ಹುಲಸೂರ:
ಸ್ಥಳೀಯ ಶ್ರೀ ಜಗದ್ಗುರು ಅಲ್ಲಮಪ್ರಭುದೇವರ ಶೂನ್ಯಪೀಠ ಅನುಭವ ಮಂಟಪದಲ್ಲಿ ಇಂದು ‘ಶರಣ ಸಂಸ್ಕೃತಿ ಉತ್ಸವ’ ಮತ್ತು ‘ವಚನ ರಥೋತ್ಸವ’ ನಡೆಯಲಿದೆ.
ಈ ಉತ್ಸವದ ಅಂಗವಾಗಿ ನವೆಂಬರ್ 30ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಇಂದು ಸಂಜೆ 6 ಗಂಟೆಗೆ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆಯ ಸಮಾರಂಭ ನಡೆಯಲಿದೆ. ಉತ್ಸವದ ಸನ್ನಿಧಾನವನ್ನು ಡಾ. ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರು ಮಾಡುವರು.
ಡಿಸೆಂಬರ್ 2ರಂದು ಮುಂಜಾನೆ 11:30 ಗಂಟೆಗೆ ಉತ್ಸವದ ಅಂಗವಾಗಿ ‘ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರಶಸ್ತಿ’ ಪ್ರಧಾನ ಸಮಾರಂಭ ನಡೆಯಲಿದೆ. ಈ ಸಮಾರಂಭವನ್ನು ಸಚಿವ ಆರ್. ಬಿ. ತಿಮ್ಮಾಪುರ ಉದ್ಘಾಟಿಸಲಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ 74 ಸಾಧಕರಿಗೆ ‘ಕಾಯಕ ರತ್ನ ಪ್ರಶಸ್ತಿ’ ನೀಡಲಾಗುವುದು.
ಮಧ್ಯಾಹ್ನ 3 ಗಂಟೆಗೆ ಬಸವಾದಿ ಶರಣರ ವಚನಕಟ್ಟುಗಳನ್ನು ಒಳಗೊಂಡ ‘ವಚನ ರಥೋತ್ಸವ’ ನಡೆಯಲಿದೆ. ರಥವನ್ನು ಶರಣೆಯರು ಎಳೆಯಲಿದ್ದಾರೆ.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಉತ್ಸವದ ಅಂಗವಾಗಿ ನವೆಂಬರ್ 26 ರಿಂದ ಡಿಸೆಂಬರ್ 2ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ.
