“ಶಿವಕುಮಾರ ಸ್ವಾಮೀಜಿ ಬಸವ ತತ್ವ ಪರಿಪಾಲಿಸಿದರು.”
ತುಮಕೂರು
ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 7 ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಸಿದ್ಧಗಂಗಾ ಮಠದಲ್ಲಿ ಬುಧವಾರ ನಡೆಯಿತು.
ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು.
ಸಿದ್ದಗಂಗಾ ಸ್ವಾಮೀಜಿಗಳ ಆದರ್ಶ ಪ್ರಜ್ವಲಿಸುವ ನಂದಾದೀಪ
ಉಪರಾಷ್ಟ್ರಪತಿ ಸಿ.ಪಿ.ರಾಮಕೃಷ್ಣನ್ ಮಾತನಾಡಿ ಶಿವಕುಮಾರ ಸ್ವಾಮಿಗಳ ಜೀವನ ದಯೆ, ತ್ಯಾಗದ ಸಂದೇಶವಾಗಿದೆ. ಸ್ವಾಮೀಜಿಯವರು ಅಗಲಿ 7 ವರ್ಷ ಆಗಿದೆ ಆದರೆ ಅವರ ಸಾನಿಧ್ಯ ಕಡಿಮೆಯಾಗಿಲ್ಲ, ಪ್ರಸ್ತುತತೆ ಮತ್ತಷ್ಟು ಗಟ್ಟಿಯಾಗಿದೆ.
ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮಠ ಆಧ್ಯಾತ್ಮಿಕ ಕೇಂದ್ರವಲ್ಲ ಶಿಕ್ಷಣ ಚಳುವಳಿಯಾಗಿದೆ. ಶಿಕ್ಷಣವನ್ನು ದಾನವಾಗಿ ಅಲ್ಲ ಹಕ್ಕಿನಂತೆ ಗೌರವ, ಪ್ರೀತಿಯಿಂದ ನೀಡುತ್ತಿದೆ. ಲಕ್ಷಾಂತರ ಬಡ ಕುಟುಂಬಗಳ ಮಕ್ಕಳು ಇಲ್ಲಿ ಮನೆ ಕಟ್ಟುಕೊಂಡಿದ್ದಾರೆ, ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಮಾತನಾಡಿ, ಎಲ್ಲರಿಗೂ ನಮಸ್ಕಾರ ನಾನು ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಹೇಳಿದರು.
111 ವರ್ಷಗಳ ಕಾಲ ಸಮಾಜದ ಸೇವೆ ಮಾಡಿದ ಶಿವಕುಮಾರ ಶ್ರೀಗಳ ಗದ್ದಿಗೆ ದರ್ಶನ ಮಾಡಿದ್ದು ನನ್ನ ಭಾಗ್ಯ. ಸಂತ ಶ್ರೇಷ್ಠ ಶಿವಕುಮಾರ್ ಶ್ರೀಗಳು. ಸಿದ್ದಗಂಗಾ ಮಠದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇವೆ ಅನನ್ಯ.
ಈಗಿನ ಸಿದ್ದಲಿಂಗ ಮಹಾಸ್ವಾಮಿಗಳು ಶಿವಕುಮಾರ ಶ್ರೀಗಳು ಹಾಕಿ ಕೊಟ್ಟ ದಾರಿಯಲ್ಲಿ ಮಠವನ್ನು ಮುಂದುವರಿಸುತಿದ್ದಾರೆ. ಸಮಾಜದ ಆಧ್ಯಾತ್ಮಿಕ ಹಾಗೂ ಮಾನಸಿಕ ಉನ್ನತಿಗೆ ಸಿದ್ದಗಂಗಾ ಮಠ ಕಾರಣವಾಗಿದೆ ಎಂದರು.

ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪರಮಪೂಜ್ಯರು 111 ವರ್ಷಗಳ ತಪಸ್ಸಿನ ಜೀವನ ನಡೆಸಿದರು. 89 ವರ್ಷಗಳ ಕಾಲ ವಿದ್ಯಾರ್ಥಿಗಳ ಬದುಕಿಗೆ ಆದರ್ಶ, ಜ್ಞಾನ ಸುವಿದ ತುಂಬಿದರು. ಬಹುದೊಡ್ಡ ಸೇವೆ ಮಾಡಿದವರು.
ಸ್ವರ್ಗ ಬೇಡ ದುಃಖಿತರ ದುಃಖ ದೂರ ಮಾಡುವ ಶಕ್ತಿ ಮಾತ್ರ ಬೇಕೆಂದಿದ್ದವರು. ಎಲ್ಲರೂ ಚೆನ್ನಾಗಿರಬೇಕು, ನಿಮ್ಮ ನಿಮ್ಮ ಕಾಯಕ ನೀವು ಮಾಡಬೇಕು, ನಿಷ್ಠೆ, ಕಾಯಕ ಭಾವನೆ ಜಾಗೃತವಾಗಿರಬೇಕೆಂದು ಸಂದೇಶವನ್ನು ನೀಡುತ್ತಿದ್ದರು. ನಿರಂತರ ದಾಸೋಹ ನಡೆಯಬೇಕು, ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಆದೇಶ ಕೊಟ್ಟಿದ್ದಾರೆ ಅದನ್ನು ಮಾಡುತ್ತಾ ಬಂದಿದ್ದೇವೆ. ಉಪರಾಷ್ಟ್ರಪತಿ ಗಳು, ರಾಜ್ಯಪಾಲರು ಬಂದಿರುವುದು ಖುಷಿ
ಮಧುಸೂದನ್ ಸಾಯಿ ಅವರು ವಿಶ್ವಸಂತರಾಗಿ ಬೆಳೆದಿದ್ದಾರೆನ್ನಲು ಹೆಮ್ಮೆ, ಸಂತೋಷ ಆಗುತ್ತದೆ ಎಂದರು.
ಪುಣ್ಯ ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಾವು ಇವತ್ತು ಬರೀ ಸ್ವಾಮಿಗಳ ಪುಣ್ಯ ಸ್ಮರಣೆ ಮಾಡ್ತಿಲ್ಲ. ಒಂದು ಸಂದೇಶ ಕೊಡಲು ಸೇರಿದ್ದೇವೆ.
ಉಪರಾಷ್ಟ್ರಪತಿಗಳು ಪರಮಪೂಜ್ಯರನ್ನು ನೆನೆಯುತ್ತಿದ್ದಾರೆ. ಅಣ್ಣ ಬಸವಣ್ಣ ಪ್ರತಿಪಾದಿಸಿದ ತತ್ವಗಳನ್ನು, ಸಾರಿದ ಸಂದೇಶಗಳನ್ನು ಪ್ರಸ್ತುತ ಸಮಾಜಕ್ಕೆ ಮುಖ್ಯ ಎಂದು ಸಾರಲು ಇಲ್ಲಿ ಸೇರಿದ್ದೇವೆ.
ಶಿವಕುಮಾರ ಸ್ವಾಮೀಜಿ ಬಸವ ತತ್ವ ಪರಿಪಾಲಿಸಿದರು. ಇದು ಧಾರ್ಮಿಕ ಕೇಂದ್ರವಲ್ಲ. ಇವರು ಪ್ರತಿಯೊಬ್ಬ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನ ಸಿಗಬೇಕೆಂದು ಶ್ರಮಿಸಿದರು. ನನ್ನ ಪುಣ್ಯ ನನ್ನ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಲು ಅವಕಾಶ ಸಿಗುತ್ತಿದೆ. ರಾಮಕೃಷ್ಣನ್ ಅವರು ಮೊದಲ ಬಾರಿಗೆ ಶ್ರೀಮಠಕ್ಕೆ ಬರುತ್ತಿದ್ದಾರೆ. ಈ ಕೇಂದ್ರ ಮಾತ್ರ ಮಾತ್ರ ಸಮಾನತೆ, ಭ್ರಾತೃತ್ವ ಸಾರುತ್ತದೆ ಎಂದು ನುಡಿನಮನ ಸಲ್ಲಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಸ್ವಾಗತ ಭಾಷಣ ಮಾಡುತ್ತಾ, ನಡೆದಾಡುವ ದೇವರನ್ನು ಕಂಡ ರಾಜ್ಯವಿದ್ದರೆ ಅದು ಕರ್ನಾಟಕ, ಅದು ಸಿದ್ಧಗಂಗಾ ಮಠ. ಸಿದ್ಧಗಂಗಾ ಶ್ರೀಗಳು ಪವಾಡ ಪುರುಷರು , ಜಾತಿಮತ ಇಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿದ ಪುಣ್ಯಾತ್ಮ. ಇಲ್ಲಿ ಓದಿದ ಮಕ್ಕಳು ರಾಷ್ಟ್ರ ರಾಜ್ಯ ಎಲ್ಲಾ ಕಡೆಯಿದ್ದಾರೆ ಎಂದರು.
ಮಧುಸೂದನ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಸಂಸ್ಥಾಪಕ, ಸತ್ಯಸಾಯಿ ಲೋಕ ಸೇವಾ ಗುರುಕುಲಂನ ಮುಖ್ಯ ಮಾರ್ಗದರ್ಶಕ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಸಿದ್ಧಗಂಗಾಮಠದ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮೀಜಿ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ಸಹಾಯಕ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.
