ಶರಣ ಸ್ಮಾರಕಗಳ ರಕ್ಷಣೆಗೆ ಸ್ವತಂತ್ರ ಸಚಿವಾಲಯ ಸ್ಥಾಪಿಸಲು ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

೪೬ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ-೨೦೨೫ ಭಾಗವಾಗಿ ಹಮ್ಮಿಕೊಂಡಿರುವ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿದ  ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ನಾಲ್ಕು ನಿರ್ಣಯಗಳು ಮಂಡಿಸಿದರು. ನೆರೆದ ಬಸವಭಕ್ತರು ಚಪ್ಪಾಳೆ ತಟ್ಟಿ ನಿರ್ಣಯಗಳಿಗೆ ಅನುಮೋದಿಸಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ತತ್ವಗಳು ಜಗದಗಲ ಪ್ರಸಾರವಾಗಬೇಕೆಂದು ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ನೂತನ ಅನುಭವಮಂಟಪ ನಿರ್ಮಾಣಕ್ಕಾಗಿ ದುಡಿದರು.

ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಅನುಭವಮಂಟಪ ಉತ್ಸವದ ಮೂಲಕ ಕನ್ನಡ ನಾಡಿನ ಹಾಗೂ ಹೊರನಾಡಿನ ಸದ್ಭಕ್ತರನ್ನು ಒಗ್ಗೂಡಿಸಿ, ಬಸವಪ್ರಜ್ಞೆ ಜಾಗೃತಗೊಳಿಸುವುದಕ್ಕಾಗಿ ಅವಿಶ್ರಾಂತವಾಗಿ ಕಾರ್ಯ ಮಾಡುತ್ತಿದ್ದಾರೆ.

ಶರಣರು ಬೋಧಿಸಿದ ತತ್ವಗಳನ್ನು ಆಚರಣೆಯಲ್ಲಿ ತರುವ ದಿಶೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಪೂಜ್ಯರ ಈ ಕಾರ್ಯಕ್ಕೆ ಸದ್ಭಕ್ತರೆ ದೊಡ್ಡ ಶಕ್ತಿಯಾಗಿದ್ದಾರೆ ಎಂದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶರಣು ಸಲಗರ ಅವರು ಉಪಸ್ಥಿತರಿದ್ದರು. ಡಾ. ಎಸ್.ಬಿ. ದುರ್ಗೆ ಅವರಿಂದ ಬಸವಗುರುಪೂಜೆ ನೆರವೇರಿಯಿತು. ವಿಧಾನ ಪರಿಷತ್ತು ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ಧಲಿಂಗಪ್ಪ ಪಾಟೀಲ, ಮಾಜಿ ವಿಧಾನ ಪರಿಷತ್ತು ಸದಸ್ಯರಾದ ವಿಜಯಸಿಂಗ್, ಗಣ್ಯರಾದ ಬಾಬು ವಾಲಿ, ಡಿ.ಕೆ. ಸಿದ್ರಾಮ, ಬಸವರಾಜ ಬುಳ್ಳಾ, ಡಾ. ದೇವಕಿ ನಾಗೂರೆ, ಶಶಿಕಾಂತ ದುರ್ಗೆ, ಡಾ.ಜೆ.ಎಸ್. ಭೂರಾಳೆ, ಆನಂದ ದೇವಪ್ಪ, ಶಿವಶರಣ ಬಿರಾದಾರ, ಸಿದ್ಧಣ್ಣ ಭೂಮಾ ಅವರು ಉಪಸ್ಥಿತರಿದ್ದರು.

ಶಿವಕುಮಾರ ಶಟಕಾರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಜಗನ್ನಾಥ ಪತಂಗೆ ಶರಣು ಸಮರ್ಪಣೆ ಮಾಡಿದರು. ಧೂಳಪ್ಪ ಮುಡಬಿ ಹಾಗೂ ಸಂಗಡಿಗರಿಂದ ವಚನ ಸಂಗೀತ ನಡೆಯಿತು.

ಉತ್ಸವದ ನಿರ್ಣಯಗಳು

೧) ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಭಾರತಾದ್ಯಂತ ಕೇಂದ್ರ ಸರಕಾರದಿಂದ ಆಚರಿಸುವಂತಾಗಬೇಕು.

೨) ಲಿಂಗಾಯತರು ಭೌಗೋಳಿಕವಾಗಿ ಹಿಂದುಗಳು ಆಗಿದ್ದಾರೆ. ಆದರೆ ಧಾರ್ಮಿಕವಾಗಿ ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಅದಕ್ಕಾಗಿ  ಲಿಂಗಾಯತ ಧರ್ಮಕ್ಕೆ ಕೇಂದ್ರ ಸರಕಾರದಿಂದ ಸಂವಿಧಾನಾತ್ಮಕವಾಗಿ ಅಲ್ಪಸಂಖ್ಯಾತ ಧರ್ಮ ಮಾನ್ಯತೆ  ಘೋಷಣೆಯಾಗಬೇಕು.

೩) ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.

೪)ದೇಶದಲ್ಲಿದ್ದ ಶರಣರ ಸ್ಮಾರಕಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರಕಾರ ಸ್ವತಂತ್ರ ಸಚಿವಾಲಯ ಸ್ಥಾಪಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *