ಕರ್ನಾಟಕದ ಹಬ್ಬ ಎಂದ ಮೇಲೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕರ ಚಿತ್ರ ಹಾಕದೆ ಇರುವುದು ಎಲ್ಲಾ ಕನ್ನಡಿಗರಿಗೆ ತೋರಿರುವ ಅಗೌರವ.
ರಾಣೆಬೆನ್ನೂರು
ನಿನ್ನೆಯಿಂದ ಇಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಕರ್ನಾಟಕ ವೈಭವ ವೈಚಾರಿಕ ಹಬ್ಬ’ದ ಮಹಾದ್ವಾರವನ್ನು ನೋಡಿದಾಗ ಶ್ರೀ ಕೃಷ್ಣ, ಶ್ರೀ ರಾಮಚಂದ್ರರ ದೊಡ್ಡ ಚಿತ್ರಗಳು, ರಾಮಕೃಷ್ಣರ, ವಿವೇಕಾನಂದರ, ಚೈತನ್ಯರ ಚಿತ್ರಗಳು ಕಾಣಿಸಿದವು. ಆದರೆ ಉದ್ಧೇಶಪೂರ್ವಕವಾಗಿಯೇ ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿತ್ರ ಕೈ ಬಿಟ್ಟಿದ್ದಾರೆ ಎಂದು ಅನಿಸಿತು.
ಬಸವಣ್ಣನವರು ಕರ್ನಾಟಕದ ಅಧಿಕೃತ ಸಾಂಸ್ಕೃತಿಕ ನಾಯಕರು. 900 ವರ್ಷಗಳಿಂದ ಕನ್ನಡಿಗರನ್ನು ರೂಪಿಸಿರುವ ಅತಿ ದೊಡ್ಡ ಶಕ್ತಿ, ಐತಿಹಾಸಿಕವಾಗಿ ಕನ್ನಡ ಪ್ರದೇಶದ ಅತ್ಯಂತ ಪ್ರಭಾವಶಾಲಿ ನಾಯಕ.
‘ಕರ್ನಾಟಕ ವೈಭವ ವೈಚಾರಿಕ ಹಬ್ಬ’ ರಾಷ್ಟ್ರದ ಉಪರಾಷ್ಟ್ರಪತಿಗಳೇ ಬಂದು ಉದ್ಘಾಟಿಸುವಷ್ಟು ದೊಡ್ಡ ಕಾರ್ಯಕ್ರಮ. ಸಾವಿರಾರು ಜನರನ್ನು ಸೇರಿಸಲು ಪ್ರಯತ್ನಿಸುತ್ತಿರುವ ಇವರಲ್ಲಿ ಬಸವಣ್ಣನವರ ಬಗ್ಗೆ ಉದಾಸೀನವೇಕೆ?
ಸಾವಿರಾರು ಜನರನ್ನು ಸೇರಿಸಲು ಪ್ರಯತ್ನಿಸುತ್ತಿರುವ ಇವರಲ್ಲಿ ಬಸವಣ್ಣನವರ ಬಗ್ಗೆ ಉದಾಸೀನವೇಕೆ?
ಇದಕ್ಕೆ ಉತ್ತರ ಬೇಕಾದರೆ ಇದರ ಆಯೋಜಕರು ಯಾರು ಎಂದು ನೋಡಬೇಕು.
‘ಕರ್ನಾಟಕ ವೈಭವ ವೈಚಾರಿಕ ಹಬ್ಬ’ ಸಂಘ ಪರಿವಾರದ ಸಂಸ್ಥೆಗಳಾದ ಪರಿವರ್ತನಾ, ಪ್ರಜ್ಞಾ ಪ್ರವಾಹಗಳು ಆಯೋಜಿಸಿರುವ ಕಾರ್ಯಕ್ರಮ. ಇದಕ್ಕೆ ಬರುತ್ತಿರುವವರು ಬಿ.ಎಲ್. ಸಂತೋಷ್, ಜಗದೀಪ್ ಧನಕರ್, ಥಾವರಚಂದ್ ಗೆಹಲೋತ್, ಬಸವರಾಜ ಪಾಟೀಲ್ ಸೇಡಂ, ಬಸವರಾಜ ಬೊಮ್ಮಾಯಿ, ಎಚ್. ಡಿ. ಕುಮಾರಸ್ವಾಮಿ, ಯಧುವೀರ ಒಡೆಯರ್, ಚಕ್ರವರ್ತಿ ಸೂಲಿಬೆಲೆಯಂತಹ ಬಿಜೆಪಿ, ಆರೆಸ್ಸೆಸ್, ಸಂಘ ಪರಿವಾರದ ನಾಯಕರುಗಳು ಮಾತ್ರ. ಇದರ ದಿವ್ಯಸಾನಿಧ್ಯವನ್ನು ವಹಿಸುತ್ತಿರುವವರು ಇವರೆಲ್ಲರ ನೆಚ್ಚಿನ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳು.

ಅದಕ್ಕೆ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಹುಡುಕಿದರೂ ಸಾಂಸ್ಕೃತಿಕ ನಾಯಕ ಬಸವಣ್ಣನವರು ಕಾಣಿಸುವುದಿಲ್ಲ.
ಈ ಕಾರ್ಯಕ್ರಮದ ಅಹ್ವಾನ ಪತ್ರಿಕೆಯಲ್ಲಾಗಲಿ, ಮಹಾದ್ವಾರ, ಮುಖ್ಯ ವೇದಿಕೆಗಳಲ್ಲಾಗಲಿ, ಬಸವಣ್ಣನವರ ಚಿತ್ರ ಅಥವಾ ಯಾವುದೇ ಕಾರ್ಯಕ್ರಮದಲ್ಲಾಗಲಿ ಬಸವಣ್ಣನವರ ಸುಳಿವಿಲ್ಲ. ಇದು ಸಂಘ ಪರಿವಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿಲ್ಲವೆಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಇದು ಸಂಘ ಪರಿವಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿಲ್ಲವೆಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಕರ್ನಾಟಕದ ಹಬ್ಬ ಎಂದ ಮೇಲೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕರ ಚಿತ್ರ ಹಾಕದೆ ಇರುವುದು ಎಲ್ಲಾ ಕನ್ನಡಿಗರಿಗೆ ತೋರಿರುವ ಅಗೌರವ.
ಸಂಘಪರಿವಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಬಸವಣ್ಣನವರಿಗೆ ಸಲ್ಲಬೇಕಾದ ಗೌರವ ಸಲ್ಲಿಸದೆ ಅಪಚಾರ ಮಾಡುತ್ತಿರುವುದು ಇದೇ ಮೊದಲಲ್ಲ.
ವಚನ ದರ್ಶನ ಪುಸ್ತಕದಲ್ಲಿ ಬಸವಣ್ಣನವರ ಮೇಲೆ ವ್ಯಾಪಕವಾದ ಚರ್ಚೆಯಾದರೂ ‘ಸಾಂಸ್ಕೃತಿಕ ನಾಯಕ’ ಎಂಬ ಎರಡು ಪದಗಳ ಬಳಕೆ ಇಡೀ ಪುಸ್ತಕದಲ್ಲಿ ಕಾಣಿಸಲೇ ಇಲ್ಲ. ಮಂಗಳೂರಿನಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಪೇಜಾವರ ಶ್ರೀಗಳು ಬಸವಣ್ಣನವರ ವಚನ ಹೇಳಿದರು ಆದರೆ ಅವರ ಹೆಸರು ಹೇಳದೆ ತಪ್ಪಿಸಿಕೊಂಡರು.
ಸಂಘಪರಿವಾರದವರಿಗೆ ಬಸವಣ್ಣರೆಂದರೆ ಅಸಡ್ಡೆಯೇ ಅಥವಾ ಭೀತಿಯೇ? ಆದರೆ ಈ ಸಂಪ್ರದಾಯವಾದಿಗಳಿಗೆ ಬಸವಣ್ಣರೆಂದರೆ ಬಿಸಿ ತುಪ್ಪ ಎನ್ನುವುದಂತೂ ನಿಜ.
ಸಂಘ ಪರಿವಾರಕ್ಕೆ ಬಸವಣ್ಣನವರು ಬೇಡ ಆದರೆ ಲಿಂಗಾಯತರ ಮತ ಬೇಕು. ಅದಕ್ಕೆ ತಮ್ಮ ಅತಿ ಬುದ್ಧಿವಂತಿಕೆಯನ್ನು ನಿರಂತರವಾಗಿ ಬಳಸುತ್ತಾರೆ. ಸೇಡಂನಲ್ಲಿ ನಡೆದ ಆರೆಸ್ಸೆಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ನೀಡಲು ‘ಬಸವ ರಥ’ ಬಿಟ್ಟಿದ್ದರು, ಲಿಂಗಾಯತ ಸ್ವಾಮೀಜಿಗಳನ್ನು ಬಳಸಿಕೊಂಡಿದ್ದರು.
ಈಗ ಈ ಆರೆಸ್ಸೆಸ್ ಕಾರ್ಯಕ್ರಮವನ್ನು ಕೆಎಲ್ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಸುತ್ತಿದ್ದಾರೆ. ಇದರ ಪ್ರಚಾರ ಈ ಅಂಶದ ಮೇಲೆಯೇ ಒತ್ತು ಕೊಟ್ಟು ಇದು ಕೆಎಲ್ಇ ಸಂಸ್ಥೆಯ ಕಾರ್ಯಕ್ರಮದಂತೆ ಬಿಂಬಿಸುತ್ತಿದ್ದಾರೆ.
ಇದು ಕೆಎಲ್ಇ ಸಂಸ್ಥೆಯ ಕಾರ್ಯಕ್ರಮದಂತೆ ಬಿಂಬಿಸುತ್ತಿದ್ದಾರೆ.
ಇದು ದುರುದ್ದೇಶದಿಂದ ಕೂಡಿದ ಅತಿಬುದ್ಧಿವಂತಿಕೆ. ಇವರ ಬಗ್ಗೆ ಕರ್ನಾಟಕದ ಬಸವ ಅನುಯಾಯಿಗಳು ಎಚ್ಚರದಿಂದಿರಲಿ.

👁😳
ಕರ್ನಾಟಕದ ರಾಜ್ಯದಲ್ಲಿ ವಿಶೇಶವಾಗಿ ಕರ್ನಾಟಕ .ಕನ್ನಡ. ಬಗ್ಗೆ ಸಮ್ಮೇಳನ ನಡೆಯುವದಿದ್ದರೆ ಮೋದಲು ಸಾಂಸ್ಕೃತಿಕ ನಾಯಕ ಬಸವಣ್ಣವರು ದೊಡ್ಡ ಪೋಟೋ ಆ ಬ್ಯಾನರ್ ನಲ್ಲಿ ಇರಬೇಕು ಅಂತ ಕರ್ನಾಟಕ ಸರ್ಕಾರ ಸುತ್ತೋಲೆ ಜಾರಿಗೆ ಮಾಡಬೇಕು.
ಬಸವಣ್ಣನವರು ಕರ್ನಾಟಕದ ಮುಕುಟ ಅವರ ಭಾವಚಿತ್ರ ಹಾಕಬೇಕಿತ್ತು. ರಾಮ,ಕೃಷ್ಣ ಇವರುಗಳು ಕರ್ನಾಟಕದವರೇ ಅಲ್ಲ ಆದರೆ ಕರ್ನಾಟಕದ ಮಹನೀಯರನ್ನೆ ಮರೆಸುವ ಕೆಲಸ ಮಾಡುವಂತೆ ಕಾಣುತ್ತಿದೆ ಇವರ ಕಾರ್ಯಕ್ರಮಗಳು. ಲಿಂಗಾಯತ ಬಂದುಗಳು ಅರ್ಥ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನ ಬಹಿಷ್ಕಾರ ಮಾಡಬೇಕು
ಇದು ಕನ್ನಡದ ಹಬ್ಬವಲ್ಲ ಉತ್ತರ ಭಾರತದ
ರಾಮಕೃಷ್ಣರ ಹಬ್ಬ ಕನ್ನಡಿಗರು ಇದನ್ನು
ಬಹಿಷ್ಕರಿಸಬೇಕು. ಎಲ್ಲಿ ಕನ್ನಡ ವಿರುತ್ತದೆ
ಅಲ್ಲಿ ಬಸವಣ್ಣ ಮತ್ತು ಬಸವಾದಿ ಶರಣರು
ಇರುತ್ತಾರೆ. ಕನ್ನಡದ ಹಬ್ಬ ಎಂಬ ಹೆಸರಲ್ಲಿ
ರಾಮಕೃಷ್ಣರ ಹಬ್ಬ ಆಚರಿಸಬೇಡಿ ತಮ್ಮ
ರಾಮಕೃಷ್ಣರ ಹೆಸರಲ್ಲಿ ಹಬ್ಬ ಆಚರಿಸಲು
ಕನ್ನಡ ಸಾಂಸ್ಕೃತಿಕ ಇಲಾಖೆ ಸೂಚಿಸಬೇಕು
ಹೋಗಿ ಹೋಗಿ ಈ ಬಸವದ್ರೋಹಿ ಸ್ವಾಮಿಗಳ ಕಾರ್ಯಕ್ರಮದಲ್ಲಿ ಬಸವಣ್ಣನವರ ಬಗ್ಗೆ ಕೇಳುತ್ತರುವಿರಲ್ಲ! ಇದರ ಬಗ್ಗೆ ಮೂಲತಃ ಭಕ್ತರು ವಿವೇಚನೆಯಿಂದ ನಡೆದುಕೊಳ್ಳಬೇಕು. ಇವರ ಈ ನಡೆ ನೋಡಿದರೆ ಪಂಚಮಸಾಲಿ ಸಮಾಜ ಏನನ್ನೂ ಪ್ರಶ್ನಸುವದಿಲ್ಲ ಎಂದು ತಿಳಿದಂತಿದೆ. ಇದು ನಂಬಿಕೆ ಇಟ್ಟಿರುವ ಅತಿದೊಡ್ಡ ಪಂಚಮಸಾಲಿ ಸಮಾಜಕ್ಕೆ ಪ್ರತ್ಯಕ್ಷವಾಗಿ ಹಾಗೂ ಇಡೀ ಸಮಾಜಕ್ಕೆ ಪರೋಕ್ಷವಾಗಿ ಮಾಡಿದ ಮೋಸ, ಅಪಖ್ಯಾತಿ! *ಎನಿಸು ಕಾಲ ಕಲ್ಲು ನೀರೊಳಗಿರ್ದು ಮ್ರುದುವಾಗಬಹುದೆ? ಅನ್ನುವಂತೆ ಇಂತಹ ಕಲ್ಲುಗಳನ್ನು ಎತ್ತಿಹಾಕಿ, ನೀರಿಗೆ ಸ್ಪಂದಿಸುವ ಕಲ್ಲನ್ನು ಕಾವಲಿಗೆ ಇಡಬೇಕಷ್ಟೆ! ಜಯ ಬಸವ!
ಇದು ಕರ್ನಾಟಕ ಕನ್ನಡದ ಹಬ್ಬವಲ್ಲ ಉತ್ತರದವರ ಹಬ್ಬವಾಗಿದೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವಿರದ ಎಲ್ಲ ಕಾರ್ಯಕ್ರಮಗಳನ್ನು ಬಹಿಸ್ಕಿರಿಸಬೇಕು
ಇವರು ಬಸವಣ್ಣನವರನ್ನು ಮತ್ತು ಶರಣ ಸಂಸ್ಕೃತಿಯನ್ನು ಜನಮಾನಸದಿಂದ ದೂರಮಾಡಿ ಆಸ್ಥಳದಲ್ಲಿ ರಾಮ ಮತ್ತು ಕೃಷ್ಣ ರನ್ನು ಸ್ಥಾಪಿಸಲು ಆಯಾ ಮೂಲಕ ಅವರ ಹಿಂದೂರಾಷ್ಟ್ರದ.ಕಲ್ಪನೆಗೆ ತಯಾರಿಮಾಡಲು ಇಂತಹ ಕಾರ್ಯಕ್ರಮ ಮಾಡುತ್ತಿದ್ದಾರೆ. ಲಿಂಗಾಯತರು ಹೆಚ್ಚಿರುವ ಮತ್ತು ಬಸವಣ್ಣನ ನಾಡಿನಲ್ಲಿ ಬಸವಣ್ಣನ ಭಾವಚಿತ್ರವಿಲ್ಲದೆ, ಬಸವಣ್ಣನವರ ಶ್ರಮಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದೇ ಆರೆಸ್ಸೆಸ್ ಪ್ರಣೀತ ಹಿಂದುತ್ವದ ಹಿಂದೂ ಧರ್ಮವನ್ನು ಬಸವಣ್ಣನ ನಾಡಿನ ಮೂಲಕ ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಇಷ್ಟು ದೊಡ್ಡ ದುಡ್ಡಿನ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಾಗಿದ್ದಲ್ಲಿ ಕೆಲವು ಲಿಂಗಾಯತ ಮಠಾಧೀಶರುಗಳೇ ಉದ್ಘಾಟಿಸಿದ ಬಸವರಥ ಎಲ್ಲಿ ಹೋಯಿತು? ಲಿಂಗಾಯತರನ್ನು ಮತ್ತು ಬಸವತತ್ವ ಅನುಯಾಯಿಗಳನ್ನು ಅವರ ಉತ್ಸವಕ್ಕೆ ಸೆಳೆಯುವ ಸಾಹಸ ಮಾಡಿದರು ಆದರೆ ಅದು ಡಾ. ಮೀನಾಕ್ಷಿ ಬಾಳಿಯವರ ಪ್ರಯತ್ನದಿಂದ ಸಾಧ್ಯವಾಗಲಿಲ್ಲ.
ಕರ್ನಾಟಕದ ಹಬ್ಬ ಅಂತಾ ಯಾರೇ ಕಾರ್ಯಕ್ರಮ ನಡೆಸಲಿ ಮೊದಲ ಗೌರವ ಸಲ್ಲಬೇಕಾದದ್ದು ಅಪ್ಪ ಬಸವಣ್ಣನವರಿಗೆ. ಸಂಘ ಪರಿವಾರ ಇರಲಿ ಯಾರೇ ಇರಲಿ ಅವರ ಕಾರ್ಯಕ್ರಮಕ್ಕೆ ಪ್ರತಿಭಟನೆ ಮಾಡಲೇ ಬೇಕು. ಆಯಾ ಸ್ಥಳೀಯ ಬಸವ ಪರ ಸಂಘಟನೆಗಳು ಇದನ್ನು ಪ್ರತಿರೋಧಿಸಬೇಕು. ಕಾರ್ಯಕ್ರಮ ಆಯೋಜಕರಿಗೆ ನಮ್ಮ ಜಾಗತಿಕ ಲಿಂಗಾಯತ ಮಹಾಸಭಾ ಅಥವಾ ಸ್ವಾಮೀಜಿ ಅವರ ಒಕ್ಕೂಟ ಸಂಸ್ಥೆ ಮೂಲಕ ಪತ್ರ ಬರೆಯಬೇಕು.
ಇದು ಪ್ರಾಥಮಿಕವಾಗಿ ಬಸವನುಯಾಯಿಗಳ ಇಚ್ಚಾ ಶಕ್ತಿಯ ಕೊರತೆಯನ್ನು ಬಿಂಬಿಸುತ್ತಿದೆ