” ಎಂದು ಪುನರುಚ್ಚರಿಸಿದ್ದರು.

Share This Article
3 Comments
  • I support the views of Swamiji.
    Under the Constitution every one has a fundamental right to express his openion. Swamiji has uphold the Sharan Philosophy, expounded by Basaveshwara.
    Believing and Upholding the principales of an accepted religion is not an offence, but a right. Religious phanatics are always trying to mislead the people to downgrade the Basava Dharma.
    It is rightly said that barking is the congenital attribute of some of the species in the world. Let them bark Basava Pranit Lingayat Carvan will move on.

  • ಹಿಂದೂ ಮೂಲಭೂತವಾದಿಗಳ ಗದ್ದಲ ಮತ್ತೆ ಶುರುವಾಗಿದೆ

Leave a Reply

Your email address will not be published. Required fields are marked *