​ದ್ವೇಷ ಭಾಷಣ: ಪ್ರತಾಪ್‌ ಸಿಂಹ ವಿರುದ್ಧ ಶಹಾಪುರದಲ್ಲಿ ಪ್ರಕರಣ

ಬಸವ ಮೀಡಿಯಾ
ಬಸವ ಮೀಡಿಯಾ

ಯಾದಗಿರಿ:

ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿ ಐವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಅಘಾತವನ್ನುಂಟು ಮಾಡುವ ಉದ್ದೇಶದಿಂದ ದ್ವೇಷ ಮತ್ತು ಗಲಭೆಗೆ ಪ್ರಚೋದನೆ ನೀಡುವ ಭಾಷಣ ಮಾಡಿದಕ್ಕೆ ಕಲಂ 299, 192, ಬಿಎನ್‌ಎಸ್–2023ರ ಅಡಿಯಲ್ಲಿ ಪಿಎಸ್ಐ ಶಾಮಸುಂದರ್ ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 21ರಂದು ಶಹಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಮೆರವಣಿಗೆ ವೇಳೆ ಪ್ರತಾಪ್ ಸಿಂಹ ಹಿಂದೂ–ಮುಸ್ಲಿಂ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಮತ್ತು ಗಲಭೆಗೆ ಪ್ರಚೋದನೆ ನೀಡುವ ಮಾತುಗಳನ್ನು ಆಡಿದ್ದಾರೆ. ಅವರು ಗಲಭೆಗೆ ಪ್ರಚೋದಿಸುವುದು ವಿಡಿಯೊದಲ್ಲಿ ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರಾದ ಕರಣ್‌ ಚಂದ್ರಶೇಖರ್ ಸುಬೇದಾರ್, ಶಿವಕುಮಾರ್ ಭೀಮರಾಯ ಶಿರವಾಳ, ಗುರುರಾಜ್ ಈರಣ್ಣ ಕಾಮಾ, ನಾಗಭೂಷಣ ತಿಪ್ಪಣ್ಣ ಕುಂಬಾರ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘ಹಿಂದೂಗಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಸ್ಲಿಮರು ಯಾವ ರೀತಿ ಪೆಟ್ರೋಲ್ ಬಾಂಬ್, ತಲವಾರ್‌ ತೋರಿಸುತ್ತಾರೋ, ಕಲ್ಲು ತೂರಾಟ ಮಾಡುತ್ತಾರೋ ಅದೇ ರೀತಿ ನೀವು ಕೂಡ ಸನ್ನದ್ಧರಾಗಿ ಮೆರವಣಿಗೆಗೆ ಹೋಗಿ’ ಎಂದು ಪ್ರತಾಪ್‌ ಸಿಂಹ ಭಾಷಣ ಮಾಡಿದ್ದರು.

ತಲೆ ಕೆಟ್ಟಿದೆ

ನಗರದಲ್ಲಿ ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು,

‘ಹಿಂದೂಗಳನ್ನು ಗುತ್ತಿಗೆ ಹಿಡಿದವರಂತೆ ಮಾತಾಡುವುದು ಪ್ರತಾಪ ಸಿಂಹ ನಿಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಂಗಳವಾರ ಹೇಳಿದರು.

‘ಟಿಕೆಟ್ ಕಳೆದುಕೊಂಡು ಪ್ರತಾಪ ಸಿಂಹ ಸ್ವಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಬಟ್ಟೆ, ದಾಡಿ ನೋಡಿದರೆ ಅವರ ತಲೆ ಕೆಟ್ಟಿದೆ ಎಂಬುವುದು ಕಾಣುತ್ತದೆ’ ಎಂದು ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *