ಬೆಂಗಳೂರು:
ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಶಾಂತಿಪುರ ಮುಖ್ಯರಸ್ತೆಯ ಬಸವ ಮಂಟಪದಲ್ಲಿ ರವಿವಾರ ಶಿವರಾತ್ರಿ ಅಂಗವಾಗಿ ರಾಷ್ಟ್ರೀಯ ಬಸವದಳದಿಂದ ಶಿವಯೋಗದ ಪ್ರಾತಕ್ಷಿತೆ ಮತ್ತು ಅದರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅನುಭಾವಿಗಳು ಮತ್ತು ವಚನ ಕ್ರಿಯಾಮೂರ್ತಿಗಳಾದ ಶರಣ ಶ್ರೀಶೈಲ ಮಸೂತೆ ಅವರು ಮಾತನಾಡುತ್ತಾ, ಶಿವಯೋಗ ಮತ್ತು ಇಷ್ಟಲಿಂಗ ಯೋಗದ ಅನುಸಂಧಾನ ಕ್ರಿಯೆಯು ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದ ಇಡಲು ದಿವ್ಯ ಔಷಧಿಯಾಗಿದೆ ಎಂಬುದನ್ನು ಶರಣ ಮರುಳ ಶಂಕರದೇವರ ವಚನಗಳಿಂದ ತಿಳಿಯಬಹುದು ಎಂದರು.

“ನಾನಾರೋಗಂಗಳು ಬಂದು
ದೇಹವ ಹಿಡಿಯುವಲ್ಲಿ
ಶಿವಾರ್ಚನೆಯ ….
ಎಂಬ ವಚನದ ಮೂಲಕ ವಿಶ್ಲೇಷಿಸಿದರು.
“ಭಕ್ತನ ಕಾಯವೇ ಶಿವನ
ಕಾಯ ಶಿವನ ಕಾಯವೇ
ಭಕ್ತನ ಕಾಯ
ಶಿವ ಶಿವ ಭಕ್ತ ಬೆರೆಯೇ?
ಶಿವ ಬೆರೆಯೇ? ಒಂದೇ
ಕಾಣಿರಯ್ಯ ಅದೆಂತೆಂದಡೆ
ಭಕ್ತಂಗೂ ದೇವಂಗೂ, ಕಾಯವೂಂದೇ,
ಪ್ರಾಣವೋಂದೇ ಎರಡೆಂಬ ಪರಿಭಾಷೆಯ ನುಡಿಯಲಾಗದು ಭಕ್ತರಾದವರು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರರು”
ಶರಣರು ದೇವರ ಕುರಿತು ಇರುವ ಭ್ರಮೆಯನ್ನು ಕಳೆದು ನಿಜವಾದ ದೇವರು ನಿನ್ನ ನೀ ತಿಳಿದು ನೋಡು ಎಂದಿರುವರು. ಪ್ರಾಣಕ್ಕೆ ದೇಹವೇ ಆಶ್ರಯವಾದರೆ, ದೇಹಕ್ಕೆ ಪ್ರಾಣವೇ ಆಶ್ರಯ ಎಂದು ಶರಣರು ಶಿವನನ್ನು ತನ್ನಲ್ಲಿಯೇ ಕಾಣುವ ಮೂಲಕ ತನ್ನ ತಾನಾರೆಂದು ಅರಿತವರು ಎಂದರು.

ಶರಣರು ಕಂಡ ಶಿವನು ಜೀವಿಗಳ ಕೇಂದ್ರಿತವಾಗಿದೆ. ಶರಣರು ಶಿವನನ್ನು ತಮ್ಮಲ್ಲಿಯೇ ಕಂಡವರು ಎಂದು ವಚನ ವಿಶ್ಲೇಷಣೆಯ ಮೂಲಕ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭಕ್ತಸಮೂಹ ಭಾಗವಹಿಸಿ, ಸುಭಾಷ್ ಅವರು ನೇತೃತ್ವ ವಹಿಸಿದ್ದರು. ಬಂದವರೆಲ್ಲ ಪ್ರಸಾದ ಸ್ವೀಕರಿಸಿದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
