ಕನ್ನೇರಿ ಸ್ವಾಮಿಯಂತವರಿಗೆ ವಿಭೂತಿಯಲ್ಲ ಕುಂಕುಮವೇ ಭೂಷಣ

ಬೀದರ್

ಕನ್ನೇರಿ ಸ್ವಾಮಿಯ ತಲೆ ಕೆಟ್ಟಿದೆ ಅನಿಸುತ್ತಿದೆ. ಬಾಯಿಗೆ ಬಂದಂತೆ ಒದರುವ ಚಟವನ್ನು ಬೆಳೆಸಿಕೊಂಡಂತೆ ಕಾಣಿಸುತ್ತದೆ. ಎಷ್ಟೋ ಸಲ ಉತ್ತರ ಕೊಟ್ಟರು, ಎಷ್ಟೋ ಸಲ ಉಗಿದರೂ ನನಗೇನು ಸಿಡಿದಿಲ್ಲಾ ಎನ್ನುವ ವ್ಯಕ್ತಿ ಇವರು.

ಬಸವ ಸಂಸ್ಕೃತಿ ಅಭಿಯಾನದ ವಿರುದ್ಧವಾಗಿ ಬಬಲೇಶ್ವರದಲ್ಲಿ ಆಯೋಜಿಸಿದ್ದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ, ಬಸವಾದಿ ಶರಣರ ಬಗ್ಗೆ ತನ್ನ ಬುದ್ದಿಮಟ್ಟದ ಚಿಂತನೆಯನ್ನು ಬಾಯಿಗೆ ಬಂದಂತೆ ಅಜ್ಞಾನದ ಮಾತುಗಳನ್ನಾಡಿದ್ದಾರೆ.

ಕನ್ನೇರಿ ಸ್ವಾಮಿಗೆ ವಚನಗಳ ಅಭ್ಯಾಸದ ಕೊರತೆಯಿದೆ. ವಚನ ಸಾಹಿತ್ಯದ ಅಲ್ಪ ಸ್ವಲ್ಪ ಓದಿಕೊಂಡಿದ್ದರೂ ಅರ್ಥವಾಗಿಲ್ಲಾ ಅನಿಸುತ್ತದೆ. ಅರ್ಥವಾದರೂ ಜನಗಳನ್ನು ದಾರಿತಪ್ಪಿಸಲು ಹುನ್ನಾರ ನಡೆಸುತ್ತಿದ್ದಾರೆ.

ಯಾರದೋ ಎಂಜಲಕ್ಕೆ ನಾಲಿಗೆ ಚಾಚಿ ಲಿಂಗಾಯತ ಧರ್ಮಕ್ಕೆ, ಬಸವಾದಿ ಪ್ರಮಥರ ಬಗ್ಗೆ ತಪ್ಪುತಪ್ಪಾಗಿ ಬಿಂಬಿಸಿಕೊಂಡು ಜಗತ್ತಿಗೆ ತಪ್ಪು ಸಂದೇಶಗಳನ್ನು ಕೊಡುತ್ತಿದ್ದಾರೆ.

ಏ ಸ್ವಾಮಿ! ನಿಮಗೆ ಯಾವ ಯಾವ ಗುರುಗಳ ಬಗ್ಗೆ ಅಸಮಾಧಾನ ಇದೆಯೋ ಧೈರ್ಯ ಇದ್ದರೆ ಆಯಾ ಗುರುಗಳಿಗೆ ಫೋನ್ ಹಚ್ಚಿ ಮಾತನಾಡು. ಅದು ಬಿಟ್ಟು ಪಬ್ಲಿಕ್ ವೇದಿಕೆಯ ಮೇಲೆ ಬಾಯಿಗೆ ಬಂದಂತೆ ಮಾತನಾಡಬೇಡ. ಅದು ಗುರುಗಳ ಲಕ್ಷಣವಲ್ಲ.

ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಧರ್ಮದ ಪದ ಬಂದಿಲ್ಲ ಎಂದಿರುವಿರಿ.

  • ಲಿಂಗವಂತನು ಲಿಂಗವಂತನ ವಿವಾಹದಲ್ಲಿ ವಿಭೂತಿ ವೀಳೆಯವ ಕೊಡಬೇಕಲ್ಲದೆ ಬೇರಾವುದನ್ನು ಕೊಡಲಾಗದು ಎಂದು ವಚನದಲ್ಲಿ ಹೇಳಿದ್ದಾರೆ. ಇಲ್ಲಿ ಲಿಂಗಾಯತ ಪದ ಬಳಕೆಯಾಗಿಲ್ಲವೇ?
  • ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ, ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ ಬಸವಣ್ಣನೇ ಕರ್ತೃ ಸರ್ವಜ್ಞ. ಇಲ್ಲಿ ಲಿಂಗಾಯತ ಪದ ಬಂದಿಲ್ಲವೇ?

ಹೀಗೆ ಎಷ್ಟೋ ವಚನಗಳ ಸಾಕ್ಷಿ ಇವೆ. ಇಷ್ಟಿದ್ದು ಸಿಕ್ಕಿದ ವೇದಿಕೆಯ ಮೇಲೆ ಬಾಯಿಗೆ ಬಂದಂತೆ ಒದರುತ್ತಿದ್ದಿಯಲ್ಲ ನಿಮ್ಮ ತಲೆ ಕೆಟ್ಟಿದೆ ಎಂದು ಜನಗಳಿಗೆ ಅರ್ಥವಾಗುವುದಿಲ್ಲವೆ?

ಹಿಂದೂಧರ್ಮ ಎಂಬ ಪದ ನೀವೇ ಒಪ್ಪಿಕೊಳ್ಳುವ ಯಾವ ವೇದ, ಉಪನಿಷತ್, ಆಗಮ, ಶಾಸ್ತ್ರ, ಪುರಾಣಗಳಲ್ಲೂ ಬಳಕೆಯಾಗಿಲ್ಲ. ಇನ್ನು ವಚನಗಳಲ್ಲಿ ಮುನ್ನವೇ ಇಲ್ಲ.

ಬಸವಣ್ಣನವರನ್ನು ನಾವು ಪೇಟೆಂಟ್ ಮಾಡಿಕೊಂಡಿಲ್ಲ ಸ್ವಾಮಿ. ಶರಣರ ಸ್ಥಾನದಲ್ಲಿ ಕುಳಿತು ಶರಣರ ಮಾರ್ಗದಂತೆ ನಡೆಯದೆ ನುಡಿಯದೆ ಬೇರೆ ಮಾರ್ಗದ ಪೇಟೆಂಟ್ ಹಿಡಿದಿರುವವರು ನೀವು ಸ್ವಾಮೀ.

ವಿಭೂತಿ ಎದ್ದು ಕಾಣುವಂತೆ ಹಚ್ಚಿಕೊಳ್ಳುತ್ತಾರೆ ಅವರಂತೆ ನಾನು ಡ್ರಾಮಾ ಮಾಡುವುದಿಲ್ಲ ಎಂದಿರುವಿರಿ, ನಿಜವಾಗಿಯೂ ಡ್ರಾಮಾ ಮಾಡುತ್ತಿರುವುದು ನೀವು ಸ್ವಾಮಿ. ನೋಡು ನೀವು ವಿಚಾರ ಮಾಡಿ ನೀವು ಕುಳಿತಿರುವ ಪೀಠ ಯಾವುದು, ನೀವು ನಡೆದುಕೊಳ್ಳುತ್ತಿರುವ ಮಾರ್ಗ ಯಾವುದು? ಚಿಂತನೆ ಮಾಡಿ ನಿಮಗೆ ತಿಳಿಯುತ್ತದೆ, ಯಾರು ನಾಟಕಕಾರರು ಯಾರು ಡ್ರಾಮಾ ಮಾಡುತ್ತಾರೆ ಅಂತ.

ಇನ್ನೊಂದು ರೀತಿಯಲ್ಲಿ ವಿಭೂತಿ ನಿಮಗೆ ಭೂಷಣವಲ್ಲ. ಯಾಕೆಂದರೆ ವಿಭೂತಿಯನ್ನು ನಿಜಯೋಗಿ, ಧೀರಯೋಗಿ ನಿಜಜ್ಞಾನಿಗಳು ಮಾತ್ರ ಧರಿಸಬಲ್ಲರು. ನಿಮ್ಮಂತ ಹೇಡಿಗೆ ಕುಂಕುಮವೇ ಭೂಷಣ. ಮಡಿವಾಳ ಮಾಚಿದೇವರು ಹೇಳಿದಂತೆ:

ಕೊಂಬನೂದುವ ಹೊಲೆಯಂಗೆ
ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?
ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ,
ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ, ಮರಳಿ ಗುರುನಿಂದಕನಾಗಿ,
ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ
ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ, ಕಲಿದೇವಯ್ಯ

ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ಕಲ್ಲು ದೇವರು ಎಂದಿದ್ದೀರಿ. ನಿಮ್ಮಂತ ಕಲ್ಲು ಹೃದಯದವನಿಗೆ ಇಷ್ಟಲಿಂಗ ಹೇಗೆ ದೇವನ ಕುರುಹಾಗಿ ಕಾಣಲು ಸಾಧ್ಯ? ದೃಷ್ಟಿಯಂತೆ ಸೃಷ್ಟಿ. ನಿಮ್ಮ ದೃಷ್ಟಿ ಹೇಗಿದೆಯೋ ಹಾಗೇ ಎಲ್ಲವೂ ಕಾಣುತ್ತದೆ. ಕಾಮಾಲೆಯ ಕಣ್ಣಿಗೆ ಕಾಣುವುದೆಲ್ಲವೂ ಹಳದಿಯೇ.

ವಚನಾಂಕಿತಗಳು ಸನಾತನ ಧರ್ಮದ ದೇವರು ಎಂದಿರುವಿರಿ. ಇದೆಂತ ದಡ್ಡತನ! ಸನಾತನಿಗಳ ದೇವರು ಬೇರೆ, ಲಿಂಗಾಯತರ ದೇವರು ಬೇರೆ ಇಲ್ಲ. ಇರುವ ಒಬ್ಬ ದೇವನಿಗೆ ಇಸ್ಲಾಮರು ಅಲ್ಲಾ ಎನ್ನುವರು. ಕೆಲವರು ಯಹೋವ ಎಂದು ಹೇಳುತ್ತಾರೆ. ಅದರಂತೆ ಲಿಂಗಾಯತರ ದೇವರು “ಲಿಂಗದೇವ”. ಸನಾತನಿಗಳು ದೇವತೆಗಳನ್ನು ಪೂಜಿಸುವರು, ಹೋಮ ಹವನಗಳನ್ನು ಮಾಡುವರು. ಒಬ್ಬ ದೇವರನ್ನು ಪೂಜಿಸಲಾರರು. ಏ ಸ್ವಾಮಿ ನಿಮಗೆ ಗೊತ್ತಿದೆಯಾ ವೇದ, ಆಗಮ, ತರ್ಕ, ಎಲ್ಲದರಲ್ಲಿಯೂ ದೇವರು ಒಬ್ಬನೆ ಎಂದು ಹೇಳಲಾಗಿದೆ.

ನಿಮಗೆ ಬಹಳ ಸಲ ಎಚ್ಚರಿಕೆ ಕೊಟ್ಟಿದೆ. ಆದರೂ ಯಾಕೋ ನೀವು ಬಾಲ ಬಿಚ್ಚುವುದನ್ನು ಬಿಡುತ್ತಿಲ್ಲ. ನೀವು ಯಾರದೋ ಎಂಜಲ ಕಾಸಿಗೆ ಇದೆಲ್ಲ ಮಾಡುತ್ತಿರುವೆ. ನಿಮ್ಮನ್ನು ಬಾಲ ಬಡೆದು ಮೇಲೆ ತರುತ್ತಿರುವ ಜನಗಳೆ ಒಂದಾನೊಂದು ದಿವಸ ನಿಮ್ಮ ನೆಲಕ್ಕೆ ತುಳಿಯುತ್ತಾರೆ ಎಚ್ಚರ.

ನೀವು ನಿಜವಾದ ಸ್ವಾಮಿಯೇ ಆಗಿದ್ದರೆ, ಸಮಾಜದಲ್ಲಿ ಇಂತಹ ಗೊಂದಲ ಉಂಟು ಮಾಡಬಾರದು. ಎಲ್ಲರೂ ನನ್ನವರೆ ಎಂದು ತಿಳಿದುಕೊಂಡು ಇದನ್ನು ಓದಿ ಬಾಯಿ ಬಂದ್ ಮಾಡಿದರೆ ಒಳ್ಳೆಯದು. ಬಾಯಿ ಬಂದ್ ಮಾಡದೆ ಲಿಂಗಾಯತರ ಬಗ್ಗೆ, ಲಿಂಗಾಯತ ಗುರುಗಳ ಬಗ್ಗೆ, ಲಿಂಗಾಯತ ಸಮುದಾಯದ ಬಗ್ಗೆ ಒದರಲಿಕ್ಕೆ ಮುಂದುವರಿದರೆ ಲಿಂಗಾಯತರೆ ನಿಮಗೆ ಚುರುಕು ಮುಟ್ಟಿಸಬೇಕಾಗುತ್ತದೆ ಎಚ್ಚರ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ, ಬಸವ ಮಂಟಪ, ಬೀದರ್