ಬೀದರ್
ಸೇಡಂನಲ್ಲಿ ನಡೆಯಲಿರುವ ಸಂಘ ಪರಿವಾರದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಲು ಜನವರಿ 21ರಂದು ನಗರದಿಂದ ಬಸವ ರಥ ಹೊರಡಲಿದೆ.
ಜನವರಿ 21ರಂದು ನಗರದ ರಾಣಿ ಚನ್ನಮ್ಮ ವೃತ್ತ ಮತ್ತು ಶಿವನಗರ ವೃತ್ತದಿಂದ ಎರಡು ಮೆರವಣಿಗೆಗಳು ಆರಂಭವಾಗಿ ನೆಹರೂ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಲಿವೆ. ನೂರಾರು ವಿದ್ಯಾರ್ಥಿಗಳು ಮತ್ತು ಜಿಲ್ಲೆಯ ವಿವಿಧ ಗಣ್ಯರು ಬಸವ ರಥಕ್ಕೆ ಭಾಗವಹಿಸಲಿದ್ದಾರೆ ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ಜನವರಿ 29ರಿಂದ ಫೆಬ್ರುವರಿ 6ರ ವರೆಗೆ ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಉತ್ಸವವನ್ನು ಆಯೋಜಿಸಿರುವ ಕೊತ್ತಲ ಬಸವೇಶ್ವರ ಸಮಿತಿಯ ಅಂಗ ಸಂಸ್ಥೆ ವಿಕಾಸ ಅಕಾಡೆಮಿ.
ಬಸವ ರಥ ಜಿಲ್ಲೆಯ ಕಮಲನಗರ, ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನಲ್ಲಿ ಸಂಚರಿಸಲಿದೆ ಎಂದು ರೇವಣಸಿದ್ದಪ್ಪ ಹೇಳಿದರು.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳೂ ಜಿಲ್ಲೆಗಳಲ್ಲಿ ಅಲ್ಲಿನ ಮಹಾತ್ಮರ ಹೆಸರುಗಳಲ್ಲಿ ರಥ ಸಂಚರಿಸಲಿವೆ. ಬಸವಣ್ಣನವರ ಕರ್ಮಭೂಮಿ ಇದಾಗಿರುವುದರಿಂದ ಅವರ ಹೆಸರಿನಲ್ಲಿ ರಥ ಸಂಚರಿಸಲಿದೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂಘಿಗಳು ಬಸವಣ್ಣನವರ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು
ಅಂತಹ ಸಂಘಿಗಳ ವಿರುದ್ಧ ಲಿಂಗಾಯತ ಧರ್ಮದ ಅವಹೇಳನ ಮಾಡುತ್ತಿದ್ದಾರೆ ಅಂತ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಬೇಕು
ಸರಿಯಾದ ಮಾತು ಶರಣರೇ, ಯಾಕೆ ಆ ಸಂಘೀಗಳ *ಗ ಕೆಲವು ಲಿಂಗಾಯತರು ಬಗ್ಗಿಕೊಂಡು ನಿರ್ವೀರ್ಯರಾಗಿ ಇರತಾರೋ? ಗೊತ್ತಾಗವಲ್ಲದು?
ಸಂಘ ಪರಿವಾರದವರೆ ನಾವು ಬಸವ ಕುಡಿಗಳು, ನಿಮ್ಮನ್ನು ಜನ್ಮತಃ ನಂಬೋದಿಲ್ಲ, ನಿಮ್ಮ ಬ್ರಾಹ್ಮಣ ಸಂಸ್ಕೃತಿ ಯನ್ನು ನಾವು ಎಂದಿಗೂ ಅನುಸರಿವುದಿಲ್ಲ
ನೆನಪಿಡಿ