ಇದು ಕೇವಲ ಭಾಲ್ಕಿ ಮಠ ಒಂದರ ಸಮಸ್ಯೆ ಮಾತ್ರವಲ್ಲ. ಲಿಂಗಾಯತ ಮಠಾಧೀಶರ ಈ ನಡೆಗೆ ಮುಖ್ಯ ಕಾರಣ ತಾತ್ವಿಕ ಬದ್ದತೆಯ ಕೊರತೆ ಹಾಗೂ ಪರಮ ಸ್ವಾರ್ಥ.
ವಿಜಯಪುರ
ಭಾಲ್ಕಿ ಹಿರೇಮಠ ಸಂಸ್ಥಾನದ ಮಠಾಧೀಶರು ಕಲಬುರಗಿಯಲ್ಲಿ ನಡೆದ ಬಹುತ್ವ ಸಂಸ್ಕೃತಿ ಭಾರತೋತ್ಸವ ಮತ್ತು ಸಂಘ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವದ ರಥಕ್ಕೆ ಚಾಲನೆ ನೀಡುವ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಲ್ಲಿ ಯಾವುದೆ ಆಶ್ಚರ್ಯವಿಲ್ಲ. ಅದು ನಿರೀಕ್ಷಿತ ಕೂಡ.
ಇದೇ ೨೯ ರಿಂದ ಸೇಡಂ ನಲ್ಲಿ ಆರಂಭವಾಗಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲೂ ಭಾಲ್ಕಿ ಮಠಾಧೀಶರು ಮತ್ತು ಅವರೊಂದಿಗೆ ಇನ್ನಷ್ಟು ಮಠಾಧೀಶರು ಭಾಗವಹಿಸುತ್ತಾರೆˌ ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಸೂಕ್ತ ಸಮಜಾಯಿಷಿ ಹಾಗೂ ಸಮರ್ಥನೆಯೂ ಅವರು ನೀಡಬಲ್ಲರು.
ಕೇವಲ ಭಾಲ್ಕಿ ಮಠದ ಸಮಸ್ಯೆಯಲ್ಲ
ಭಾಲ್ಕಿ ಶ್ರೀಗಳು ಪೂರ್ವದಿಂದಲೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯನ್ನು ಕಟುವಾಗಿ ವಿರೋಧಿಸುವ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.
ಮಠಗಳು ಯಾರನ್ನೂ ದೂರವಿಡಬಾರದುˌ ಮಠ ಎಲ್ಲರಿಗೂ ಸೇರಿದ್ದು ಎಂದು ನೆಪ ಹೇಳುತ್ತಲೆ ತಮ್ಮ ತಮ್ಮ ಮಠಗಳಲ್ಲಿ ಬಹುತೇಕ ಮಠಾಧೀಶರು ಹಿಂದುತ್ವವಾದಿ ಹಾಗೂ ಕೋಮುವಾದಿಗಳ ಹಿಂದೂತ್ವ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಉದಾಹರಣೆಗಳು ಇವೆ.
ಇದು ಕೇವಲ ಭಾಲ್ಕಿ ಮಠ ಒಂದರ ಸಮಸ್ಯೆ ಮಾತ್ರವಲ್ಲ. ನಾಡಿನ ಬಹುತೇಕ ಲಿಂಗಾಯತ ಮಠಗಳು ಮನುವಾದಿಗಳಿಗೆ ಶರಣಾಗತರಾಗಿ ದಶಕಗಳೆ ಕಳೆದುಹೋಗಿವೆ. ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.
ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.
ಅಪ್ಪಿಕೊಂಡೇ ಲಿಂಗಾಯತದ ನಾಶ
ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸದ ಹೊರತು ಕರ್ನಾಟಕದಲ್ಲಿ ಹಿಂದುತ್ವವನ್ನು ಬೆಳೆಸಲು ಸಾಧ್ಯವಿಲ್ಲವೆಂದು ಮನಗಂಡಿರುವ ಹಿಂದುತ್ವವಾದಿಗಳು ಅವುಗಳ ನಾಶಕ್ಕೆ ೨೦ ವರ್ಷಗಳ ಹಿಂದೆಯೆ ಯೋಜನೆಯೊಂದನ್ನು ರೂಪಿಸಿ ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದರಲ್ಲಿ ಹಿಂದುತ್ವವಾದಿಗಳದೇನೂ ತಪ್ಪಿಲ್ಲ. ಕರ್ನಾಟಕದಲ್ಲಿ ತಮ್ಮ ಪ್ರಮುಖ ವೈರಿಗಳು ಲಿಂಗಾಯತರುˌ ಹಿಂದುತ್ವವನ್ನು ಮುನ್ನೆಲೆಗೆ ತರಬೇಕಾದರೆ ಲಿಂಗಾಯತರನ್ನು ನಾಶಗೊಳಿಸಬೇಕು ಎನ್ನುವ ಹಿಂದುತ್ವವಾದಿಗಳ ಯೋಜನೆ ಅವರ ಪ್ರಕಾರ ಸರಿಯಾದದ್ದೆ.
ಲಿಂಗಾಯತರನ್ನು ನಾಶಗೊಳಿಸುವುದು ಸುಲಭವಲ್ಲವಾದ್ದರಿಂದ ಅವರನ್ನು ಅಪ್ಪಿಕೊಂಡೆ ನಾಶಗೊಳಿಸಬೇಕು ಎನ್ನುವ ಅವರ ಹುನ್ನಾರವೂ ಸರಿಯಾದದ್ದೆ. ಆದರೆ ಅದನ್ನು ತಿಳಿದುಕೊಳ್ಳುವಲ್ಲಿ ಲಿಂಗಾಯತ ಮಠಗಳು ಹಾಗೂ ರಾಜಕಾರಣಿಗಳು ಮತ್ತವರ ಅನುಯಾಯಿಗಳು ಸೋತಿದ್ದಾರೆ.
ಲಿಂಗಾಯತ ತತ್ವಜ್ಞಾನˌ ಸಿದ್ಧಾಂತ ಹಾಗೂ ಸಂಸ್ಕೃತಿಯ ಪರಂಪರಾಗತ ವೈರಿಗಳು ಯಾರು ಎನ್ನುವ ಕನಿಷ್ಠ ಪ್ರಜ್ಞೆ ಲಿಂಗಾಯತ ಮಠಗಳಿಗೆˌ ರಾಜಕಾರಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಇಲ್ಲದಿರುವದು ಆ ಸಮುದಾಯದ ದೌರ್ಭಾಗ್ಯವೆ ಹೊರತು ಹಿಂದುತ್ವವಾದಿಗಳ ತಪ್ಪಲ್ಲ. ಹಿಂದುತ್ವವಾದಿಗಳು ತಮಗನ್ನಿಸಿದ್ದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.
ಪರಮ ಸ್ವಾರ್ಥ
ಲಿಂಗಾಯತ ಮಠಾಧೀಶರ ಈ ನಡೆಗೆ ಮುಖ್ಯ ಕಾರಣ ತಾತ್ವಿಕ ಬದ್ದತೆಯ ಕೊರತೆ ಹಾಗೂ ಪರಮ ಸ್ವಾರ್ಥ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಡೀ ಲಿಂಗಾಯತ ಸಂಸ್ಕೃತಿಯು ನಾಶಗೊಳ್ಳುವಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೆ ಹಿಂದುತ್ವದ ನಶೆಯ ಕಾರಣ ಲಿಂಗಾಯತ ಯುವಕರು ಶಿಕ್ಷಣ ಪೂರೈಸುವಲ್ಲಿ ಹಾಗೂ ಉದ್ಯೋಗ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಲಿಂಗಾಯತರ ಕುರಿತು ಮಠಾಧೀಶರಿಗಾಗಲಿˌ ರಾಜಕಾರಣಿಗಳಿಗಾಗಲಿ ಯಾವದೆ ಕಾಳಜಿ ಇಲ್ಲ. ಇನ್ನು ಮುಂದೆಯೂ ಕೂಡ ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.
ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.
ಲಿಂಗಾಯತ ರಾಜಕಾರಣಿಗಳು ಮತ್ತು ಮಠಾಧೀಶರು ಈ ಸಮಾಜವನ್ನು ಉದ್ಧಾರ ಮಾಡುತ್ತಾರೆ ಎನ್ನುವ ಯಾವುದೆ ಭರವಸೆ ಈ ಸಮುದಾಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ಎಲ್ಲಿಯವರೆಗೆ ಲಿಂಗಾಯತರು ಬಿಜೆಪಿ ಮತ್ತು ಹಿಂದುತ್ವದ ತೆಕ್ಕೆಯಿಂದ ಹೊರಬರಲಾರರೊ ಅಲ್ಲಿಯವರೆಗೆ ಲಿಂಗಾಯತರ ಉದ್ಧಾರ ಅಸಾಧ್ಯ ಎನ್ನುವುದು ಸೂರ್ಯ ಚಂದ್ರರಷ್ಟೆ ಸತ್ಯವಾಗಿದೆ.
ಪ್ರತಿದಿನ ಬೆಳಿಗ್ಗೆ ಸೂರ್ಯ ಪೂರ್ವದಲ್ಲಿ ಉದಯ ಆಗುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ತಮ್ಮ ಅಭಿಪ್ರಾಯ. ಮಠಾಧೀಶರು ಅಷ್ಟೇ ಅಲ್ಲ ನಮ್ಮ ಜಾಗತಿಕ ಲಿಂಗಾಯತ ಮಹಾಸಭಾದ ಬಹು ಸಂಖ್ಯಾತ ಪದಾಧಿಕಾರಿಗಳ ಬದ್ಧತೆ ಬಸವ ತತ್ವಗಳಿಗಿಂತ ಮನುವಾದಿ ವೈರಸ್ ಅಂಟಿಸಿಕೊಂಡ ಬಿಜೆಪಿ ಪಕ್ಷಕ್ಕೆ ಎಂಬುದು ಸ್ಪಷ್ಟ. ಜಾಗತಿಕ ಲಿಂಗಾಯತ ಮಹಾಸಭಾ ಬಲಿಷ್ಠ ಸಂಘಟನೆ ಆಗಬೇಕಾದರೆ ಮನುವಾದಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದರೆ ಮಾತ್ರ ಸಾಧ್ಯ. ನಾನು ಕುರುಡುತನದಿಂದ ಮನುವಾದಿಗಳು ವಿರೋಧಿಸುತ್ತಿಲ್ಲ. ನಾನು ಆರ್.ಎಸ್.ಎಸ್ ಮತ್ತು ಬಿಜೆಪಿ ಒಳಗೆ ಹೋಗಿ ನೋಡಿಕೊಂಡು ಅವರ ಚಿಂತನೆಗಳು ಇಷ್ಟವಾಗದೆ ಹೊರಗೆ ಬಂದಿದ್ದೇನೆ. ಮೊದಲು ನಮ್ಮೆಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಬಸವ ತತ್ವದ ಬಗ್ಗೆ ಸೈದ್ಧಾಂತಿಕ ಬದ್ಧತೆ ಬರಬೇಕು. ಇಲ್ಲದೇ ಹೋದರೆ ನಮ್ಮ ಸಂಸ್ಥೆ ಯಾವ ಉದ್ದೇಶಗಳನ್ನೂ ಸಾಧಿಸಲು ಸಾಧ್ಯವಿಲ್ಲ. ಶರಣು ಶರಣಾರ್ಥಿ.
ಭಾರತದಲ್ಲಿ ಹಲವಾರು ಧರ್ಮಗಳಿವೆ. ಎಲ್ಲರೂ ತಮ್ಮ ತಮ್ಮ ಧರ್ಮಕ್ಕೆ ನಿಷ್ಠರಾಗಿ ಇತರೆ ಧರ್ಮಿಯರನ್ನು ಗೌರವಿಸಿ ಬಾವೈಕ್ಯ ಭಾವನೆ ಹೊಂದುವುದು ಸರಿಯೇ. ಯಾರೇ ಧರ್ಮ ಗುರುಗಳು ಇನ್ನೊಂದು ಧರ್ಮದ ಕಾರ್ಯಕ್ರಮಕ್ಕೆ ಒಪ್ಪಿ ಹೋಗುವ ಮುನ್ನ ತಮ್ಮ ಧರ್ಮಕ್ಕೆ ಚ್ಯುತಿ ತರದೆ ಗೌರವ ತರುವ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸ ತಮಗೂ ತಮ್ಮ ಧರ್ಮಕ್ಕೂ ಗೌರವ ತರಬೇಕು. ಯಾವುದೇ ಮಠಾಧೀಶರು ತಮ್ಮ ಮಠ, ಧರ್ಮ ಮತ್ತು ಭಕ್ತರಿಗೆ ಸೂಕ್ತ ಮಾನ್ಯತೆ ಗೌರವ ಕೊಡದವರ ಕಾರ್ಯಕ್ರಮಗಳಲ್ಲಿ ತಮ್ಮ ಮಠಾಧೀಶರು ಭಾಗವಹಿಸುವುದನ್ನು ಸಹಿಸುವುದಿಲ್ಲ.
*ಬಸವಣ್ಣನವರು ಯಾವ ಲಿಂಗಾಯತ ಧರ್ಮ ಅಂತಾ ಸ್ಥಾಪನೆ ಮಾಡಿಲ್ಲ.. ಬಸವ ತತ್ವ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಆಧಾರದ ಮೇಲೆ ಆಚಾರ ವಿಚಾರ ಸಂಸ್ಕೃತಿ ತುಂಬಾ ಭಿನ್ನ ವಾಗಿರುವುದುನ್ನು ನೋಡುತ್ತೇವೆ.. ಲಿಂಗ.ಎನ್ನುವದು ಅದೆಂದೂ…ಯೋಗ ಸಾಧನೆಯ ಹಾದಿಯಲ್ಲಿ ಗುರಿ ಮುಟ್ಟಲು ಸಾಧನ ಎಂದು ಕರೆದಿದ್ದಾರೆ ಏಕಾಗ್ರತೆಗೆ ಬಳಸಿಕೊಳ್ಳುವ ಸಾಧನದ ದೇವರಕುರುಹು ಎಂದಿದ್ದಾರೆ….ಲಿಂಗ ಆಯುಕ್ತರನ್ನಾಗಿ ಮಾಡಿಕೋಳ್ಳಲು ಅನುಸರಿಸುವ ವಿಧಾನ ಅಷ್ಟೇ…… ಸಮಾಜದಲ್ಲಿ ಜಡ್ಡುಗಟ್ಟಿದ ಸೂಚಕಗಳು ಕಂದಾಚಾರಗಳು ಮೂಢನಂಬಿಕೆ ವಿರೋಧಿಸಿದ್ದಾರೆ…… ಬಸವಣ್ಣನವರಿಂದ ಕಂಡು ಕೂಂಡಂತಹ ಮೋಲಸಿದ್ದಾಂಗಳು.. ವಚನಗಳು…. ಬಸವಾದಿ ಶರಣರಿಗೆ ಮೀಸಲಾಗಿವೆ…. ಯಾರು ಯಾವ ಬದಲಾವಣೆ ತರುವ ಅಗತ್ಯವಿಲ್ಲ
ಅದಕ್ಕೆ ಲಿಂಗಾಯತರು ಲಿಂಗಾಯತ ಅನ್ನು ವದಕಿಂತ…..ಬಸವಾಯುತ…
“ಬಸವಧರ್ಮ”ಅನ್ನುವುದು ಸೂಕ್ತ ನಿಲ್ಲುವೆ..ಶರಣರೆ…. ಶರಣು ಶರಣಾರ್ಥಿಗಳು ಶುಭದಿನ ಶುಭವಾಗಲಿ ಸರ್* 👍👍🙏🙏💐💐