ಶರಣರ ಶಕ್ತಿ ಸಿನಿಮಾ ನವೆಂಬರ್ 22 ಚಿತ್ರಮಂದಿರಗಳಲ್ಲಿ ಬಿಡುಗಡೆ

ಎಂ. ಎ. ಅರುಣ್
ಎಂ. ಎ. ಅರುಣ್

ಬೆಂಗಳೂರು

ಶರಣರ ಶಕ್ತಿ ಸಿನಿಮಾ ಇದೇ ತಿಂಗಳು 22 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಬಸವಣ್ಣನವರ ಪಾತ್ರ ಮಾಡಿರುವ ಮಂಜುನಾಥ ಗೌಡ ಪಾಟೀಲ್ ಚಿತ್ರ ಮೊದಲು ಚಿತ್ರದುರ್ಗದ ಮೇಲಿರುವ ಪ್ರದೇಶಗಳಲ್ಲಿ ಬಿಡುಗಡೆಯಾಗುತ್ತದೆ, ನಂತರ ದಕ್ಷಿಣ ಕರ್ನಾಟಕದಲ್ಲಿ, ಎಂದು ಹೇಳಿದರು.

ವಿವಾದಕ್ಕೆ ಗುರಿಯಾಗಿರುವ ಚಿತ್ರವನ್ನು ಶರಣ ಸಮಾಜದ ಧಾರ್ಮಿಕ ಗುರುಗಳು ಮತ್ತು ಗಣ್ಯರು ಅಕ್ಟೋಬರ್ 7ರಂದು ವೀಕ್ಷಿಸಿ ಅದರಲ್ಲಿದ್ದ 15 ಪ್ರಮಾದಗಳನ್ನು ಗುರುತಿಸಿದ್ದರು.

ಶರಣರ ಶಕ್ತಿ ನಿರ್ದೇಶಕ ದಿಲೀಪ್ ಶರ್ಮ ಆ ದೋಷಗಳನ್ನು ಸರಿಪಡಿಸಿದೆ ಎಂದು ತಿಳಿಸಿದ ಮೇಲೆ ಜಾಗತಿಕ ಲಿಂಗಾಯತ ಮಹಾಸಭಾದ (JLM) ಧಾರವಾಡ ಘಟಕದ ಅಧ್ಯಕ್ಷ ಎಮ್. ವಿ. ಗೊಂಗಡಶೆಟ್ಟಿ ಅವರ ನೇತೃತ್ವದ 5 ಜನರ ತಂಡವೊಂದು ಅಕ್ಟೋಬರ್ 26ರಂದು ಚಿತ್ರವನ್ನು ವೀಕ್ಷಿಸಿದರು. ನಂತರ ಅಕ್ಟೋಬರ್ 28ರಂದು ಚಿತ್ರ ಬಿಡುಗಡೆಯಾಗಬಹುದೆಂದು JLM ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅವರಿಗೆ ಒಂದು ಪತ್ರದ ಮೂಲಕ ಶಿಫಾರಸು ಮಾಡಿದರು.

ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಗೊಂಗಡಶೆಟ್ಟಿ ಅವರು “ಶರಣರ ಶಕ್ತಿ ಚಿತ್ರದಲ್ಲಿ ಆಗಿರುವ ಬದಲಾವಣೆಗಳಿಂದ ನನಗೆ ಸಮಾಧಾನವಾಗಿದೆ. ಇದರ ಬಗ್ಗೆ ಒಂದು ವರದಿ ಕೊಟ್ಟಿದ್ದೇವೆ. ನಾನೊಬ್ಬನೇ ಸಿನಿಮಾ ನೋಡಿಲ್ಲ, ಜೊತೆಗೆ ನಾಲ್ಕು ಜನ ನೋಡಿದ್ದಾರೆ,” ಎಂದರು.

ಬಸವ ಕೇಂದ್ರದ ಪ್ರೊ ಜಿ ಬಿ ಹಳ್ಯಾಳ, ಡಾ. ಎಂ ಎಂ ಕಲ್ಬುರ್ಗಿ ಸಾಹಿತ್ಯ ಸಂಶೋಧನಾ ಸಮಿತಿಯ ಪ್ರೊ ಎಸ ವಿ ಪಟ್ಟಣಶೆಟ್ಟಿ, ಗುರುಬಸವ ಮಂಟಪದ ಶಶಿಧರ ಕರವೀಶೆಟ್ಟರ, JLMನ ಬಸವರಾಜ ಲಿಂಗಶೆಟ್ಟರ ಕೂಡ ಚಿತ್ರ ನೋಡಿ ವರದಿಗೆ ಸಹಿ ಹಾಕಿದ್ದಾರೆ.

ಮಂಜುನಾಥ ಗೌಡ ಪಾಟೀಲ್ ಸಮಸ್ಯೆಯಿದ್ದ ಸಂಭಾಷಣೆ ಮತ್ತು ದೃಶಗಳಲ್ಲಿ ಬದಲಾವಣೆ ಮಾಡಿದ್ದೇವೆ ಎಂದರು. ಚಿತ್ರದ ಕ್ಲೈಮಾಕ್ಸ್ನಲ್ಲಿ ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ದೇವಿ ಪ್ರಕಟವಾಗಿ ಕೈಲಾಸಕ್ಕೆ ಬಾ ಎಂದು ಕರೆಯುವ ದೃಶ್ಯ, ಶರಣೆ ಅಕ್ಕ ನಾಗಮ್ಮನವರ ಉದರದಿಂದ ಚನ್ನಬಸವಣ್ಣ ಮಾತನಾಡುವ ದೃಶ್ಯ ಮುಂತಾದವೆಲ್ಲಾ ಬದಲಾಗಿವೆ ಎಂದರು. ಮುಂಚೆ ಹೇಳಿದ್ದ ಬದಲಾವಣೆಗಳೆಲ್ಲ ಮಾಡಿದ್ದೇವೆ ಎಂದರು.

ಶರಣರ ಶಕ್ತಿ ಚಿತ್ರ ನಿರ್ದೇಶಕ ದಿಲೀಪ್ ಶರ್ಮ ಮತ್ತು ತಂಡ

ಯಾವ ಚಿತ್ರಮಂದಿರಗಳು ಸಿಗುತ್ತವೆ ಎಂದು ಇನ್ನೂ ನಿರ್ಧಾರವಾಗುತ್ತಿದೆ. ನಿರ್ದೇಶಕ ದಿಲೀಪ್ ಶರ್ಮ ಚೆನ್ನೈಗೆ ಹೋಗಿದ್ದಾರೆ. ಅವರು ಬಂದ ಮೇಲೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಹುಬ್ಬಳಿಯ ಮೂಲದ ವಿತರಕರೊಬ್ಬರ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

ಶರಣರ ಶಕ್ತಿಯ ಟ್ರೇಲರ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದಂತೆಯೇ ಸಿನಿಮಾ ವಿವಾದದ ಸುಂಟರಗಾಳಿಯನ್ನು ಎಬ್ಬಿಸಿತು. ಬಸವತತ್ವ ಚಿಂತಕ ಶಶಿಧರ ಕರವೀರಶೆಟ್ಟರ್ ಸಿನೆಮಾದ ಟ್ರೈಲರ್ ನಲ್ಲಿ ಗಂಭೀರ ಸಮಸ್ಯೆಗಳನ್ನು ಗುರುತಿಸಿ “ಇದೊಂದು ಅಸಹ್ಯ, ಅಸಂಬದ್ಧ ಸಿನೆಮಾ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾ ಶರಣೆ ಅಕ್ಕ ನಾಗಮ್ಮನವರ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ಅಶ್ಲೀಲ, ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ಚಿತ್ರಿಸಲಾಗಿದೆ. ‘ಮನೆಯೊಳಗೆ ಹೊಕ್ಕು ಲಿಂಗ ಕಟ್ಟುತ್ತೇವೆ’ ಎಂದು ಮಾತುಗಳನ್ನು ಬಳಸಿ ಶರಣರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಲು ಬರೆಯಲಾಗಿದೆ. ಹರಳಯ್ಯನ ಮಗ ಶೀಲವಂತ ಮತ್ತು ಲಾವಣ್ಯರ ನಡುವೆ affair ಇತ್ತು ಅನ್ನೋ ರೀತಿ ತೋರಿಸಿದ್ದಾರೆ ಎಂದು ಆರೋಪಿಸಿದ್ದರು.

ಶರಣರ ಶಕ್ತಿಯ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆದ ನಂತರ ಚಿತ್ರ ತಂಡ ಬೆಂಗಳೂರಿನ ಖಾಸಗಿ ಸಭಾಂಗಣದಲ್ಲಿ ವಿವಾದಿತ ಚಿತ್ರವನ್ನು ಲಿಂಗಾಯತ ಸಮಾಜದ ಮುಖಂಡರಿಗೆ ತೋರಿಸಿದರು.

ಟ್ರೈಲರ್ ನಲ್ಲಿ ಕಂಡಿದ್ದ ದೋಷಗಳನ್ನು ತೆಗೆದಿದ್ದರೂ ಚಿತ್ರದಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಂಡವು. ಬಸವಣ್ಣನವರ ಮೇಲೆ ಅವಹೇಳನಕಾರಿ ಭಾಷೆ ಪ್ರಯೋಗ, ಬಲಗೈನಲ್ಲಿ ಇಷ್ಟಲಿಂಗ, ಅಕ್ಕ ನಾಗಮ್ಮನವರ ಗರ್ಭದಿಂದಲೇ ಚನ್ನಬಸವಣ್ಣನವರು ಮಾತನಾಡುವುದು, ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ಒಂದು ದೇವತೆ ಬಂದು ಕೈಲಾಸಕ್ಕೆ ಬಾ ಎಂದು ಕರೆಯುವುದು ಮುಂತಾದ 15 ಗಂಭೀರ ಪ್ರಮಾದಗಳನ್ನು ಪಟ್ಟಿಯನ್ನು ಲಿಂಗಾಯತ ಸಮಾಜದ ಪರವಾಗಿ ಗುರುತಿಸಿ ಚಿತ್ರ ತಂಡಕ್ಕೆ ಕಳುಹಿಸಲಾಗಿತ್ತು.

Share This Article
2 Comments
  • ಬಸವ ತತ್ವಕ್ಕೆ ಅಪಚಾರವಾಗ ಹಗೆ ಎಚ್ಚರಿಕೆವಹಿಸಲು ಬಿಡುಗಡಗೆ ಮುಂಚೆ ಮತ್ತೋಮ್ಮೆ ಚಿತ್ರ ವಿಕ್ಷಣೆ ಮಾಡಿ ಒಪ್ಪಿಗೆ ನೀಡಿದರೆ ಸೂಕ್ತ

  • ಕಳೆದ ಬಾರಿ ಟ್ರೇಲರ್ ನಲ್ಲಿ ಸಾಕಷ್ಟು ತಪ್ಪುಗಳನ್ನು ಗುರುತಿಸಿ. ವಿಡಿಯೋ ಬಿಡುಗಡೆ ಮಾಡಿದ್ದೆವು. ಅದನ್ನು ಮನಗಂಡ ಚಿತ್ರ ತಂಡ ತಿಳಿಸಲಾಗಿದ್ದ ಅಷ್ಟು ವೀಡಿಯೊ ಗಳುನ್ನು ಎಡಿಟಿಂಗ್ ಮಾಡಿದ್ದರದೆ ಜೊತೆಗೆ ಸಾಕಷ್ಟು ವಿಡಿಯೋಗಳ ತಪ್ಪು ಮಾಹಿತಿ ಇರುವ ವಿಡಿಯೋಗಳನ್ನು ಎಡಿಟಿಂಗ್ ಮಾಡಲಾಗಿತ್ತಾದರೂ ಇನ್ನೂ ಸಾಕಷ್ಟು 15ಕ್ಕೂ ಹೆಚ್ಚಿನ ತಪ್ಪುಗಳನ್ನು ಗುರುತಿಸಿ ಸರಿಪಡಿಸುವಂತೆ ನಂತರ ಬಿಡುಗಡೆ ಮುನ್ನ ಮತ್ತೊಮ್ಮೆ ಚಿತ್ರ ತೋರಿಸಿ ಒಪ್ಪಿಗೆ ಪಡೆದು ನಂತರ ಬಿಡುಗಡೆ ಮಾಡಿ ಎಂದು ಹೇಳಲಾಗಿತ್ತು ನಿರ್ದೇಶಕರು ಸಹ ಸಮ್ಮತಿಸಿದ್ದರು . ಆದರೆ ಎಡಿಟಿಂಗ್ ನಂತರ ಸಿನಿಮಾ ತೋರಿಸಿಲ್ಲದೆ ಒಪ್ಪಿಗೆ ಪಡೆದಿಲ್ಲ ಬಿಡುಗಡೆಗೆ ಸಿದ್ದವಾಗಿದೆ.. ಈ ರೀತಿ ವರ್ತನೆ ಸರಿಯಲ್ಲ ಎಂದು ಹೇಳಬಯಸುತ್ತೇನೆ..

    ಪ್ರಭು..

Leave a Reply

Your email address will not be published. Required fields are marked *