ಸ್ವವಿಮರ್ಶೆಯಿಂದ ಸಮಸಮಾಜ ಕಟ್ಟಬಯಸಿದ ಶರಣರು

ಬೆಳಗಾವಿ

ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಾದಿ ಶರಣರ ವಚನಗಳಲ್ಲಿ ಸ್ವವಿಮರ್ಶೆ’ ಕುರಿತು ವಿಷಯವಾಗಿ ಡಾ. ಅ.ಬ. ಇಟಗಿ ಮಾತನಾಡಿದರು.

ವೈಚಾರಿಕ ವಿಚಾರಧಾರೆಯ ಸುಂದರ ಸಮಸಮಾಜದ ಕನಸು ಕಟ್ಟಿಕೊಂಡು ಅದನ್ನು ನನಸಾಗಲು ವ್ಯಕ್ತಿಯಲ್ಲಿ ಅಂತರಂಗ ಶೋಧ ನಡೆಸಬೇಕು. ನಮ್ಮ ನಮ್ಮಲ್ಲಿ ವಿಮರ್ಶೆ ಮಾಡಿಕೊಂಡಾಗ ಉತ್ತಮ ನಾಗರಿಕರಾಗಲು ನಮಗೆ ಸಾಧ್ಯವಾಗುತ್ತದೆ, ಎಂಬುದನ್ನು ಅರಿತು ಎಲ್ಲ ಶರಣರು ಅಹಂಕಾರ ನಿರಶನ ದೇಹ ಮತ್ತು ಮನಸ್ಸುಗಳ ವಿಷಯಗಳನ್ನು ವಚನಗಳ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ. ಅಹಂ ಅನ್ನು ಅಳಿಸಿ ಹಾಕಿ ಅನುಭಾವ ಸಾಹಿತ್ಯದ ಮೂಲಕ ಮನಕುಲವನ್ನೇ ಗೆದ್ದವರು ಶರಣರು. ಅವರ ನಡೆ-ನುಡಿ ಆಚಾರ ವಿಚಾರಗಳು ಈ ಜಗತ್ತಿಗೆ ಮಹಾಬೆಳಕಾಗಿದೆ ಎಂದು ತಿಳಿಸಿದರು.

ಆನಂದ ಕರಕಿ ಮತ್ತು ಕುಮಾರ ಪಾಟೀಲ ಅವರು ಬಸವಭಾವಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಸತೀಶ ಶುಗರ್ಸ್ ನೀಡುವ ಅತಿ ಹೆಚ್ಚು ಕಬ್ಬು ಉತ್ಪಾದನೆ ಬೆಳೆಗೆ ಉತ್ತಮ ಕೃಷಿ ಪ್ರಶಸ್ತಿ ಪಡೆದ ಶಂಕರ ಗುಡಸ ಅವರನ್ನು ಸನ್ಮಾನಿಸಲಾಯಿತು.

ಶಂಕರ ಗುಡಸ ಮಾತನಾಡುತ್ತಾ, ಅಂಗದ ಮೇಲೆ ಲಿಂಗ ಇರುವಾಗ ನಮಗೆ ಯಾವುದರ ಭಯ ಇರುವುದಿಲ್ಲ. ನಾವು ನಿರ್ಭಯವಾಗಿ ಬದುಕನ್ನು ಕಟ್ಟಿಕೊಂಡು ಬಾಳಬೇಕು ಎಂದರು.

ಶಶಿಭೂಷಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಿ ಅರಳಿ ಸಾಮೂಹಿಕ ಫ್ರಾಥ೯ನೆ ನಡಿಸಿಕೊಟ್ಟರು. ಆನಂದ ಕರಕಿ, ಶಿವಕುಮಾರ ಪಾಟೀಲ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಮಹಾದೇವ ಕೆ೦ಪಿಗೌಡ್ರ, ಸುವಣಾ೯ ಗುಡಸ, ಪ್ರೀತಿ ಮಠದ, ಸುನಿಲ ಸಾಣಿಕೊಪ್ಪ ಶರಣಶರಣೆಯರು ವಚನ ವಿಶ್ಲೇಷಿಸಿದರು.

ಸದಾಶಿವ ದೇವರಮನಿ, ಮಂಗಳಾ ಕಾಗತಿಕರ, ಜೋತಿ ಬದಾಮಿ, ನಂದಾ ಬಗಲಿ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಮಹದೇವಿ ಘಾಟೆ, ಬಸವರಾಜ ಕರಡಿಮಠ, ಫ.ಬಿ. ಕರಿಕಟ್ಟಿ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಗಿ, ಶಂಕರಣ್ಣಾ ಮೆಣಸಗಿ, ಶರಣ ಶರಣೆಯರು ಉಪಸ್ಥಿತರಿದ್ದರು.

ಸುನಂದಾ ಮಹದೇವ ಕೆಂಪಿಗೌಡ್ರ ದಾಸೋಹ ಸೇವೆಗೈದರು. ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *