ಶಿವಮೊಗ್ಗ:
ನಗರದ ಕುವೆಂಪು ರಂಗಮಂದಿರದಲ್ಲಿ ಬಸವಕೇಂದ್ರದ 310ನೇ ಶರಣ ಸಂಗಮ ಡಿಸೆಂಬರ್ 20ರಂದು ಶನಿವಾರ ಸಂಜೆ 6:30ಕ್ಕೆ ನಡೆಯಲಿದೆ.
ಸಾನಿಧ್ಯವನ್ನು ಶ್ರೀ ನಿಜಲಿಂಗಸ್ವಾಮಿಗಳು, ಉತ್ತರಾಧಿಕಾರಿಗಳು ಶ್ರೀ ಸಿದ್ದಸಂಸ್ಥಾನ ಮಠ, ನಿಡಸೋಸಿ ವಹಿಸಲಿದ್ದು, ನೇತೃತ್ವವನ್ನು ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮಿಗಳು, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ ವಹಿಸುವರು. ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ವಹಿಸುವರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ, ಇಸ್ರೋ/ಇಸ್ಟ್ರಾಕ್ನ ಚಂದ್ರಯಾನ-3ರ ಉಪಯೋಜನಾ ನಿರ್ದೇಶಕಿ ರೂಪ ಎಂ.ವಿ. ಅವರನ್ನು ಸನ್ಮಾನಿಸಲಾಗುವುದು.

ಹುಣಸಘಟ್ಟದ ಎಚ್.ಎಂ. ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದ ಎಚ್.ಎಂ. ಚಂದ್ರಶೇಖರಪ್ಪ ದತ್ತಿ ದಾನಿಗಳಾಗಿದ್ದಾರೆ.
