ಸಾಣೇಹಳ್ಳಿ
ತರಳಬಾಳು ಮಠದ ಲಿಂಗೈಕ್ಯ ಹಿರಿಯ ಜಗದ್ಗುರು ಸಮಾಜವನ್ನು ಕಟ್ಟುವ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬಂದರೂ ಎದೆ ಕೊಟ್ಟು ಎದುರಿಸಿದರು. ದುಗ್ಗಾಣಿ ಮಠವೆಂದು ಅವಹೇಳನಕ್ಕೆ ಗುರಿಯಾಗಿದ್ದ ಮಠ ಮತ್ತು ಶಿಷ್ಯರನ್ನು ದುಡಿಯುವ ಮಠ, ದುಡಿಯುವ ಶಿಷ್ಯರನ್ನಾಗಿ ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ – ಕಾಲೇಜುಗಳನ್ನು ತೆರೆದು ಜಾತ್ಯಾತೀತವಾಗಿ ಎಲ್ಲಾ ಮಕ್ಕಳ ಶಿಕ್ಷಣಕ್ಕೆ ನೆರವಾದವರು. ಅದೇ ಪರಂಪರೆಯನ್ನು ಇಂದಿಗೂ ಅನುಸರಿಸಿಕೊಂಡು ಸಾಣೇಹಳ್ಳಿ ಶ್ರೀ ಮಠ ಬರುತ್ತಿದೆ ಎಂದು ಶ್ರೀ ಡಾ. ಪಂಡಿತಾರಾಧ್ಯ ಸ್ವಾಮಿಗಳು ಆಶಿಸಿದರು.
ಶ್ರೀಗಳು ದಿನಾಂಕ: ೨೪-೯-೨೦೨೫ ರಂದು ಸಾಣೇಹಳ್ಳಿಯಲ್ಲಿ ನಡೆಯಲಿರುವ ಹಿರಿಯ ಲಿಂಗೈಕ್ಯ ಜಗದ್ದುರುಗಳವರ ಶ್ರದ್ಧಾಂಜಲಿ ಸಭೆಗೆ ಭಕ್ತರು ಕೊಟ್ಟ ಭಕ್ತಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮೇಲಿನಂತೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಅಣಬೇರು ರಾಜಣ್ಣ ಅವರು, ಲಿಂ. ಹಿರಿಯ
ಜಗದ್ದುರುಗಳು ಈ ನಾಡು ಕಂಡ ಶತಮಾನದ ಶ್ರೇಷ್ಠರು, ಹಾಗೆಯೇ ಅವರು ಹಾಕಿ ಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ. ಅವರು ಸಮಾಜದ ಓಳಿತಿಗಾಗಿ ಮಾಡಿದ ಕೆಲಸಗಳು ಇಂದಿನ ಎಲ್ಲಾ ಮಠದ ಸ್ವಾಮಿಗಳಿಗೆ ಮಾದರಿ.
ತಮ್ಮ ೬೦ನೇ ವರ್ಷಕ್ಕೆ ಪೀಠಕ್ಕೆ ರಾಜೀನಾಮೆ ಸಲ್ಲಿಸಿ ತ್ಯಾಗ ಮಾಡಿದ್ದು ಪ್ರಶಂಸನೀಯ ಅವರಂತೆ ಎಲ್ಲಾ ಮಠಾಧೀಶರು ಬದುಕಿ-ಬಾಳಿ ತೋರಿಸಬೇಕಾಗಿದೆ. ಸಾಣೇಹಳ್ಳಿಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಅವರ ಋಣ ತೀರಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಇಂದಿನ ನನ್ನ ಸ್ಥಾನ ಮಾನಕ್ಕೆ ಹಿರಿಯ ಲಿಂಗೈಕ್ಯ ಜಗದ್ದುರುಗಳ ಆರ್ಶಿವಾದವೇ ಕಾರಣ, ಅವರು ನಮ್ಮ ಸಮಾಜದ ಶಿಷ್ಯರನ್ನು ದುಡಿಯುವ ಶಿಷ್ಯರನ್ನಾಗಿ ಜೀವನಕ್ಕೆ ಮಾರ್ಗಮಾಡಿದ ಪುಣ್ಯಾತ್ಮರು. ಅವರ ಕಾರ್ಯಗಳಿಗೆ ನಾವು ಎಷ್ಟು ಕೊಟ್ಟರು ಸಾಲದು, ಸಮಾಜ ಅವರ ಋಣ ತೀರಿಸಿಲಾಗದಷ್ಟು ಮಾಡಿ ಹೋಗಿದ್ದಾರೆ. ಈ ಪುಣ್ಯ ಕೆಲಸದಲ್ಲಿ ಎಲ್ಲರೂ ತನು-ಮನ-ಧನಗಳನ್ನು ನೀಡಿ ಭಾಗಿಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು, ಪಾಂಡೋಮಟ್ಟಿಯ ಡಾ.
ಗುರುಬಸವ ಮಹಾಸ್ವಾಮಿಗಳು, ಹುಲ್ಲೂರು ಶ್ರೀ, ಮತ್ತು ಅನೇಕ ಹರಗುರು ಚರಮೂರ್ತಿಗಳು, ಜೆ.ಆರ್. ಷಣ್ಮುಖಪ್ಪನವರ ಕುಟುಂಬ ವರ್ಗದವರು, ಮಳ್ಳೇಕಟ್ಟೆ ಸಂತೋಷ್, ಶ್ರೀನಿವಾಸ್, ಕೆ.ಬಿ. ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.