ಮೈಸೂರು

ಶರಣೆ ಸರೋಜಮ್ಮ ನವಿರು, 80, ಶುಕ್ರವಾರ ಬೆಳಿಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ಪಾರ್ಥೀವ ಶರೀರವನ್ನು ಮೈಸೂರಿನ ಲಕ್ಷೀಪುರದಲ್ಲಿರುವ ಅವರ ಸ್ವಗೃಹದಲ್ಲಿ ಇಡಲಾಗಿದೆ. ಶನಿವಾರ ಬೆಳಿಗ್ಗೆ 11ಗಂಟೆಗೆ ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ಲಿಂಗಾಯತ ರುದ್ರಭೂಮಿ(ಐಕ್ಯಭೂಮಿ)ಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು.
ಶರಣೆ ಸರೋಜಮ್ಮ ಅವರು ಮೈಸೂರಿನಲ್ಲಿ ರಾಷ್ಟ್ರೀಯ ಬಸವ ದಳವನ್ನು ಕಟ್ಟಿ ಬೆಳೆಸಿದವರು. ಮೈಸೂರು ರಾಷ್ಟ್ರೀಯ ಬಸವದಳದ ಸಂಸ್ಥಾಪನಾ ಕಾರ್ಯದರ್ಶಿಗಳಾಗಿ ಸಂಘಟನೆಯನ್ನು ತಳಮಟ್ಟದಿಂದ ಬೆಳೆಸಿದವರು. ಪೂಜ್ಯ ಡಾ. ಮಾತೆ ಮಹಾದೇವಿಯವರ ಆತ್ಮೀಯರಲ್ಲಿ ಇವರು ಸಹ ಒಬ್ಬರಾಗಿದ್ದರು.
ಇಳಿ ವಯಸ್ಸಿನಲ್ಲೂ ಸ್ವತಃ ಮನೆಮನೆಗೆ ತೆರಳಿ ಶರಣ ಮೇಳದಂತಹ ಕಾರ್ಯಕ್ರಮಗಳಿಗೆ ಹಣ ಸಂಗ್ರಹ ಮಾಡಿ ಕಳಿಸಿಕೊಡುತ್ತಿದ್ದರು. ಬಸವಧರ್ಮ ಪೀಠಕ್ಕೆ ಮತ್ತು ಮೈಸೂರಿನ ಶಾಲೆಯೊಂದಕ್ಕೆ ಸಾಕಷ್ಟು ದಾಸೋಹ ಮಾಡಿದ್ದಾರೆ.
ಬಹಳ ನಿಷ್ಠುರವಾದಿಯಾಗಿದ್ದರು. ಮೈಸೂರು ರಾಷ್ಟ್ರೀಯ ಬಸವದಳದ ಎಲ್ಲಾ ಕಾರ್ಯಕ್ರಮಗಳು ಅವರ ನೇತೃತ್ವದಲ್ಲೇ ನಡೆಯುತ್ತಿದ್ದವು. ವಯೋಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ.