ಬೆಂಗಳೂರು:
ನಗರದ ಗಿರಿನಗರ ಬಳಿಯಿರುವ ಸಿದ್ಧಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ವಿರೂಪಗೊಳಿಸಿದವರನ್ನು ಕೂಡಲೇ ಪತ್ತೆಹಚ್ಚಿ, ಅವರ ಮೇಲೆ ಕಾನೂನಿನ ಕ್ರಮಕ್ಕೆ ಮುಂದಾಗಬೇಕೇಂದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿ ಒತ್ತಾಯಿಸಿದೆ.
ಪ್ರತಿಯೊಬ್ಬರೂ ಭಕ್ತಿಯಿಂದ ಗೌರವಿಸುವ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಶ್ರೀಗಳಿಗೆ ಅಪಚಾರವೆಸಗಿರುವುದು ದಿಗ್ಬ್ರಮೆ ತರುವ ವಿಷಯ. ಪುತ್ಥಳಿಯ ಹಣೆಗೆ ಕಲ್ಲು ಹೊಡೆದು ವಿಕೃತಗೊಳಿಸಲಾಗಿದೆ. ಪೊಲೀಸರು ಸಿ.ಸಿ.ಟಿವಿ ದೃಶ್ಯ ಪರಿಶೀಲಿಸಿದ್ದಾರೆ, ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಮೋಹನಕುಮಾರ ಬಸವರಾಜ ಬಸವ ಮೀಡಿಯಾದೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕಿಡಿಗೇಡಿಗಳನ್ನು ಕಂಡುಹಿಡಿದು ಕಾನೂನು ರೀತಿಯ ಕ್ರಮಕ್ಕೆ ನಡೆಸುತ್ತೇವೆ ಎಂದು ಕಮೀಷನರ್ ಹೇಳಿದ್ದಾರೆ ಎಂದು ತಿಳಿಸಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದ ವೀರಭದ್ರ ನಗರದಲ್ಲಿರುವ ಪುತ್ತಳಿ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.
ಪುತ್ಥಳಿ ವಿರೂಪಗೊಂಡಿರುವ ಸುದ್ದಿ ಹರಡುತ್ತಿದ್ದಂತೆಯೇ ಶ್ರೀಗಳ ಅಸಂಖ್ಯಾತ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಡ್ಯದ ಕಾಯಕಯೋಗಿ ಫೌಂಡೇಶನ್ನಿನ ಅಧ್ಯಕ್ಷ ಎಂ.ಶಿವಕುಮಾರ್ ಅವರು ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ.
“ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ನಡೆದಾಡಿದ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿರೂಪಗೊಳಿಸಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಫಲರಾದರೆ ಸ್ವಾಮೀಜಿ ಅವರ ಭಕ್ತರು ಕೆರಳುವುದರಲ್ಲಿ ಸಂಶಯವೇ ಇಲ್ಲ,” ಎಂದು ಹೇಳಿದ್ದಾರೆ.
ಕೂಡಲೇ ಅವರನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ
ಶಿಘ್ರ ಕೇಡಿಗೆ ಡಿಗಳ ಬಂಧನವಾಗಲಿ, ಮತ್ತು ಪುತ್ಥಳಿಯ ಮರುಸ್ಥಾಪನೆಯಾಗಲು
ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿಕೃತಗೊಳಿಸಿದವರ ಕೈ ಕತ್ತರಿಸಬೇಕು…
ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ನಡೆದಾಡಿದ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿರೂಪಗೊಳಿಸಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಫಲರಾದರೆ ಸ್ವಾಮೀಜಿ ಭಕ್ತರೆ ಇಂತಹ ಕೃತ್ಯವೆಸಗಿದವರ ಕೈ ಕತ್ತರಿಸಲು ಮುಂದಾಗುತ್ತಾರೆ.
ಎಂ.ಶಿವಕುಮಾರ್
ಅಧ್ಯಕ್ಷರು
ಕಾಯಕಯೋಗಿ ಫೌಂಡೇಶನ್, ಮಂಡ್ಯ.
ದುಶ್ಶಕಮಿ೯ಗಳನ್ನು ಕೂಡಲೆ ಬಂಧಿಸಿ
ಕೂಡಲೇ ಆರೋಹಿಗಳನ್ನು ಬಂಧಿಸಬೇಕು, ಹಾಗೂ ಮೂರ್ತಿಯನ್ನು ಸರಿಪಡಿಸಬೇಕು ಅಥವಾ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.
ಶಾಂತಿ ಕದಡಲು ಇಂತಹ ದುಷ್ಕೃತ್ಯ ಮಾಡಿರುವ ದುಷ್ಕರ್ಮಿಗಳನ್ನ ಶಿಕ್ಷಿಸಬೇಕು ಇಲ್ಲದಿದ್ದಲ್ಲಿ ಸಮಾಜದಲ್ಲಿ ದ್ವೇಷ ಭಾವನೆಗಳು ಮೂಡುತ್ತವೆ..ನಾಡಿನ ಸಮಸ್ತರ ಗೌರವಾನ್ವಿತ ಸ್ವಾಮೀಜಿಗಳಿಗೆ ಅಗೌರವ ತೋರಿರುವುದು ಖಂಡನೀಯ
ಕೂಡಲೇ ಬಂದಿಸಿ ಶಿಕ್ಷೆ ಕೊಡಿ
ಇಂಥಹವರಿಗೂ ಹೀಗೆ ಮಾಡಿದರೆ, ನಾವೆತ್ತ ಸಾಗಿದ್ದೇವೆ? ಸ್ವಾಮೀಜಿ ಮಾನವ ಪಂಥಕ್ಕೆ ಸೇರಿದವರು. ಕಿಡಿಗೇಡಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ಆದಾಗ ಮಾತ್ರ ಬೇರೆಯವರಿಗೆ ಒಂದು ಪಾಠ ಆಗುತ್ತೆ.