ಶರಣ ವಿಜಯೋತ್ಸವ: ತಾಯಿಯ ಕರಳು ನಾಟಕ ಪ್ರದರ್ಶನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ತಾಯಿ ಎಂಬ ಎರಡಕ್ಷರದಲ್ಲಿ ಅದ್ಭುತ ಶಕ್ತಿಯಿದೆ. ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಎಲ್ಲರೂ ಗುರು-ಹಿರಿಯರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಇಲ್ಲಿನ ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಆರನೇ ದಿನ ನಡೆದ ತಾಯಿಯ ಕರಳು ನಾಟಕ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿಕೊಂಡು ಮಾತನಾಡಿ, ತಾಯಿ ತ್ಯಾಗಮಯಿ ಅವಳು ತನ್ನ ಪ್ರಾಣ ನೀಡಿಯಾದರೂ ತನ್ನ ಮಗನನ್ನು ಬದುಕಿಸಿಕೊಳ್ಳುತ್ತಾಳೆ. ತನ್ನ ಕೊನೆಯ ಉಸಿರುವವರೆಗೂ ಜೊತೆಗೆ ಇರುವವಳು ಏಕೈಕ ಮಾತ್ರ ತಾಯಿ. ಇಂದಿನ ಯುವಕರಿಗೆ ಗುರು-ಹಿರಿಯರ ಸೇವೆ ಮಾಡುವ ಮನೋಭಾವ ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ತಾಯಿಯು ಜಗತ್ತಿನಲ್ಲಿ ದೇವರ ರೂಪ. ನಮಗೆ ಜನ್ಮ ನೀಡಿದ ತಂದೆ-ತಾಯಿಯವರೇ ನಿಜವಾದ ದೇವರು ಹರಕೆ ಹೊತ್ತು, ತೀರ್ಥ ಯಾತ್ರೆ ಮಾಡುವುದಕ್ಕಿಂತ ತಂದೆ ತಾಯಿಯ ಸೇವೆ ಮಾಡುವುದೇ ನಿಜವಾದ ದೇವರಿಗೆ ಪೂಜಿಸಿದಂತೆ ಎಂದರು.

ಉದ್ಘಾಟಿಸಿದ ನಗರ ಸಭೆ ಪೌರಾಯುಕ್ತ ರಾಜು ಡಿ. ಬಣಕಾರ್ ಅವರು ಮಾತನಾಡಿ, ಪ್ರಪಂಚದಲ್ಲಿ ತಾಯಿ ಎಲ್ಲಕ್ಕಿಂತಲೂ ದೊಡ್ಡವಳು. ತಾಯಿಯ ಸ್ಥಾನ ಯಾರಿಂದಲೂ ತುಂಬಲೂ ಸಾಧ್ಯವಿಲ್ಲ. ನಿಸ್ವಾರ್ಥ ಮನಸ್ಸಿನ ಜೀವ ಎಂದರೆ ತಾಯಿ. ತಾಯಿಯೇ ಮೊದಲ ಗುರು, ತಾಯಿಯನ್ನು ಎಂದಿಗೂ ಮರೆಯಬಾರದು ಏಕೆಂದರೆ ಅವಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ತಾಯಿ ಎಂಬ ಶಬ್ದದಲ್ಲಿಯೇ ಔ಼ಷಧವಿದೆ ಎಂದು ಹೇಳಿದರು.

ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ ಮಾತನಾಡಿ, ಮಹಿಳೆ ತ್ಯಾಗಮಯಿ, ಅವಳಿಗೆ ಪ್ರೋತ್ಸಾಹ ನೀಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಸಂಯೋಜಕರಾದ ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜೀವನ ಪೂರ್ತಿ ನೆನಪಿಡುವಂತಹ ಕಾರ್ಯ ಮಾಡುವುದು ನಾಟಕ, ಕಲೆಗೆ ಪ್ರೋತ್ಸಾಹ ನೀಡಬೆಕು ಎಂದರು.

ವೇದಿಕೆ ಮೇಲೆ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ನಿರ್ದೇಶಕರಾದ ಕಾಶಪ್ಪಾ ಸಕ್ಕರಬಾವಿ, ಕಜಾಪ ಬೀದರ ಅಧ್ಯಕ್ಷ ಎಸ್.ಬಿ.ಕುಚಬಾಳ ಕಸಾಪ ತಾಲೂಕಾಧ್ಯಕ್ಷ ಶಾಂತಲಿಂಗ ಮಠಪತಿ, ಕಜಾಪ ಬೀದರ ಅಧ್ಯಕ್ಷರಾಧ ಭಕ್ತರಾಜ ಚಿತ್ತಾಪೂರೆ, ಮುಖಂಡರಾದ ಮನೋಹರ ಮೈಸೆ, ಅರ್ಜುನ ಕನಕ, ಸಂಜುಕುಮಾರ ಜಾಧವ ಬಸವರಾಜ ಗಾರಂಪಳ್ಳಿ, ಜಗದೀಶ ನೆಲವಾಡಕರ್, ಪ್ರಕಾಶ ಕನ್ನಾಳೆ ಇದ್ದರು

ಸಂತೋಷ ಮಡಿವಾಳ ಸ್ವಾಗತಿಸಿದರೆ, ಶೃತಿ ನಿರೂಪಿಸಿದರು. ಜ್ಯೋತಿ ಸಂಜಕುಮಾರ ಭಕ್ತಿ ದಾಸೋಹಗೈದರು.
ನಾಟಕ: ಬಸವರಾಜ ಕಟ್ಟಿಮನಿ ನಿರ್ದೇಶನದಲ್ಲಿ ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೆಕಲ್ ಅವರಿಂದ ಜರುಗಿದ ತಾಯಿಯ ಕರುಳು ನಾಟಕ ತಾಯಿಯ ತ್ಯಾಗಮಯ ಜೀವನದ ಕಥೆ ಘಟನೆಗಳು ಕಣ್ಣಂಚಿನಲ್ಲಿ ನೀರು ತರಿಸಿದವು.

Share This Article
Leave a comment

Leave a Reply

Your email address will not be published. Required fields are marked *