ಕೂಡಲಸಂಗಮ
ಬಸವ ಜಯಂತಿ ನಿಮಿತ್ಯ ಕೂಡಲಸಂಗಮದಲ್ಲಿ ನಡೆಯುವ ಸರ್ವ ಧರ್ಮ ಸಂಸತ್ತು ಕಾರ್ಯಕ್ರಮ ಸ್ಥಳ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ತಹಶೀಲ್ದಾರ ನಿಂಗಪ್ಪ ಬಿರಾದಾರ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ ಮುಂತಾದವರು ಮಾಡಿದರು.
ಕಾರ್ಯಕ್ರಮ ನಡೆಯುವ ಸಭಾಭವನ, ಪಕ್ಕದಲ್ಲಿಯೇ ಊಟದ ವ್ಯವಸ್ಥೆಯ ಸ್ಥಳ, ವಾಹನ ಪಾರ್ಕಿಂಗ್ ಮಾಡಲು ಬಸ್ ನಿಲ್ದಾಣ, ಬಸವಣ್ಣನವರ ಐಕ್ಯ ಸ್ಥಳದಿಂದ ಸಭಾ ಭವನದ ವರೆಗೆ ಮೆರವಣಿಗೆ ಮಾಡುವ ಸ್ಥಳ, ದಾಸೋಹ ಭವನ, ಮಂಡಳಿಯ ಕಾರ್ಯಾಲಯದ ಸಭಾಂಗಣ, ಯಾತ್ರಿ ನಿವಾಸ ವಿಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

