ದಾವಣಗೆರೆ:
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ 31, ಶನಿವಾರ ಬೆಳಿಗ್ಗೆ 11 ಘಂಟೆಗೆ,
ಹರಿಹರ ರಸ್ತೆ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಶರಣ ಚಿಕ್ಕೋಳ ಈಶ್ವರಪ್ಪನವರಿಗೆ ಶರಣಸಿರಿ ಪ್ರಶಸ್ತಿ ಪ್ರಧಾನ ಮತ್ತು ಲಿಂಗೈಕ್ಯ ಶ್ರೀಮತಿ ಹಾಲಮ್ಮ ಮತ್ತು ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಭೀಮಸಮುದ್ರ ಇವರ ದತ್ತಿ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವರಾದ ಶರಣ ಜಿ. ಎಂ. ಸಿದ್ದೇಶ್ವರ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ ವಹಿಸುವರು.
ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಮಾತನಾಡುವರು. ದತ್ತಿ ದಾನಿಗಳ ಪರಿಚಯವನ್ನು ಎಚ್.ಕೆ. ಲಿಂಗರಾಜು ಮಾಡಿಕೊಡುವರು. ವಚನಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಡಾ. ಗೀತಾ ಬಸವರಾಜು ಉಪನ್ಯಾಸ ಮಾಡುವರು. ಸಮಾರಂಭದಲ್ಲಿ ಬಿ. ವಾಮದೇವಪ್ಪ, ಜಿ.ಎಂ. ಲಿಂಗರಾಜು, ಡಾ. ಹೆಚ್.ಡಿ. ಮಹೇಶಪ್ಪ, ಡಾ. ಸುನೀಲಕುಮಾರ ಬಿ.ಎಸ್, ಡಾ. ಬಿ.ಆರ್. ಶ್ರೀಧರ, ಪ್ರಮೀಳಾ ನಟರಾಜ್, ಮಮತಾ ನಾಗರಾಜ, ಡಾ. ಶಿವರಾಜ ಕಬ್ಬೂರು ಉಪಸ್ಥಿತರಿರುವರು.
