ಶರಣರ ಶಕ್ತಿ ಚಿತ್ರ ಬಸವ ಸಂಸ್ಕೃತಿಯ ತೇಜೋವಧೆ ಮಾಡಿದೆ: ಟಿ ಆರ್ ಚಂದ್ರಶೇಖರ

ಎಂ. ಎ. ಅರುಣ್
ಎಂ. ಎ. ಅರುಣ್

ಅಸಹ್ಯ, ವಿಷಕಾರುವ, ತರ್ಕರಹಿತ, ಆಧಾರರಹಿತ ಚಲನ ಚಿತ್ರ ಶರಣರ ಶಕ್ತಿ.

ಇದು ಚಿಂತಕ ಟಿ ಆರ್ ಚಂದ್ರಶೇಖರ ಅವರ ಅಭಿಪ್ರಾಯ. ಬಸವ ಮೀಡಿಯಾದ ಜೊತೆ ಮಾತನಾಡುತ್ತ ಈ ಚಿತ್ರದ ಮತ್ತು ಅದಕ್ಕೆ ಜೋಡಿಯಾಗಿ ಬಂದಿರುವ ವಚನ ದರ್ಶನದ ಪುಸ್ತಕದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಮೀ) ಶರಣರ ಶಕ್ತಿ ಚಿತ್ರದಲ್ಲಿ “ಮನೆಗೆ ನುಗ್ಗಿ ಲಿಂಗ ಕಟ್ಟುತೀನಿ” ಎಂಬ ಸಂಭಾಷಣೆಯಿದೆ. ಲಿಂಗಾಯತ ಚರಿತ್ರೆಯಲ್ಲಿ ಇದಕ್ಕೇನಾದರು ಆಧಾರವಿದೆಯೇ?

ಇದು ಈ ಸಿನಿಮಾದವರ 21 ಶತಮಾನದ ಕಲ್ಪನೆ. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದು ‘ಏನಾದರೂ ಕೂಡಾ ಶರಣರು ನೊಂದು ಸೈರಿಸಬೇಕು’ ಎನ್ನುವ ಮಾತು.

ಬಸವಾದಿ ಶರಣರು ಹೊಸ ಸಾಮಾಜಿಕ ಮೌಲ್ಯಗಳನ್ನ ಪ್ರತಿಪಾದಿಸಲು ಆದ್ಯತೆ ನೀಡಿದರೆ ಹೊರತು ಆಚರಣೆಗಳಿಗಲ್ಲ. ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಿಲ್ಲು ಬಾಣ ಹಾಕಿದ್ದಾರಲ್ಲ ಆ ತರಹದ ಪರಿಭಾಷೆ ಮನೆಗೆ ನುಗ್ಗಿ ಲಿಂಗ ಕಟ್ಟುತ್ತೀನಿ ಅನ್ನುವುದು.

ಮೀ) ಒಂದು ದೃಶ್ಯದಲ್ಲಿ ಬಿಜ್ಜಳನ ಸಿಂಹಾಸನದ ಕೆಳಗೆ ಷಟ್ಸ್ಥಲದ ಮೆಟ್ಟಲುಗಳನ್ನು ತೋರಿಸಿದ್ದಾರೆ

ಬಿಜ್ಜಳ ತನ್ನ ಆಸ್ಥಾನದಲ್ಲಿ ಈ ತರಹದ ಸಿಂಹಾಸನ ರೂಡಿಸಿಕೊಂಡಿದ್ದ ಎನ್ನಲು ಯಾವ ಆಧಾರವು ಇಲ್ಲ. ಚರಿತ್ರೆಯಲ್ಲಿ ಈ ತರಹದ ಸಿಂಹಾಸನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ

ಮೀ) ಶರಣೆ ಅಕ್ಕ ನಾಗಮ್ಮನವರ ಬಗ್ಗೆ ಟ್ರೇಲರ್ ನಲ್ಲಿ ಲಿಂಗಾಯತರು ಕೆರಳುವಂತಹ ದೃಶ್ಯವಿದೆ…

ನಾವು ಕುಂತಿಗೆ ಯಾರು ಯಾರಿಂದ ಮಕ್ಕಳಾದರು ಅನ್ನುವ ಪ್ರಶ್ನೆ ಕೇಳೋಕ್ಕೆ ಆಗೊತ್ತ. ಇವೆಲ್ಲಾ ಕಥಾನಕದ ರೂಪದಲ್ಲಿ ಬರುವ ವಿಷಯಗಳು.

ಅಕ್ಕ ನಾಗಮ್ಮನವರು ಪ್ರತಿನಿಧಿಸಿದ ಮೌಲ್ಯ ಸಿದ್ದಾಂತ ಮುಖ್ಯ. ಅವರ ಬಗ್ಗೆ ಇಂತಹ ಪ್ರಶ್ನೆಗಳನ್ನು ಕೇಳುವ ಅಗತ್ಯ ಏನಿದೆ. ಇದು ಅನಾವಶ್ಯಕವಾಗಿ ವಿಕೃತಿಯನ್ನು ಉಂಟು ಮಾಡುವ ಕ್ರಮ. ಬಸವ ಸಂಸ್ಕೃತಿಯನ್ನು, ಶರಣರನ್ನು ತೇಜೋವಧೆ ಮಾಡುವ ಸಂಚು ಇದು.

ಮೀ) ಇವೆಲ್ಲಾ ಅಧ್ಯಯನದ ಕೊರತೆಯಿಂದ ಆಗಿರುವ ತಪ್ಪುಗಳು ಎಂದು ಅನಿಸುತ್ತದೆಯೇ?

ಇವೆಲ್ಲಾ ಅಧ್ಯಯನದ ಕೊರತೆಯಿಂದ ಆಗಿರುವ ತಪ್ಪುಗಳಲ್ಲ. ಇವು ಪ್ರಜ್ಞಾಪೂರಕವಾಗಿ, ಉದ್ದೇಶಪೂರಿತವಾಗಿ ಬಸವ ಸಂಸ್ಕೃತಿಯ ತೇಜೋವಧೆ ಮಾಡುವ ಪ್ರಯತ್ನ.

ಮೀ) ಇವರ ಉದ್ದೇಶವೇನು?

ಈ ಕೇಡಿನ ಮೂಲ ಕಾರಣ ಯಡಿಯೂರಪ್ಪ. ಇಡೀ ಲಿಂಗಾಯತ ಸಮುದಾಯವನ್ನ ಬಿಜೆಪಿಗೆ ಗುಲಾಮರನ್ನಾಗಿ ಮಾಡಿದ ಕೀರ್ತಿ ಅವರಿಗೆ ಹೋಗಬೇಕು.

ಆ ಮನುಷ್ಯ ಲಿಂಗಾಯತ ಲೀಡರ್ ಅಂತ ಹೇಳಿಕೊಂಡು ಬದುಕಿದರೂ ಸಾರ್ವಜನಿಕ ಭಾಷಣದಲ್ಲಾಗಲಿ, ವಿಧಾನ ಸಭೆಯಲ್ಲಾಗಲಿ ಎಂದೂ ವಚನಗಳನ್ನು ಉಲ್ಲೇಖಿಸಿದ್ದೇ ಇಲ್ಲ. ಅವರಿಗೆ ಇವೆಲ್ಲಾ ಬರುವುದೂ ಇಲ್ಲ.

ಕಳೆದ ವರ್ಷದ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಹೊಡೆತ ಬಿದ್ದಿರುವುದರಿಂದ ಸಂಘ ಪರಿವಾರಕ್ಕೆ ಬಹಳ ಆಘಾತವಾಗಿದೆ. ಅವರ ಶಕ್ತಿ ಕುಗ್ಗಿದೆ. ಅದಕ್ಕೆ ಮತ್ತೆ ಲಿಂಗಾಯತರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ನಾಗಪುರ ಮತ್ತು ಕೇಶವಕೃಪಾ ಈ ರೀತಿ ಪ್ರಯತ್ನಿಸುತ್ತಿದೆ.

ಆಮೇಲೆ, ಇಡೀ ಭಾರತದಲ್ಲಿ ಪುರೋಹಿತಶಾಹಿಗಳಿಗೆ ಆಪೋಶನ ಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಒಂದು ಸೈದಾಂತಿಕ ಪ್ರಣಾಳಿಕೆಯೆಂದರೆ ಅದು ಲಿಂಗಾಯತ ಪ್ರಣಾಳಿಕೆ. ಅದಕ್ಕೆ ಪುರೋಹಿತಶಾಹಿಗಳು ಈ ಪ್ರಣಾಳಿಕೆಯನ್ನ ನಾಶಮಾಡಲು ವ್ಯವಸ್ಥಿತವಾಗಿ ಹೊರಟಿದ್ದಾರೆ. ಇದರ ಭಾಗವಾಗಿಯೇ ವಚನ ದರ್ಶನ, ಶರಣರ ಶಕ್ತಿಗಳಂತಹ ಪ್ರಯತ್ನಗಳು ಬರುತ್ತಿರುವುದು.

ಈ ತಂಡದ ಲೇಖಕರು 2013ರಲ್ಲೇ ಈ ತರಹದ ದಾಳಿ ಮಾಡಿದ್ದರು. ಎರಡು ತಿಂಗಳ ಕಾಲ ಈ ಚರ್ಚೆ ಪ್ರಜಾವಾಣಿಯಲ್ಲಿ ನಡೆದಿತ್ತು. ಅದೇ ಈಗ ಇನ್ನೂ ತೀವ್ರವಾಗಿ ಮುಂದುವರೆದಿದೆ.

ಮೀ) ಈ ಅಪಾಯ ಜನರಿಗೆ ಅರ್ಥವಾಗುತ್ತಿದೆಯೇ?

ಸಿದ್ದನಗೌಡ ಪಾಟೀಲರು ಹೇಳುವಂತೆ ನಮ್ಮ ಹೊರಗಿನ ಶತ್ರುಗಳು ನಮಗೆ ಮುಕ್ತವಾಗಿ ಹೊಡೆಯುತಿಲ್ಲ, ಮುಚ್ಚಿ ಹೊಡೆಯುತ್ತಿದ್ದಾರೆ. ಮುಗ್ದ ಜನ ವಚನ ದರ್ಶನ ಟೈಟಲ್ ನೋಡಿ ಇದು ನಮ್ಮದೇ ಪುಸ್ತಕ ಇದನ್ನ ಯಾಕೆ ವಿರೋಧ ಮಾಡಬೇಕು ಅಂತ ಕೇಳ್ತಾರೆ.

ಲಿಂಗಾಯತ ಸಮಾಜದಲ್ಲಿ ದೊಡ್ಡ ದೂಡ ಸಾಧನೆ ಮಾಡಿರುವವರೆಲ್ಲರೂ ಆ ಕಡೆ ಹೋಗಿ ಅವರಿಗೆ ಗುಲಾಮರಾಗಿರುವುದು ನಮಗಾಗಿರುವ ಹಿನ್ನಡೆ. ಬಸವ ಮೌಲ್ಯ ನಾಶ ಮಾಡಲು ಬಂದಿರುವ ಪುಸ್ತಕಕ್ಕೆ ನಮ್ಮ ದೊಡ್ಡ ಮಠದ ಗುರುಗಳು ಆಶೀರ್ವಚನ ಬರೆದುಕೊಡ್ತಾರೆ. ಅದು ನಮ್ಮ ದುರಂತ. ನಮ್ಮ ದೊಡ್ಡ ಸಂಘಟನೆಗಳು, ದೊಡ್ಡ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಅವರು ನಮ್ಮ ಒಳಗಿನ ಶತ್ರುಗಳು.

ಇದೆಲ್ಲರ ಬಗ್ಗೆ ಜಾಗೃತಿ ಮೂಡಿಸಿವುದು ಕಷ್ಟದ ಕೆಲಸ.

ಮೀ) ಆ ಕೆಲಸ ಆಗ್ತಾ ಇದ್ದೀಯ

ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಆಗ್ತಾ ಇದೆ.

ಮೊನ್ನೆ ಗದಗಿನ ಜಾಗತಿಕ ಲಿಂಗಾಯತ ಮಹಾಸಭೆಯ ಮೀಟಿಂಗಿನಲ್ಲಿ ಬೆಂಗಳೂರಿನಲ್ಲಿ ಯುವ ಸಮ್ಮೇಳನ ಮಾಡಬೇಕು ಅನ್ನೋ ಪ್ರಸ್ತಾವ ಬಂತು. ನಾನು ಎರಡು ಲಕ್ಷ ಕೊಡ್ತೀನಿ, ನಾನು ಐದು ಲಕ್ಷ ಕೊಡ್ತೀನಿ ಅಂತ ತುಂಬಾ ಜನ ಮುಂದೆ ಬಂದರು. ಬಂದರು. ಅಷ್ಟೊಂದು ಉತ್ಸಾಹ ಇದೆ ಜನರಲ್ಲಿ. ಅದನ್ನ ಬಳಸಿಕೊಳ್ಳೋ ಕೆಲಸ ನಮ್ಮ ಸಂಘಟನೆಗಳು ಮಾಡಬೇಕು.

ವೈಯಕ್ತಿಕವಾಗಿ ಜಾಗೃತಿ ಹೆಚ್ಚುತ್ತಿದೆ. ಅದು ಬಲಿಷ್ಠ ಸಂಘಟನೆಯಾಗಿ ಬೆಳೆಯಬೇಕು.

Share This Article
3 Comments
  • ನಮ್ಮ ಲಿಂಗಾಯತ ಧರ್ಮದ ಲೀಡ್ ನಲ್ಲಿರುವ ಎಲ್ಲಾ ಪಕ್ಷಗಳ ಲೀಡರ್ ಗಳು ಶರಣರ ವಚನಗಳನ್ನು ಹಾಗೂ ಶರಣರ ಜೀವಿತದ ಮೌಲ್ಯಗಳನ್ನು ಮೊದಲು ಅರ್ತೈಸಿಕೊಂಡುದೆ ಆದರೆ ಲಿಂಗಾಯತ ಧರ್ಮದ ಸಿದ್ದಾಂತ ಗಳನ್ನು ಅಲ್ಲಿಗೆಳೆಯಲು ಯಾರೂ ಸಹ ಮುಂದಾಗುವುದಿಲ್ಲ‌! ಈ ಲೀಡರ್ ಗಳು ಮತಗಳ ಸಂಗ್ರಹಕ್ಕಾಗಿ…ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ
    ತಮ್ಮ ತಮ್ಮ ಕುರ್ಚಿಗಳನ್ನು ಭದ್ರ ಪಡಿಸಿಕೊಳ್ಳುತ್ತಿದ್ದಾರೆ …ಬಸವಾದಿ ಶರಣರ ಬಗ್ಗೆ ಯಾರು ಕಿಂಚಿತವಾಗಿ ಮಾತನಾಡಿದರೆ? ನಮಗಲ್ಲಾ ಎಂಬಂತೆ ಜಾಣ ಕಿವುಡರಾಗುತ್ತಾರೆ.
    ಪ್ರಜ್ಞಾವಂತ ಲಿಂಗಾಯತರೆ ಮುಂದಿನ ದಿನಮಾನಗಳಲ್ಲಿ ಸ್ವಾರ್ತ ರಾಜಕಾರಣಿಗಳಿಗೂ ಸಹ ಉತ್ತರ ಕೊಡಬೇಕಾಗಿದೆ…..

  • ಶೇಖರಪ್ಪ ಸಿದ್ಧಲಿಂಗಪ್ಪ ಕಳಸಾಪೂರಶೆಟ್ರ. ಗದಗ. says:

    ಶರಣ ಧರ್ಮ .. ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಸರಿಯಾಗಿ ಅರ್ಥಮಾಡಿಕೊಂಡಲ್ಲಿ ಇಂತಹ ಅವಘಡಗಳು ಸಂಭವಿಸುವುದಿಲ್ಲ.

Leave a Reply

Your email address will not be published. Required fields are marked *