ಕಲಬುರಗಿ
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳದ ಆಶ್ರಯದಲ್ಲಿ ಮಹಾಂತ ನಗರದ ಬಸವ ಮಂಟಪದಲ್ಲಿ ಭಾನುವಾರ 9ನೇ ಶರಣ ಸಂಗಮ ಕಾರ್ಯಕ್ರಮ ಜರುಗಿತು.
ಕುರುಬ ಗೊಲ್ಲಾಳ, ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಪದಾಧಿಕಾರಿ ಉಷಾ ಸಜ್ಜನ್ ಅವರು ಶರಣರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಎಂ. ಮಂಜುಳಾಕ್ಷಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬಸವಾನುಯಾಯಿ ಜಗನ್ನಾಥ ರಾಚಟ್ಟೆ ಅಧ್ಯಕ್ಷತೆ ವಹಿಸಿದ್ದರು. ಬಾವರಾಜ ಕೋಣಿನ್ ಪ್ರಾಸ್ತಾವಿಕ ಮಾತನಾಡಿದರು. ಶೀಲಾ ಕಾಮಶೆಟ್ಟಿ ಸ್ವಾಗತಿಸಿದರು. ಮಾಲತಿ ರೇಶ್ಮಿ ವಂದಿಸಿದರು.
ಇದೇ ವೇಳೆಯಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಮಕ್ಕಳ ವಿಭಾಗ:
ಶರಣ್ಯ ಎಸ್. ಪಾಟೀಲ (ಪ್ರಥಮ), ಪ್ರಣವ ಶಿವರಂಜನ ಸತ್ಯಂಪೇಟೆ (ದ್ವಿತೀಯ), ದಾನೇಶ್ವರಿ ಉದಯಕುಮಾರ (ತೃತೀಯ).
ಹಿರಿಯರ ವಿಭಾಗ:
ಪಲ್ಲವಿ ಶ. ಕಲಶೆಟ್ಟಿ (ಪ್ರಥಮ), ಡಾ. ಅನ್ನಪೂರ್ಣ ಗೌರಾ (ದ್ವಿತೀಯ), ಸರ್ವಮಂಗಳಾ ಜೋಗೂರ (ತೃತೀಯ).
30ಕ್ಕಿಂತ ಹೆಚ್ಚು ವಚನ ಹೇಳಿದ ಬಸವರಾಜೇಶ್ವರಿ ಎಸ್. ಪಾಟೀಲ, ಸಾವಿತ್ರಿ ಪಾಲ್ಕಿ, ನೀಲಮ್ಮ ನೆಲೋಗಿ ಅವರನ್ನು ಸತ್ಕರಿಸಲಾಯಿತು.

ಡಾ. ಸುಲೇಖಾ ಮಾಲಿಪಾಟೀಲ, ವಿಶ್ವನಾಥ ಡೋಣೂರ ಅವರು ವಚನ ಕಂಠಪಾಠ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು.