ಕಲಬುರಗಿ
ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರು, ಜಾತ್ಯತೀತ ಹಿನ್ನೆಲೆಯುಳ್ಳ ಸ್ವಾಮೀಜಿಗಳು ಭಾಗವಹಿಸಬಾರದು” ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಮನವಿ ಮಾಡಿದೆ.
ಈ ಕುರಿತು ರಾಜಕಾರಣಿಗಳು ಹಾಗೂ ಮಠಾಧೀಶರಿಗೆ ಬಹಿರಂಗ ಪತ್ರ ಬರೆದಿರುವುದಾಗಿ ಸಂಘಟನೆಯ ಮುಖಂಡರಾದ ಪ್ರೊ. ಆರ್.ಕೆ. ಹುಡಗಿ, ಲೇಖಕಿ ಮೀನಾಕ್ಷಿ ಬಾಳಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋಮುದ್ವೇಷದ ದಳ್ಳುರಿಯಲ್ಲಿ ನಾಡಿನ ಸಾಮಸ್ಯವನ್ನು ಕೆದಕಿ ಶೂದ್ರ ಮಕ್ಕಳನ್ನು ಕ್ರಿಮಿನಲ್‌ಗಳಾಗಿ ಪರಿವರ್ತಿಸಲೆಂದೇ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ಆರೆಸ್ಸೆಸ್ ಶತಮಾನೋತ್ಸವದ ಆರಂಭೋತ್ಸವವಾಗಿರುವುರಿಂದ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದು ಉಳಿದ ರಾಜಕಾರಣಿಗಳಿಗೆ ಮಾದರಿ ಆಗಬೇಕು’ ಎಂದರು.
ಜನವರಿ ೨೯ರಿಂದ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ಆಳ, ಅಗಲ, ಅಪಾಯ ತಿಳಿಸಲು ಪ್ರಯತ್ನ ನಿರಂತರವಾಗಿ ನಡೆದಿದೆ. ಜಾತ್ಯತೀತ ನಿಲುವಿನ ಹಲವು ರಾಜಕಾರಣಿಗಳು, ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಉತ್ಸವದ ಉದ್ಧೇಶ ಅರಿಯದೆ ಹೋಗುವವರಿದ್ದು, ಅವರಿಗೆ ಪತ್ರದ ಮೂಲಕ ಮನವರಿಕೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿಂತಕ ಪ್ರೊ.ಆರ್.ಕೆ. ಹುಡಗಿ ಮಾತನಾಡಿ, ಭಾರತ ಎಂಬ ಕಲ್ಪನೆ ದೂರ ಮಾಡುವ ಸಂಘಟನೆಯ ವಿರುದ್ಧ ಹೋರಾಟ ನಡೆಸುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಉತ್ಸವ ಮಾಡುವವರು ವೈರಿಗಳಲ್ಲ, ಎದುರಾಳಿಗಳು. ಪ್ರಜಾಸತ್ತಾತ್ಮಕವಾಗಿ ಅವರನ್ನು ಎದುರಿಸುತ್ತೇವೆ ಎಂದರು.
ಉತ್ಸವವೂ ರಾಷ್ಟ್ರೀಯ ಸರ್ವನಾಶ ಸಂಘದ ಸಿದ್ಧಾಂತಗಳನ್ನು ಅನುಷ್ಠಾನ ಮಾಡಲು ಹೊರಟಿದೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಂಥ ಸಣ್ಣ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ಅನುಮಾನಾಸ್ಪದ ನಡೆಯಾಗಿದೆ. ಸ್ವರ್ಣ ಜಯಂತಿ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದು, ವಿಷ ಬಿತ್ತುತ್ತಿದ್ದಾರೆ. ಜನರು ಪ್ರಜ್ಞಾವಂತರಾಗಲಿ ಎಂದು ಬಹಿರಂಗ ಪತ್ರ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲವಿತ್ರ ವಸ್ತ್ರದ, ರವಿ ಸಜ್ಜನ, ಮಾರುತಿ ಗೋಖಲೆ, ಅಫ್ಜಲ್ ಮಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
Neevu Bari vakaltana Bagge ashte maat aadri , sangathane bann madodu Bagge nimug en ri adikara.