ಶಿವರಾತ್ರಿ: ನಂಜನಗೂಡಿನಲ್ಲಿ ಸಹಜ ಶಿವಯೋಗ, ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ನಂಜನಗೂಡು

ಪಟ್ಟಣದ ಬಿ.ಎಂ. ಬಡಾವಣೆಯಲ್ಲಿ ಮಹಾಶಿವರಾತ್ರಿಯ ದಿನ ಸಹಜ ಶಿವಯೋಗ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಪೂಜ್ಯಶ್ರೀ ಉದ್ಯಾನ ಮಹಾಸ್ವಾಮಿಗಳು ಮೂಡಗೂರು ಅವರಿಂದ ನಡೆಯಿತು.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಸಂಶೋಧನೆ ಮಾಡಿ ಕೊಟ್ಟಿರುವ ಇಷ್ಟಲಿಂಗವನ್ನು ಪೂಜ್ಯ ಶ್ರೀ ಉದ್ದಾನ ಸ್ವಾಮಿಗಳು ಸಹನಾ, ಪಲ್ಲವಿ, ಜ್ಯೋತಿ, ಅಂಕಿತ, ಹೇಮಲತಾ, ಬಸವದರ್ಶನಿ, ಚೇತನ್ ಹಾಗೂ ಚಾರುಮಹದೇವಪ್ರಸಾದ್ ರವರುಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.

ಇಷ್ಟಲಿಂಗದ ಮಹತ್ವ, ಪೂಜೆ, ಲಿಂಗ ನಿರೀಕ್ಷಣೆ ಮಾಡುವುದನ್ನು ತಿಳಿಸಿ, ಚನ್ನಬಸವಣ್ಣರವರು ವಚನವೊಂದರಲ್ಲಿ ಹೇಳಿರುವ ಹಾಗೆ ಸದ್ಭಕ್ತರ ಒಳಗಿನ ಅಂತರಂಗದಲ್ಲಿರುವ ಲಿಂಗವನ್ನು ಬಹಿರಂಗದಲ್ಲಿ ಶ್ರೀಗುರುಗಳು ಕೊಡುತ್ತಾರೆ.

ಇಷ್ಟಲಿಂಗವನ್ನು ತುಪ್ಪದ ಕಂತೆಯಿಂದ ಮಾಡಿರುತ್ತಾರೆ ಮತ್ತು ಆಯುರ್ವೇದದ ಪದಾರ್ಥಗಳನ್ನು ಹಾಕಿರುತ್ತಾರೆ ನಾವುಗಳು ಪ್ರತಿದಿನ ಇಷ್ಟಲಿಂಗ ನಿರೀಕ್ಷಣೆ ಮಾಡುತ್ತಾ ಹೋದಂತೆ ನಮ್ಮ ದೇಹದಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳು ದೂರಾಗುತ್ತವೆಂದು ನಂಜನಗೂಡಿನ ಜೈಲರ್ ಮಲ್ಲಿಕಾರ್ಜುನ ವೈ.ರಾವ್ ಅವರು ಇಷ್ಟಲಿಂಗದ ಮಹತ್ವದ ಬಗ್ಗೆ ಲಿಂಗಾಯಿತ ನಡೆ-ನುಡಿಗಳ ಬಗ್ಗೆ ವಿವರವಾಗಿ ತಿಳಿಸಿದರು.

ನಮ್ಮ ಮನಸ್ಸನ್ನು ಇಷ್ಟಲಿಂಗದಲ್ಲಿ ಕೇಂದ್ರೀಕರಿಸುವುದರಿಂದ ನಮ್ಮ ಆತ್ಮಬಲ, ಮನೋಬಲ, ದೈಹಿಕ ಬಲವನ್ನು ಹೆಚ್ಚಿಸಿಕೊಳ್ಳಬಹುದೆಂದು ನಂಜನಗೂಡಿನ ಶರಣಪ್ರಸಾರ ವೇದಿಕೆಯ ಅಧ್ಯಕ್ಷರಾದ ಕಾ.ಸು. ನಂಜಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ನಂಜನಗೂಡು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಗಿರೀಶ್, ವಿಶ್ವ ಬಸವಸೇನೆ ಅಧ್ಯಕ್ಷ ಬಸವ ಯೋಗೇಶ್, ಅಕ್ಕಮಹಾದೇವಿ ಹಾಸ್ಟೆಲ್ ಅಧ್ಯಕ್ಷ ಚನ್ನಪ್ಪ, ಮಹಾದೇವಪ್ರಸಾದ ಪ್ರಾಧ್ಯಾಪಕರು, ರೂಪಾ ಮಂಜುನಾಥ್, ಮಹೇಶ್ ಕಲ್ಪುರ, ನಂದಿಶ್ ಶಿಕ್ಷಕರು, ಕವಿತಾರವಿ, ಶೈಲಜಾ, ಪವಿತ್ರ ನಂದೀಶ್, ಚಂದ್ರಕಲಾಪ್ರಸಾದ್, ಮಂಜುನಾಥ್ ಶಿಕ್ಷಕರು, ಪರಮೇಶ್ವರಪ್ಪ ಇನ್ನೂ ಅನೇಕರು ಇದ್ದರು.

Share This Article
4 Comments
  • ಇಷ್ಟಲಿಂಗ ಶಿವಯೋಗವು ದೇಶಾದ್ಯಂತ ಬಹಳ ಮಹತ್ವ ಪಡೆಯುತ್ತಿದೆ. ಪ್ರತಿಯೊಬ್ಬರು ತಮ್ಮ ತಮ್ಮನ್ನ ಅರಿತುಕೊಳ್ಳಲು ಮತ್ತು ನಮ್ಮನ್ನೆ ನಾವು ನಿಯಂತ್ರಣ ಮಾಡಿಕೊಳ್ಳಲು ಇಷ್ಟಲಿಂಗ ಶಿವಯೋಗವು ಬಹಳ ಉಪಯೋಗವಾಗಿದೆ. ಇಂತಹ ಕಾರ್ಯಕ್ರಮಗಳನ್ನ ಆಯೋಜಿಸಿದವರಿಗು ಮತ್ತು ಮೂಡಗೂರು ಶ್ರೀಗಳಿಗೂ ಅನಂತ ಶರಣು

  • ಲಿಂಗಾಯತ ರಾದ ನಾವು ಮೊದಲು ನಮ್ಮ ಧರ್ಮದ ಅರಿವು ಆಚರಣೆ ಮಾಡುತ್ತಾ ಹೋದರೆ ಈ ಧರ್ಮ ಕ್ಕೆ ಸ್ವತಂತ್ರ ಧರ್ಮ ದ ಮಾನ್ಯತೆ ಸಿಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *