ಶರಣ, ವಚನ ಕೃತಿಗಳಿಗೆ ‘ಸಂಗಮಸಿರಿ ಪ್ರಶಸ್ತಿ’

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ನೀಡುವ ೨೦೨೫ ನೇ ಸಾಲಿನ “ಸಂಗಮಸಿರಿ ಪ್ರಶಸ್ತಿ” ಯನ್ನು ‘ಶರಣರು ಹಾಗೂ ವಚನ ಸಾಹಿತ್ಯದ ಪೂರಕ ಕೃತಿಗಳಿಗೆ’ ಈ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ ಮಾಹಿತಿಯನ್ನು ಹಾಗೂ ಸಾಹಿತ್ಯದ ವಿವರಗಳನ್ನು ಅಕ್ಟೋಬರ್ 15 ರ ಒಳಗೆ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಮನೆ ನಂಬರ್ ೩೩೮, ಬಸವ ಬನಸಿರಿ, ಗೋಕುಲ್ ರಸ್ತೆ ಹುಬ್ಬಳ್ಳಿ 580030 ಗೆ ಕಳಿಸಲು ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ತಿಳಿಸಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ಹಾಗೂ ಫಲಕ ಹೊಂದಿದೆ. ಮಾಹಿತಿಗೆ 9060933596, 99864 76733 ಗೆ ಸಂಪರ್ಕಿಸಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *