ಸಾಣೇಹಳ್ಳಿ
ಸಾಣೇಹಳ್ಳಿ ಶ್ರೀಮಠದ ವತಿಯಿಂದ ‘ಆನು ಒಲಿದಂತೆ ಹಾಡುವೆ: ಬಸವಾದಿ ಶಿವಶರಣರ ವಚನಗಳ ಕಂಠಪಾಠ ಸ್ಪರ್ಧೆ’ ಏರ್ಪಡಿಸಲಾಗಿದೆ.
ಸ್ಪರ್ಧಿಗಳು ಪಠ್ಯ ನೋಡದೆ 500 ವಚನಗಳನ್ನು ಹಾಡಬಹುದು ಇಲ್ಲವೇ ಗದ್ಯರೂಪದಲ್ಲಿ ಹೇಳಬಹುದು. ಲಿಂಗ, ಜಾತಿ, ವಯೋಭೇದವಿಲ್ಲದೆ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.
ಸ್ಪರ್ಧೆಯಲ್ಲಿ 1ನೆಯ ಬಹುಮಾನ ರೂಪಾಯಿ 30,000=00, 2ನೆಯ ಬಹುಮಾನ 25,000=00, 3ನೆಯ ಬಹುಮಾನ 20,000=00, 4ನೆಯ ಬಹುಮಾನ 15,000=00, 5ನೆಯ ಬಹುಮಾನ 10,000=00 ನಿಗದಿಪಡಿಸಲಾಗಿದೆ.
ಸ್ಪರ್ಧೆಯಲ್ಲಿ ನೋಂದಾಯಿಸಲು ಮತ್ತು ಇತರ ವಿವರಗಳಿಗಾಗಿ ಬಳಸಬೇಕಾದ ಲಿಂಕ್:
https://forms.gle/D6y9wu56rY8RQEdr7