ಹೊಸದುರ್ಗ :
ಪುರಸ್ಕಾರ ಸಾರ್ಥಕವಾಗಬೇಕಾದರೆ ತಂದೆ ತಾಯಿಗಳನ್ನು ಪ್ರೀತಿಸಬೇಕು ಮತ್ತು ಅವರು ಅನುಸರಿಸಿದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಾಣೆ ಹಳ್ಳಿ ಶ್ರೀಗಳು ಕರೆ ನೀಡಿದರು. ನಮಗೆ ಪುರಸ್ಕಾರ ಬಂದಿರುವುದು ತಂದೆ ತಾಯಿಗಳು ಕೊಟ್ಟ ಸಂಸ್ಕಾರದಿಂದ ಎಂಬುದನ್ನು ನಾವು ಮರೆಯಬಾರದು, ಎಂದು ಶ್ರೀಗಳು ಸಾಣೆ ಹಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಹೇಳಿದರು.
ಅವರು ಬಿರುದು ನೀಡಿ ಗೌರವಿಸಿದರಷ್ಟೇ ಸಾಲದು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ನುಡಿದರು.
ಇದರಿಂದ ಪ್ರಶಸ್ತಿ ಮೌಲ್ಯ ಜಾಸ್ತಿ ಆಗುತ್ತದೆ ಎಂದರು. ಸಾಂಸ್ಕೃತಿಕ ಗುಮ್ಮಟ ಪ್ರಶಸ್ತಿ ಮೊತ್ತ 50,000 ರೂಪಾಯಿಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ ರಮೇಶ್, ಶರತ್ ಕುಮಾರ್ ಪಾಟೀಲ್ ಮುಂತಾದವರು ಇದ್ದರು.