ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಡಿಸೆಂಬರ್ ೧೯ರಂದು ಶುಕ್ರವಾರ ಬೆಳಿಗ್ಗೆ ೮.೩೦ ಗಂಟೆಗೆ ಶಿವಶರಣ ಒಕ್ಕಲಿಗ ಮುದ್ದಣ್ಣನವರ ಶರಣೋತ್ಸವ ಹಮ್ಮಿಕೊಳ್ಳಲಾಗಿದೆ.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಕಳಸದ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದ ವಹಿಸುವರು.
ಸದಸ್ಯರುಗಳಾದ ಡಾ.ಪಿ.ಎಸ್. ಶಂಕರ್ ಹಾಗೂ ಚಂದ್ರಶೇಖರ್ ಎಸ್.ಎನ್. ಇವರುಗಳು ಉಪಸ್ಥಿತರಿರುವರು.
ಜಮುರಾ ಕಲಾಲೋಕದಿಂದ ವಚನ ಸಂಗೀತ ನಡೆಯಲಿದೆ.
ಕಾರ್ಯಕ್ರಮವು ಎಸ್.ಜೆ.ಎಂ. ಫಾರ್ಮಸಿ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಯಲಿದ್ದು, ಸರ್ವರಿಗೂ ಶ್ರೀಮಠ ಸ್ವಾಗತ ಕೋರಿದೆ.
