ಶಿರೋಳ
ಪಟ್ಟಣದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಬಸವಾದಿ ಶರಣರ ವಚನ ಓದುವ (ಅರ್ಥ ವಿವರಣೆ) ಸ್ಪರ್ಧೆಯನ್ನು ಜನವರಿ 20, 2025 ಸೋಮವಾರ ಮುಂಜಾನೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಲಿಂಗೈಕ್ಯ ಶ್ರೀ ಗುರುಬಸವ ಮಹಾಸ್ವಾಮಿಗಳ ಸ್ಮರಣಾರ್ಥ ನಡೆಯುತ್ತಿದೆ.
1) ಕಿರಿಯ ವಿಭಾಗ 14 ವರ್ಷದ ಒಳಗಿನವರು, ಪ್ರವೇಶ ಫೀ 51ರೂ,
ಬಹುಮಾನಗಳು: ಪ್ರಥಮ 3001ರೂ. ದ್ವಿತೀಯ 2001ರೂ. ತೃತೀಯ 1001ರೂ.
2) ಹಿರಿಯ ವಿಭಾಗ,14 ವರ್ಷ ಮೇಲ್ಪಟ್ಟು ಮುಕ್ತ, ಪ್ರವೇಶ ಫೀ 101ರೂ.
ಬಹುಮಾನಗಳು: ಪ್ರಥಮ 5001ರೂ, ದ್ವಿತೀಯ 4001ರೂ, ದ್ವಿತೀಯ 3001ರೂ.
ಸ್ಪರ್ಧೆಯ ನಿಯಮಗಳು
ಒಬ್ಬರಿಗೆ ಒಂದು ವಚನ ಮಾತ್ರ, ಎರಡುವರೆ ನಿಮಿಷದಲ್ಲಿ ಹೇಳಬೇಕು.
ವಚನದ ಅರ್ಥ ವಿವರಣೆಗೆ ಪ್ರಾಮುಖ್ಯತೆ ನೀಡಲಾಗುವುದು.
ವೇಷ, ಭೂಷಣಕ್ಕೆ ಮಹತ್ವ ನೀಡಲಾಗುವುದು.
ವಚನ ಹೇಳುವುದು ಸ್ಪಷ್ಟವಾಗಿರಬೇಕು.
ಸಮಯಕ್ಕೆ ಮಹತ್ವ ನೀಡಲಾಗುವುದು.
ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಸಮಯದಲ್ಲಿ ತಿಳಿಸಲಾಗುವುದು.
ನಿರ್ಣಾಯಕರ ನಿರ್ಣಯವೇ ಅಂತಿಮ ನಿರ್ಣಯ.
ಹೆಸರು ನೊಂದಾಯಿಸಲು ಸಂಪರ್ಕ ಮೊ. ಸಂಖ್ಯೆಗಳು ಉಮೇಶ ಮರೆಗುದ್ದಿ 9686217697, ಸಿದ್ದು ಅಂಗಡಿ 8747976711, ಕುಮಾರ ಮರಿಗುದ್ದಿ 9611869702, ಸಿದ್ದು ಶೆಟ್ಟರ 9606299722, ಪ್ರವೀಣ ಸಂಗಳದಶೆಟ್ಟರ 9481677469, ಶರಣಪ್ಪ ಮೆಣಸಗಿ 9449654015.
ನೊಂದಾಯಿಸಲು ಕೊನೆಯ ದಿನಾಂಕ ಜನವರಿ 19, 2025.
ಕಾರ್ಯಕ್ರಮ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ನರಗುಂದ ತಾಲೂಕ ಘಟಕ, ಶಿರೋಳ ಗ್ರಾಮ ಘಟಕ ಹಾಗೂ ಶ್ರೀ ಗುರುಬಸವ ಜನಕಲ್ಯಾಣ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿದೆ.