ನರಗುಂದ
ರಾಮದುರ್ಗ ತಾಲೂಕು ಕಲ್ಲೂರು ಸಿದ್ದೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಸ್ವಾಮೀಜಿ ಕೈಗೊಂಡ ಮೌನಲಿಂಗಾನುಷ್ಠಾನ ಜುಲೈ ೨೫ರಂದು ಮಂಗಳಗೊಳ್ಳಲಿದೆ.
ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿದ್ಯವಹಿಸುವರು. ತೋರಗಲ್ಲ ಪಟ್ಟಾದ್ಯಕ್ಷರು, ಅವರಾದಿ ಶ್ರೀಗಳು, ಕಟಕೋಳ ಶ್ರೀಗಳು, ರಾಮದುರ್ಗ ಶ್ರೀಗಳು, ಮೊರಬದ ಶ್ರೀಗಳು, ಪತ್ರಿವನ ಶ್ರೀಗಳು, ನರಗುಂದ ಪಂಚಗ್ರಹ ಶ್ರೀಗಳು, ನರಗುಂದ ವಿರಕ್ತಮಠದ ಶ್ರೀಗಳು, ಕೊಣ್ಣೂರ ವಿರಕ್ತಮಠ ಶ್ರೀಗಳು, ಆನಂದ ದೇವರು ಸಾನಿಧ್ಯ ವಹಿಸುವರು.
ದೇವಸ್ಥಾನ ಕಮೀಟಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ, ಪುಣೆಯ ಡಾ. ಶಶಿಕಾಂತ ಪಟ್ಟಣ, ಅಣ್ಣಾರಾವ ಬಿರಾದಾರ, ಮುಂಡರಗಿಯ ನಾಗೇಶ ಹುಬ್ಬಳ್ಳಿ, ಬಸವರಾಜ ಚಿಕ್ಕಮಠ, ಧಾರವಾಡದ ಸುರೇಶ ಪೂಜಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೂಜ್ಯರು ಜಂಗಮಲಿಂಗ ಕ್ಷೇತ್ರ ಯಡೆಯೂರು ಸಿದ್ಧಲಿಂಗೇಶ್ವರ ಸನ್ನಿದಿಯಲ್ಲಿ ೧೦೧ ದಿನಗಳ ಕಾಲ ಮೌನಲಿಂಗಾನುಷ್ಠಾನ ಪೂರೈಸಿದರು. ಅಂದಿನಿಂದ ಪ್ರತಿವರ್ಷ ಲಿಂಗಾನುಷ್ಠಾನ ಪ್ರಾರಂಭಿಸಿದ ಶ್ರೀಗಳು ಭೈರನಹಟ್ಟಿ, ಗೋವನಕೊಪ್ಪ, ತಪೋಕ್ಷೇತ್ರ ಕಗ್ಗೇರಿ, ಶಿರೋಳದಲ್ಲಿ ಪೂರೈಸಿ ೧೬ನೇ ವರ್ಷದ ಲಿಂಗಾನುಷ್ಠಾನ ರಾಮದುರ್ಗ ತಾಲೂಕಿನ ಸಿದ್ಧಕ್ಷೇತ್ರ ಕಲ್ಲೂರು ಸಿದ್ದೇಶ್ವರ ದೇವಸ್ಥಾನದಲ್ಲಿ ಕೈಗೊಂಡಿದ್ದಾರೆ.
ಶಾಂತಲಿಂಗ ಪೂಜ್ಯರು ಸಮಾಜವೆ ನನ್ನುಸಿರು ಎಂದುಕೊಂಡು ಅಧ್ಯಾತ್ಮಿಕ ಸಾಧನೆ, ಜೊತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ಸುತ್ತುತ್ತ ಜನರಲ್ಲಿರುವ ಮೌಡ್ಯಾಚರಣೆ, ದುಶ್ಚಟಗಳ ನಿವಾರಣೆ ಸೇರಿದಂತೆ, ಸದಾ ಸಮಾಜ ಸೇವೆಯಲ್ಲಿ ನಿರತರಾಗಿ ಯುವಕರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

