ಬಡ ಪ್ರತಿಭಾವಂತರಿಗೆ ಮಹಾಂತೇಶ ಬೀಳಗಿ ಆದರ್ಶವಾಗಲಿ: ನಿಜಗುಣಪ್ರಭು ಶ್ರೀ

ಕವಿ ಬಂಕಾಪುರ
ಕವಿ ಬಂಕಾಪುರ

ಮುಂಡರಗಿ:

ಬಸವಾದಿ ಶರಣರ ವಚನಗಳಲ್ಲಿ ನಮ್ಮ ಪ್ರತಿ ಸಮಸ್ಯೆಗೆ ಪರಿಹಾರ, ಪ್ರಶ್ನೆಗೆ ಉತ್ತರಗಳು ದೊರಕುತ್ತವೆ. ಇತಿಹಾಸದಲ್ಲಿ‌ ನಾವು ಉಳಿಯಬೇಕಿದ್ದರೆ ಬದುಕಿನಲ್ಲಿ ಉತ್ತಮರಾಗಿ ಬಾಳಬೇಕು. ಬಡತನದ ಸಮಸ್ಯೆಯನ್ನು ಪ್ರತಿಭೆ ಮೂಲಕ ಬರೆಹರಿಸಿಕೊಳ್ಳಲು ಸಾಧ್ಯ ಎಂದು ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ನಡೆದ 61ನೇ ತ್ರೈಮಾಸಿಕ ಶಿವಾನುಭವ, ಕಾರ್ತಿಕ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಡತನ ಇರವವರೂ ಪ್ರತಿಭೆ ಹೊಂದಿದ್ದರೆ ಖಂಡಿತವಾಗಿ ಬೆಳೆಯಬಹುದು ಎನ್ನುವುದಕ್ಕೆ ಐಎಎಸ್ ಹಿರಿಯ ಅಧಿಕಾರಿಯಾಗಿದ್ದ ಮಹಾಂತೇಶ ಬೀಳಗಿ ಸಾಕ್ಷಿಯಾಗುತ್ತಾರೆ. ಅವರು ಸಹ ಬಡತನದಲ್ಲಿ ಹುಟ್ಟಿದ್ದರೂ ತಮ್ಮ ಪ್ರತಿಭೆ, ಶ್ರಮದಿಂದ ಸಾಧನೆ ಮಾಡಿ ಸೈ ಎನಿಸಿಕೊಂಡರು. ಉತ್ತಮ ರೀತಿಯಲ್ಲಿ ಸಮಾಜ, ನಾಡಿನ ಸೇವೆಗೈದರು ಎಂದರು.

ಸಹಾಯಕ ಪ್ರಾಧ್ಯಾಪಕ ಮಂಜುನಾಥ, ಪತ್ರಕರ್ತ ಸಂತೋಷ ಮುರಡಿ, ಶಿಕ್ಷಕ ಸಂತೋಷ‌ ಅಂಗಡಿ ಮಾತನಾಡಿದರು.

ಈಚೆಗೆ ಲಿಂಗೈಕ್ಯರಾದ ಐಎಎಸ್ ಹಿರಿಯ ಅಧಿಕಾರಿ ಮಹಾಂತೇಶ ಬೀಳಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬೀಳಗಿ ಅವರ ಕುರಿತು ಶರಣ ಚಿಂತಕ ವಿಜಯ ದೊಡ್ಡವಾಡ ನುಡಿನಮನ ಸಲ್ಲಿಸಿದರು.

ವಿವಿಧ ರಂಗದಲ್ಲಿ ಸಾಧನೆಗೈದ ಸಂತೋಷ ಅಂಗಡಿ, ಕಾಶೀನಾಥ ಅಳವಂಡಿ, ಸಂತೋಷ ಮುರಡಿ, ಮಹಾಲಿಂಗಯ್ಯ ಹಿರೇಮಠ, ಮಹಾಂತೇಶ ತ್ಯಾಮನವರ, ರಕ್ಷಿತಾ ಮಂಡಲಗೇರಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು.

ಜಗದೀಶ ಕಲ್ಯಾಣಿ ಹಾಗೂ ಕುಟುಂಬದವರು ದಾಸೋಹಸೇವೆ ವಹಿಸಿಕೊಂಡಿದ್ದರು. ಬಸಯ್ಯ ಗಿಂಡಿಮಠ, ವೀರಣ್ಣ ಮಡಿವಾಳರ, ಶಿವಕುಮಾರ ಬೆಟಗೇರಿ, ಎಸ್.ಎಸ್.ಗಡ್ಡದ, ಪಾಲಾಕ್ಷ್ಮಿ ಗಣದಿನ್ನಿ, ಈಶಣ್ಣ ಬೆಟಗೇರಿ, ದೇವೇಂದ್ರಪ್ಪ ರಾಮೇನಹಳ್ಳಿ, ಬಿ.ವಿ. ಮುದ್ದಿ, ಪವನ ಚೋಪ್ರಾ, ಸದಾಶಿವಯ್ಯ ಕಬ್ಬೂರಮಠ, ಮತ್ತಿತರರು ಇದ್ದರು.

ಶ್ರೇಯಾ ತ್ಯಾಪಿ ಧರ್ಮಗ್ರಂಥ ಪಠಿಸಿದರು. ಯಲ್ಲಮ್ಮ ಜಂಭಗಿ ವಚನ ಚಿಂತನ ಮಾಡಿದರು.
ಜಯಶ್ರೀ ಅಳವಂಡಿ ಹಾಗೂ ಶಿವಕುಮಾರ ಕುಬಸದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಕ್ತಾಯಕ್ಕ ಬಳಗದ ಸದಸ್ಯರು ಪ್ರಾರ್ಥಿಸಿದರು. ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಡಾ. ನಿಂಗು ಸೊಲಗಿ, ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *