ಧಾರವಾಡ
ಸಮಾಜವನ್ನು ವಿಭಜಿಸಲು ರೋಗಗ್ರಸ್ತ ಮನಸ್ಸುಗಳು ಅಭಿಯಾನ ನಡೆಸುತ್ತಿವೆ ಎಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಗುರುವಾರ ಹೇಳಿಕೆ ನೀಡಿದ್ದರು.
ಅದಕ್ಕೆ ಇಂದು ಸಾಣೇಹಳ್ಳಿ ಶ್ರೀಗಳು ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಆಶೀರ್ವಚನ ನೀಡುತ್ತಾ ‘ಕೆಲವರು ಈ ಅಭಿಯಾನ ರೋಗಗ್ರಸ್ತವಾಗಿದೆ ಎಂದು ಹೇಳಿದ್ದಾರೆ, ಆದರೆ ಅಭಿಯಾನ ಹಲವಾರು ರೋಗಗಳಿಗೆ ಔಷಧಿಯಾಗುತ್ತಿದೆ’ ಎಂದು ಹೇಳಿದರು.
ಅನೇಕರು ಈ ಅಭಿಯಾನದಿಂದಾಗಿ ನಿದ್ರೆ ಕೆಡಿಸಿಕೊಂಡಿದ್ದಾರೆ. ಈ ವೇದಿಕೆಯ ಮೇಲೆ ಢೋಂಗೀ ಸ್ವಾಮಿಗಳಿದ್ದಾರೆ ಎನ್ನುತ್ತಿದ್ದಾರೆ. ಸರಕಾರ ಈ ಸ್ವಾಮಿಗಳಿಗೆ ಕೋಟಿ ಕೋಟಿ ಹಣ ಕೊಟ್ಟಿದೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಬಾಯಿ ಚಪಲಕ್ಕಾಗಿ ಹೇಳುತ್ತಿರುವ ಮಾತು.
ಇಲ್ಲಿರುವ ಎಲ್ಲಾ ಸ್ವಾಮಿಗಳು ನಾವೇ ಐದು-ಹತ್ತು ಲಕ್ಷಗಳನ್ನು ಕೊಟ್ಟು ಕಾರ್ಯಕ್ರಮ ನಡೆಸುತ್ತಿದ್ದೇವೆ. ನಾವಿಂದು ನಮ್ಮೆಲ್ಲ ಮಠಗಳ ಕೆಲಸ ಕಾರ್ಯಗಳನ್ನು ಬಿಟ್ಟು, ಅಭಿಯಾನದ ಯಶಸ್ವಿಗಾಗಿ ಬದ್ಧರಾಗಿದ್ದೇವೆ. ಅಭಿಯಾನ ನಿಮ್ಮ ಬೆಂಬಲದಿಂದ ಯಶಸ್ವಿಯಾಗುತ್ತಿದೆ.
ಇಲ್ಲಿರುವ ಎಷ್ಟೋ ಪೂಜ್ಯರು ಮಾತನಾಡುತ್ತಿಲ್ಲ. ಆದರೂ ಮೌನವಾಗಿ ನಮ್ಮೊಂದಿಗಿದ್ದಾರೆ ಕಾರಣ ಅವರಿಗೆ ತತ್ವದ ಮೇಲಿರುವ ಅಭಿಮಾನ. ಅವರಂತೆ ನಾವು ವೇಷ ಬದಲಾಯಿಸುವವರಲ್ಲ.
ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಬರೆಸಬೇಕು, ಎಂದು ಹೇಳಿದರು.