ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರೂ, ಸುಮಾರು ಐದು ನಿಮಿಷ ಮಾತನಾಡಿದ ಪೇಜಾವರ ಶ್ರೀಗಳು ಒಮ್ಮೆಯೂ ಬಸವಣ್ಣನವರ ಹೆಸರನ್ನು ಹೇಳಲಿಲ್ಲ.
ಮಂಗಳೂರು
ವೈದಿಕ ಧರ್ಮದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ವಚನಗಳು ಸುಲುಭ ಕನ್ನಡದಲ್ಲಿ ಮನೆಮನೆಗೆ ತಲುಪಿಸಿದವು, ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಹೇಳಿದರು.
ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ನೇತೃತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.
ಶಿವನ ತಲೆಯ ಮುಡಿಯಲ್ಲಿ ಅಡಗಿದ್ದ ಗಂಗೆಯನ್ನು ಭಗೀರಥ ಭೂಮಿಗೆ ತಂದಂತೆ, ಶಾಸ್ತ್ರಗಳಲ್ಲಿ ಇರುವುದನ್ನು ವಚನಕಾರರು ಮತ್ತು ದಾಸರು ಸರಳ ಕನ್ನಡದಲ್ಲಿ ಮನೆಮನೆಗೆ ಹಂಚಿದರು, ಎಂದು ಪೇಜಾವರ ಶ್ರೀಗಳು ಹೇಳಿದರು.
ಶಿವನ ತಲೆಯ ಮುಡಿಯಲ್ಲಿ ಅಡಗಿದ್ದ ಗಂಗೆಯನ್ನು ಭಗೀರಥ ಭೂಮಿಗೆ ತಂದಂತೆ, ಶಾಸ್ತ್ರಗಳಲ್ಲಿ ಇರುವುದನ್ನು ವಚನಕಾರರು ಮತ್ತು ದಾಸರು ಸರಳ ಕನ್ನಡದಲ್ಲಿ
ಮನೆಮನೆಗೆ ಹಂಚಿದರು

ಶಾಸ್ತ್ರಗಳಿಂದ ಬಂದ ವಚನಗಳು
ವಚನಗಳು ವೈದಿಕ ಶಾಸ್ತ್ರಗಳಿಂದ ಉಗಮಿಸಿದವು ಎಂದು ಸೂಚಿಸಲು ಕೆಲವು ಉದಾಹರಣೆಗಳನ್ನು ಪೇಜಾವರ ಶ್ರೀಗಳು ನೀಡಿದರು. ಮೊದಲು ಸಂಸ್ಕೃತ ಶ್ಲೋಕ ಹೇಳಿ ಆ ಸಂದೇಶಗಳು ಅಡಕವಾಗಿರುವ ವಚನಗಳನ್ನು ಉಲ್ಲೇಖಿಸಿದರು.
ಕರ್ಮಣ್ಯೇ ವಾಧಿಕಾರಸ್ತೇ
ಮಾ ಫಲೇಷು ಕದಾಚನ
ಮಾ ಕರ್ಮಫಲ ಹೇತುರ್ಭೂ
ಮಾ ತೇ ಸಂಗೋಸ್ತ್ವ ಕರ್ಮಣಿ
ಈ ಭಗವದ್ಗೀತೆಯ ಶ್ಲೋಕವನ್ನೇ ಶರಣರು ಸುಲುಭವಾಗಿ ‘ಕಾಯಕವೇ ಕೈಲಾಸ’ ಎಂದು ಕರೆದರು, ಎಂದು ಹೇಳಿ ಪೇಜಾವರ ಶ್ರೀಗಳು ಮತ್ತೊಂದು ಉದಾಹರಣೆ ಕೊಟ್ಟರು.
ದೇವರ ಆರಾಧನೆಯನ್ನು ನಾವು ಶುಚಿಸಂಭೂತರಾಗಿ ಮಾಡಬೇಕು ಎಂದು ಮತ್ತೊಂದು ಸಂಸ್ಕೃತ ಶ್ಲೋಕ ಹೇಳುತ್ತದೆ.
ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿನ್ದ್ರಿಯ ನಿಗ್ರಹಃ
ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ
ಜ್ಞಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ
ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ
ಅದನ್ನೇ ತೆಗೆದುಕೊಂಡು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಎಂದು ಒಂದು ವಚನ ಹೇಳುತ್ತದೆ. ಶಾಸ್ತ್ರಗಳಲ್ಲಿ ಅಡಕವಾಗಿದ್ದ ತತ್ವಗಳನ್ನು ಕಾಲಕಾಲಕ್ಕೆ ಶರಣರು, ದಾಸರು ಸುಲುಭವಾದ ಕನ್ನಡದಲ್ಲಿ ಉಳಿಸಿ, ಬೆಳೆಸಿದರು ಎಂದು ಪೇಜಾವರ ಶ್ರೀಗಳು ಹೇಳಿದರು.
ಶಾಸ್ತ್ರಗಳಲ್ಲಿ ಅಡಕವಾಗಿದ್ದ ತತ್ವಗಳನ್ನು ಕಾಲಕಾಲಕ್ಕೆ
ಶರಣರು, ದಾಸರು ಸುಲುಭವಾದ ಕನ್ನಡದಲ್ಲಿ ಉಳಿಸಿ, ಬೆಳೆಸಿದರು
ಈ ತತ್ವಗಳು ಮನೆಮನೆಗೆ ಮುಟ್ಟಿ, ಬದುಕಿನಲ್ಲಿ ಆಚರಣೆಗೆ ಬಂದರೆ ಸಮ್ಮೇಳನ ಯಶಸ್ವಿಯದಂತೆ. ಆ ಯಶಸ್ಸನ್ನು ಕಾಣುವ ಭಾಗ್ಯ ನಮ್ಮೆಲ್ಲರಿಗೂ ಆ ಭಗವಂತ ಕರುಣಿಸಲಿ ಎಂದು ಹೇಳಿದರು.
ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರೂ, ಸುಮಾರು ಐದು ನಿಮಿಷ ಮಾತನಾಡಿದ ಪೇಜಾವರ ಶ್ರೀಗಳು ಒಮ್ಮೆಯೂ ಬಸವಣ್ಣನವರ ಹೆಸರನ್ನು ಹೇಳಲಿಲ್ಲ.
ಪೇಜಾವರ ಶ್ರೀಗಳ ಭಾಷಣಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿತು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಪೇಜಾವರ ಶ್ರೀಗಳ ಪಕ್ಕದಲ್ಲಿಯೇ ಕುಳಿತು ಅವರ ಮಾತಿಗೆ ನಯವಾಗಿ ಚಪ್ಪಾಳೆ ತಟ್ಟಿದರು.
ಅರವಿಂದ ಜತ್ತಿ
ಸಮಾವೇಶದಲ್ಲಿ ಮಾತನಾಡುತ್ತ ಅರವಿಂದ ಜತ್ತಿ ಅವರು ‘ವಚನಗಳು ಕೇವಲ ಒಂದು ಸಾಹಿತ್ಯಿಕ ಪ್ರಕಾರವಲ್ಲ. ಪ್ರಜಾಪ್ರಭುತ್ವದ ತಾಯಿಬೇರು, ಅಂಗದಿಂದ ಲಿಂಗದೆಡಗೆ ಸಾಗುವ ಧರ್ಮ, ಜಾತಿ, ವರ್ಗ, ವರ್ಣ, ಲಿಂಗ, ತಾರತಮ್ಯಗಳನ್ನು ನಿರಾಕರಿಸುವ ಧರ್ಮ, ಚತುರ್ಮುಖ ಸಿದ್ಧಾಂತವಾಗಿದೆ ಎಂದರು.
ವಚನಗಳು ಒಂದು ಧರ್ಮಕ್ಕೆ ಸೀಮಿತವಲ್ಲ. ವಚನ ಸಾಹಿತ್ಯದಲ್ಲಿ ಬದುಕಿನ ಧರ್ಮ ಅಡಕವಾಗಿದೆ. ವಚನ ರಚನೆ ಕನ್ನಡ ಸಾಹಿತ್ಯದಲ್ಲಿಯೇ ಒಂದು ವಿಶಿಷ್ಟ ಘಟನೆ. ಸಾಮನ್ಯಾ ಸ್ತ್ರೀಯರು ಮತ್ತು ಕಾರ್ಯಜೀವಿಗಳೇ ಹೆಚ್ಚು ಸಂಖ್ಯೆಯಲ್ಲಿ ವಚನ ರಚನೆಕಾರರಾಗಿರುವುದು ಒಂದು ವಿಶೇಷ ಎಂದರು.

ಸುತ್ತೂರು ಶ್ರೀ
ಆಶೀರ್ವಚನ ನೀಡಿದ ಮೈಸೂರಿನ ಸುತ್ತೂರು ಮಠದ ಮಠಾಧೀಶ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ ಬಸವಣ್ಣನವರ ವಚನ ಎಲ್ಲ ಧರ್ಮಗಳ ಸೂತ್ರ ರೂಪದಲ್ಲಿದೆ. ಎಂದರು.
ಮಂಗಳೂರಿನಲ್ಲಿ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಿದ ಸಂಘಟಕರನ್ನು ಸ್ವಾಮೀಜಿ ಅಭಿನಂದಿಸಿದರು. ಗುರುಪುರದ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ವೇದವ್ಯಾಸ ಕಾಮತ್ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಹರಿನಾರಾಯಣ ಆಸ್ರಣ್ಣ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ , ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಸಿ.ಮಹದೇಶ್, ಡಾ.ಎಸ್.ಬಿ.ಎಂ. ಪ್ರಸನ್ನ, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಮಾನ್ವಿ ಉಪಸ್ಥಿತರಿದ್ದರು.
ಸಮ್ಮೇಳನದ ಪ್ರಧಾನ ಸಂಚಾಲಕ ಸುರೇಂದ್ರ ರಾವ್ ಸ್ವಾಗತಿಸಿ, ಸುರೇಖಾ ಯಳವಾರ ವಂದಿಸಿದರು. ಡಾ.ಎಸ್.ಎಂ.ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಹರಿಕೃಷ್ಣ ಪುನರೂರು, ಡಾ.ದೇವದಾಸ್ ಕಾಪಿಕಾಡ್, ಡಾ.ಗುರುಕಿರಣ್ , ಡಾ.ಶಾಲಿನಿ ನಾಲ್ವಾಡ್ ಬೆಂಗಳೂರು, ರಾಜೇಶ್ವರಿ ಹಿರೇಮಠ್ ಜಮಖಂಡಿ, ಮಲ್ಲಮ್ಮ ಯಳವಾರ ವಿಜಯಪುರ, ಮಹಮ್ಮದ್ ಯಾಸಿರ್ ಕಲ್ಲಡ್ಕ, ಜನಾರ್ದನ ಬುಡೋಳಿ, ಕೆ.ಯುವರಾಜ್ ಶಿವಮೊಗ್ಗ, ಎಂಆರ್‌ಪಿಎಲ್‌ನ ಬಿ.ಸುದರ್ಶನ್, ಶಶಿಕುಮಾರ್ ಭಟ್ ಇವರುಗಳಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಗಳನ್ನು ಗೌರವಿಸಲಾಯಿತು.
ಇಂತ ಕಾರ್ಯಕ್ರಮ ಬಸವ ಧರ್ಮ ಹೊಡೆಯುವ ಕೆಲ್ಸಾ ಅಲ್ಲಿಗೆ ಹೋಗಿರುವ ಲಿಂಗಾಯತ ಜನ ಲಿಂಗ ಬಿಟ್ಟು ಜನಿವಾರ ಅಕೊಳ್ಳಿ ನಿಮ್ಗೆ ಅಪ್ಪ ಬಸವಣ್ಣ ಮೇಲೆ ಗೌರವ ಇದ್ರೆ ಹೋಗ್ತಾ ಇದ್ದಿಲ ನೀವು ಸಂವಿದಾನ ವಿರೋಧಿ ಪಕ್ಕ ನೀವು ಜೊತೆ ಇರುವುದು ನೀವು ಕೂಡ ಅದೇ ಬುದ್ಧಿ ಇದೆ ಅಂತ ತೂ ನಿಮ್ಮ ಜನ್ಮಕ್ಕೆ
ಸಂವಿಧಾನ ವಿರೋಧಿ, ವಿಶ್ವ ಗುರು ಬಸವಣ್ಣನವರ ತತ್ವಗಳನ್ನು ಒಪ್ಪದ, ಅವರ ಹೆಸರನ್ನು ಹೇಳೋಕು ಯೋಗ್ಯತೆ ಇಲ್ಲದ ಮನುವಾದಿ ಸ್ವಾಮಿಗಳನ್ನ ನಮ್ಮ ಶರಣರ ಲಿಂಗವಂತ ಕಾರ್ಯಕ್ರಮಗಳಿಗೆ ಕರೆಸೋದನ್ನು ಮೊದಲು ಬಿಡಬೇಕು 😡 ಅವರ ಮುಖ್ಯ ಹುನ್ನಾರವೇ ನಮ್ಮನ್ನು ದಾರಿ ತಪ್ಪಿಸುವ ಉದ್ದೇಶ, ಎಚ್ಚೆತ್ತುಕೊಳ್ಳಿ ಶರಣರೇ 🙏 ಜೈ ವಿಶ್ವ ಗುರು ಬಸವಣ್ಣ
Loose talk ಪೇಜಾವರರ ಮಾತನ್ನು ವೇದಿಕೆಯಲ್ಲಿದ್ದ ಜತ್ತಿ ಸರ್ ವಿರೋಧಿಸಬೇಕಿತ್ತಲ್ಲವೇ? ಲಿಂಗಾಯತ ಧರ್ಮದ ವಿರೋಧಿಗಳ ಬಗ್ಗೆ ಶರಣ ಜತ್ತಿ ಸರ್ softcorn ಏಕೆ?
ಬಸವಾದಿ ಶರಣರು ಹಾಳಾಗಿ ಹೋದರೂ ಚಿಂತೆಯಿಲ್ಲ ಅವರಿಗೆ ಪೀಠ ಮತ್ತು ಕಾಂಚಾಣ ಮುಖ್ಯ. ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿಯೂ ಕೂಡ ಗೋರೂಚ ಅವರು ವಚನ ಸಾಹಿತ್ಯ ಕಡೆಗಣಿಸಿದ್ದಕ್ಕೆ ತುಟಿ ಪಿಟಕ್ ಅನಲಿಲ್ಲಾ. ಇವರಂಥಾ ಗೋಸುಂಬೆಗಳಿಂದ ಲಿಂಗಾಯತರು ಪಾಠ ಕಲೀಬೇಕು. ಇವರನ್ನು ಅಪ್ಪಿ ತಪ್ಪಿಯೃ ಯಾವ ಕಾರ್ಯಕ್ರಮಕ್ಕೂ ಕರೀಬಾರದು. ಶುದ್ಧ ಅಪಸವ್ಯಗಳು ಇವರು. ಬಸವಣ್ಣನ ಹೆಸರು ಹೇಳಿ ಬೆಳದು ದೊಡ್ಡವರಾಗಿ ರೊಕ್ಕಾ ಮಾಡಿಕೊಂಡಾರ. ಪ್ರತಿಭಟನೆ ಮಾಡಾಕ ಏನ ಇವರ ನಾಲಿಗೆ ಸೇದಿ ಹೋಗಿತ್ತಾ ???
ನಿಮಗೆ ಗೌರವ ಇದ್ದಿದ್ದರೆ ಪೇಜಾವರ ಸ್ವಾಮೀಜಿ ಯನ್ನು ಲಿಂಗಾಯತ ಧಾರ್ಮಿಕ ಕಾರ್ಯಕ್ರಮಕ್ಕೆ ಕರೆಯುತ್ತಿರಲಿಲ್ಲ. ಲಿಂಗಾಯತ ಧರ್ಮದ ಕಲ್ಯಾಣ ಕ್ರಾಂತಿಯ ವಾರಸುದಾರರು ಅವರು ಮತ್ತು ಮೂಡನಂಬಿಕೆ ಕಂದಾಚಾರ ವರ್ಣಾಶ್ರಮ ಜಾತೀಯತೆ ವ್ಯವಸ್ತೆಯನ್ನು ಸದಾಕಾಲ ಜಾರಿಯಲ್ಲಿ ಇರಬೇಕು ಎಂಬುವವರ ಕೈಯಲ್ಲಿ ಆದರ್ಶಕ್ಕೆ ಹೆಸರಾದ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಕೀಲಿ ಕೈ ಕೊಟ್ಟರೆ ಬಿಟ್ಟಾರೆಯೆ ಸರಳವಾಗಿ ಕೀಲಿ ತೆಗೆದು ಇದು ನಮ್ಮ ಮನೆ ಎನ್ನುವುದನ್ನು ಬಿಟ್ಟಾರೆಯೆ? ನಿಮಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ ಪೇಜಾವರ ಸ್ವಾಮಿ.ಇದೊಂದು ನೆನಪಿಟ್ಟುಕೊಳ್ಳಿ ವೈಧಿಕರು ಯಾವುದೇ ಕಾಲಕ್ಕೂ ಬಸವಣ್ಣನವರ ಆದರ್ಶ ತತ್ವಗಳನ್ನು ಒಪ್ಪುವುದಿಲ್ಲ ನೆನಪಿರಲಿ.ಇದು ಲಿಂಗಾಯತ ಧರ್ಮಿಯರಿಗೆ ಕಪಾಳಮೋಕ್ಷ.ಇನ್ನು ಮುಂದಾದರು ಜಾಗೃತರಾಗಿರಿ.
ಇವರು ಕರೆದದ್ದಲ್ಲ, ಬದಲಾಗಿ ಅವರನ್ನು ಉಪಯೋಗಿಸಿಕೊಂಡು ಅವರೇ ಈ ಕಾರ್ಯಕ್ರಮವನ್ನು ಮಾಡಿ ಇವರನ್ನು ಕರೆದಿದ್ದಾರೆ.
ಜತ್ತಿಯವರೆ ಇಂತವರ ಜೊತೆ ವೇದಿಕೆ ಹಂಚಿಕೊಂಡದ್ದೆ ತಪ್ಪು. ಹೋದಾಗ್ಯೂ ವೇದಕ್ಕೆ ಹೊರೆಯ ಕಟ್ಟಿ ಖಂಡಿಸಿದ್ದನ್ನು ಹೇಳಬೇಕಿತ್ತು. ಮೌನಂ ಸಮ್ಮತಿ ಲಕ್ಷಣಂ ಅಂದು ಕೊಳ್ಳಬೇಕೆ ?
ನಾವು ಮಾಡುವ ಕಾರ್ಯಕ್ರಮಗಳಲ್ಲಿ ಬಂದು?ಅವರ ಬೆಳೆ ಬೇಯಿಸಿಕೊಳ್ಳುವುದಲ್ಲದೆ. ಸಾರ್ವಜನಿಕರಲ್ಲಿ ಮತ್ತು ಲಿಂಗಾಯತರ ಲ್ಲಿ ಗೊಂದಲ ಮೂಡಿಸುವ ಹುನ್ನಾರ ಈ ಸಂಘದ ಸಂಘಿಗಳ ಕೆಲಸವಾಗಿದೆ.
ಶಾಸ್ತ್ರಗಳು ಹೇಳಿದ್ದನ್ನೆ ಬಸವಣ್ಣನವರು ಹೇಳುವುದಾಗಿದ್ದರೆ ಶಾಸ್ತ್ರಗಳು ಜನಸಾಮಾನ್ಯರನ್ನ ಯಾಕೆ ಅಪ್ಪಿಕೊಳ್ಳಲಿಲ್ಲ? ಶಾಸ್ತ್ರಗಳು ಸಾಮಾಜಿಕ ಅಭಿವೃದ್ಧಿಯ ಮಾಡಲಿಲ್ಲವೇಕೆ??
ಶಾಸ್ತ್ರಗಳಲ್ಲಿ ಒಳ್ಳೆಯದಿದ್ದರೆ ಬಸವಣ್ಣನವರು ಜನರಿಗೆ ಶಾಸ್ತ್ರಗಳನ್ನೆ ಭೋದಿಸುತ್ತಿರಲಿಲ್ಲವೇ??
ಇಂತಹ ಕುತಂತ್ರ ಹೇಳಿಕೆಯ ವೈಧಿಕ ಸ್ವಾಮೀಜಿಗಳು ಕಾಲಕಾಲಕ್ಕೂ ಇದ್ದೆ ಇರುತ್ತಾರೆ. ನಮ್ಮ ನಮ್ಮ ಕೆಲಸ ನಾವು ಮಾಡಬೇಕು ಅಷ್ಟೇ
ಅವರಿವರನ್ನು ಬೇರೆಯವರನ್ನು ಶರಣ ಸಾಹಿತ್ಯವನ್ನು ವಚನಗಳನ್ನು ವೈದೀಕರಿಸುತ್ತಿದ್ದಾರೆ, ವೇದಾಗಮಗಳು, ಪುರಾಣಗಳು ಹೇಳಿರುವುದನ್ನು ವಚನಗಳು ಸರಲಗನ್ನಡದಲ್ಲಿ ಹೇಳಿದ್ದಾರೆಯೇ ಹೊರತು ಬೇರೇನೂ ಹೇಳಿಲ್ಲ ಎಂದು ಹೇಳಿದಾಗ ಅವರುಗಳನ್ನು ತೆಗಳಿ ಏನೂ ಪ್ರಯೋಜನವಿಲ್ಲ. ಕಾರಣ ಲಿಂಗಾಯತ ಮಾತಾಧೀಶರುಗಳು, ಬಸವತತ್ವ ಪ್ರಚಾರಕರು ನನ್ನ ಜೀವನವೇ ಬಸವಪ್ರಿಯ, ಬಸವಣ್ಣನನ್ನು ಮತ್ತು ವಚನಸಾಹಿತ್ಯ ಬಿಟ್ಟು ಬೇರೆ ಏನನ್ನೂ ನಾನು ಅನುಸರಿಸುವುದಿಲ್ಲ ಎಂದು ಹೇಳಿಕೊಳ್ಳುವ ಬಸವ ಸಮಿತಿಯ ಅಧ್ಯಕ್ಷರು ಅಕ್ಕಪಕ್ಕ ಕುಳಿತು ವೈದಿಕ ಮಠಾಧೀಶರ ಮಾತಿಗೆ ಚಪ್ಪಾಳೆ ಹೊಡೆದರೆ ಬೇರೆ ಏನು ಸಂದೇಶ ಹೋಗಲು ಸಾಧ್ಯ? ಅವರಿಗೆ ವೇದಿಕೆ ಒದಗಿಸಿಕೊಟ್ಟಿರುವವರು ಅಲ್ಲಿನ ಅಕ್ಕಮಹಾದೇವಿ ಮಹಿಳಾ ಸಂಘದವರು. ಅವರನ್ನು ಉಪಯೋಗಿಸಿಕೊಂಡು “ವಚನ ದರ್ಶನ” ಪಡೆ ಇಂತಹ ಕೆಲಸಗಳನ್ನು ಮಾಡುತ್ತಿದೆ. ಇಲ್ಲವಾದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಮಾಡುವಷ್ಟು ಆರ್ಥಿಕ ಸಬಲತೆ ಆ ಸಂಘಕ್ಕಿಲ್ಲ. ಲಿಂಗಾಯತರಿಗೆ ಲಿಂಗಾಯತ ಧರ್ಮದ ಬಗ್ಗೆ ಇರುವ ಅರಿವಿನ ಕೊರತೆ ಮತ್ತು ಅವರ ಧರ್ಮದ ಬಗ್ಗೆ ಅವರಿಗೆ ಸ್ವಾಭಿಮಾನ ಇಲ್ಲದೆ ಇರುವುದು ಇಂತಹ ಕಾರ್ಯಕ್ರಮಕ್ಕೆ ಲಿಂಗಾಯತರನ್ನು ಉಪಯೋಗಿಸಿಕೊಂಡು ಬಸವಣ್ಣ ಹೊಸದಾಗಿ ಏನೂ ಹೇಳಿಲ್ಲ ಅಂತ ಹೇಳಿಸಿಕೊಳ್ಳುವ ಸ್ಥಿತಿಗೆ ಕಾರಣ. ನಾವೇ ಈ ಎಲ್ಲಾ ಅವ್ಯವಸ್ಥೆಗೆ ಕಾರಣಕರ್ತರು.
ಪೇಜಾವರರೆ, ಶರಣರ ಅನುಭಾವ ಪಂಡಿತರ ಶಬ್ದಗಳಲ್ಲ. ಶರಣರು ನಿಮ್ಮಂತೆ ದ್ವೈತ ಅದ್ವೈತಗಳನ್ನು ನುಡಿವವರಲ್ಲ. ಶರಣರನ್ನ ಅರ್ಥ ಮಾಡಿಕೊಳ್ಳುವುದು ನಿಮ್ಮಂತವರಿಗೆ ಸಾಧ್ಯವಿಲ್ಲ. ನೀವೇನು ಶರಣರ ಬಗ್ಗೆ ಮಾತನಾಡುವುದು? ಮೊದಲು ಶಂಕರಾಚಾರ್ಯರಿಗೆ ಗೌರವ ಕೊಡುವುದನ್ನು ಕಲಿಯಿರಿ. ನಂತರ, ಶರಣರ ಸಂಗದಿಂದ ಅನುಭಾವಿಗಳಾಗಿ… ನಂತರ ಶರಣರ ಬಗ್ಗೆ ಮಾತನಾಡುವಿರಂತೆ…
ಕೂಡಲಸಂಗನ ಶರಣರು ಸ್ವತಂತ್ರ ಧೀರರು. ವಚನ ಸಾಹಿತ್ಯ ಯಾವುದೇ ಸಾಹಿತ್ಯದ.ಕಾಪಿ ಪೇಸ್ಟ್ ಅಲ್ಲ. ಶರಣರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲದೆ ಮಾತನಾಡಲು ಹೋಗಿ ಭ್ರಮೆಗೆ ಒಳಗಾಗಬೇಡಿ.🙏
ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ,
ಅತಕ್ರ್ಯನು ಅಖಿಲಾತೀತನು ಚರಾಚರಕ್ಕೆ ಸಿಲುಕುವನಲ್ಲ.
ಅತ್ಯತಿಷ್ಠದ್ದಶಾಂಗುಲನು,
ಅಹಂಕಾರವೈದದ ಅನುಪಮನು.
ಸ್ಥಾವರಜಂಗಮವಲ್ಲದ ಭರಿತನು.
ಸರ್ವಜ್ಞ ಸರ್ವಕರ್ತೃ ಸೌರಾಷ್ಟ್ರ ಸೋಮೇಶ್ವರನಲ್ಲಿ
ಅವಿರಳನಾದ ಶರಣ.
ಆದಯ್ಯ, ವಸಂ 6. ವಚನದ ಸಂಖ್ಯೆ: 1091
ಬಸವಣ್ಣ
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
ನಮ್ಮ ಶರಣರಿಗುರಿಯರಗಾಗಿ ಕರಗದನ್ನಕ್ಕ,
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ.
ಕೂಡಲಸಂಗಮದೇವಾ,
ಬರಿಯ ಮಾತಿನ ಮಾಲೆಯಲೇನಹುದು 191
ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 191
ದೇಶಿಕೇಂದ್ರ ಸಂಗನಬಸವಯ್ಯ
ನುಡಿಯಲಮ್ಮೆನಯ್ಯಾ ಹುಸಿಗಲತ ಕುಶಲಗಳ
ಗುರುಪ್ರಸಾದವಾವರಿಸಿದ ಜಿಹ್ವೆಯಾದ ಕಾರಣ.
ನುಡಿಯಲಮ್ಮೆನಯ್ಯಾ ದ್ವೈತಾದ್ವೈತ ಸಂವಾದ ಸರವನು
ಸಮರಸಾನುಭಾವವಾವರಿಸಿದ ಜಿಹ್ವೆಯಾದ ಕಾರಣ.
ನುಡಿಯಲಮ್ಮೆನಯ್ಯಾ ನಾನು ನೀನೆಂಬ ನಾಣನುಡಿಯನು
ಗುರುನಿರಂಜನ ಚನ್ನಬಸವಲಿಂಗವೇ ತಾನೆಂಬ ನುಡಿಯ ನುಂಗಿ ನಿಂದ
ನಿರಾವಲಂಬ ಜಿಹ್ವೆಯಾದ ಕಾರಣ.
ಸಮಗ್ರ ವಚನ ಸಂಪುಟ: 12 ವಚನದ ಸಂಖ್ಯೆ: 1050
ಭೂತದ ಬಾಯಲ್ಲಿ ಗೀತೆಯ ಕೇಳಿದಂತೆ
ಎತ್ತನ ಶಾಸ್ತ್ರ ಎತ್ತನ ವಚನ ಎತ್ತಾನದಿಂದೆತ್ತ ಸಂಬಂಧವಯ್ಯ ಮಡಿ ಮೈಲಿಗೆಯ ಸ್ವಾಮಿ……… ಜತ್ತಿಯವರು ಪ್ರತಿಭಟಿಸದೆ ಸುಮ್ಮನಿದ್ದಿದ್ದು ದುರಾದುಷ್ಟಕರ……… ಬಸವ ನೀನೇ ಕಾಯಪ್ಪ………… ಶರಣು ಶರಣಾರ್ಥಿ ಜತ್ತಿಯವರಿಗೆ…..,. 🙏
ಅರವಿಂದ್ ಜತ್ತಿಯಾರು ಅಲ್ಲೇ ಖಂಡಿಸ ಬೇಕಿತ್ತು, ಜನಿವಾರಕ್ಕೆ ಅಂಜಿದರೋ ಏನೋ…… 🤔
ಎಲ್ಲಾ ವೇದಿಕೆಯಲ್ಲಿ ಲಿಂಗ ಸಾಕ್ಷಿ ಬಗ್ಗೆ ಮಾತನಾಡುವವರು ಎಲ್ಲಿ ಹೋಯಿತು ಲಿಂಗಸಾಕ್ಷಿ.
ಶರಣ ಸಿದ್ಧಾಂತ ವೆಂದರೆ ವೈಧಿಕರ ಮುಂದೆ ಕೈ ಕಟ್ಟಿ ಕೂರುವುದೇ.
ಸನಾತನಿಗಳ ತಂತ್ರ ಅರ್ಥವಾಗಲಿಲ್ಲವೆ.