ಗಂಗಾವತಿ
ನನ್ನ ಮನೆತನದ ವಿಷಯವನ್ನು ನಾನೆ ಬರೆಯುವ ಒಂದು ಅನಿವಾರ್ಯತೆ ಘಟನೆ ಬಂದಿದೆ.
ಸಹೋದರ ಆನಂದ ಅಕ್ಕಿ ಅಂತ ಗಂಗಾವತಿಯವರು ಗಣಪತಿ ಹಬ್ಬದ ನಿಮಿತ್ಯವಾಗಿ ಅವರ ಓಣಿಯಲ್ಲಿ ಗಣಪತಿಯನ್ನು ಕೂಡಿಸಿದ್ದರು. ಅವರ ಇಡಿ ಮನೆತನ ನನಗೆ ತುಂಬಾ ಆತ್ಮೀಯ. ಯಾವುದೆ ಕಾರ್ಯಕ್ರಮ ಮಾಡಿದರೆ ಒಬ್ಬರನ್ನು ಒಬ್ಬರು ಬಿಟ್ಟು ಮಾಡಿಲ್ಲ. ಮೊನ್ನೆ ಅವರು ಗಣಪತಿಯನ್ನು ಕೂಡಿಸಿದ ಸಂಧರ್ಭದಲ್ಲಿ, ನನಗೆ ವೇದಿಕೆಗೆ ಆಹ್ವಾನ ಮಾಡಿದರು. ಅಂದು ನಾನು ಹೋಗಲಿಲ್ಲ ಅದಕ್ಕೆ ಅವರಲ್ಲಿ ಕ್ಷಮೆಯಾಚಿಸುವೆ.
ಹೋಗಬಾರದು ಅಂತ ಏನೂ ಇಲ್ಲ, ನನ್ನ ಗೆಳೆಯರ ಬಳಗದಲ್ಲಿ ಸಾಕಷ್ಟು ಅನ್ಯ ಮತಧರ್ಮದವರು , ಅನ್ಯ ಆಚರಣೆಯವರು ಇದ್ದಾರೆ. ಇವರೆಲ್ಲಾ ನನಗೆ ತುಂಬಾ ಆತ್ಮೀಯರು. ಎಷ್ಟೂ ಆತ್ಮೀಯರು ಅಂದ್ರೆ ನನ್ನ ಬದುಕು ಈ ರೀತಿಯಾಗಿ ಬದಲಾಗಿಸಿದವರು ವೈಶ್ಯ ಸಮಾಜದ ನನ್ನ ಹಿರಿಯ ಅಣ್ಣನಂತೆ ನನ್ನ ಬದುಕಿನ ಎಲ್ಲಾ ಸ್ತರಗಳಲ್ಲಿ ಬೆಂಬಲವಾಗಿ ನಿಂತ ವೆಂಕಟೇಶ (ರಾಜಣ್ಣ) ಶೀರಗೇರಿ.
ಅಂತಹ ಒಂದು ಆತ್ಮೀಯತೆ ಸಂಭಂದ ನಾನು ಎಲ್ಲಾ ಸಮುದಾಯಗಳ ಜೊತೆ ಇಟ್ಟುಕೊಂಡಿದ್ದೆನೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಪೂಜಕ್ಕೆ ಕರೆದಾಗ ನಾನು ಖಂಡಿತವಾಗಿ ಭಾಗಿಯಾಗುತ್ತೆನೆ ಅವರ ಜೊತೆ ನಿಲ್ಲುತ್ತೆನೆ.
ಆದರೆ ಸಹೋದರ ಆನಂದ ಅಕ್ಕಿ ಕರೆದ ಆ ಕಾರ್ಯಕ್ರಮ ವೇದಿಕೆಯ ಕಾರ್ಯಕ್ರಮವಾಗಿತ್ತು. ಅಲ್ಲಿ ಹೋಗಿ ನಾನು ಏನೂ ಮಾತಾಡಲಿ ಎನ್ನುವ ದುಗುಡ ನನ್ನದು. ನಮ್ಮ ಮನೆತನ ಲಿಂಗ ದೀಕ್ಷೆ ಪಡೆದ ನಂತರ ಆ ತತ್ವ ಸಿದ್ದಾಂತದಂತೆ ನಾವು ಬದುಕುತ್ತಿದ್ದೆವೆ. ಅವರು ಸುಮ್ಮನೆ ಪೂಜೆ ಬರ್ರೀ ಅಂತ ಕರೆದಿದ್ದರೆ ಖಂಡಿತವಾಗಿ ನಾನು ಭಾಗವಹಿಸುತ್ತಿದ್ದೆ.
ಆದರೆ ವೇದಿಕೆಯ ಮೇಲೆ ಹೋದ ಮೇಲೆ ನಾ ಏನಂತ ಮಾತಾಡಲಿ. ನಾ ನಂಬಿದ ತತ್ವ ಸಿದ್ದಾಂತಕ್ಕೆ ವಿರುದ್ದವಾಗಿ ಮಾತಾಡಿದರೆ ಅದು ನನ್ನ ಆತ್ಮರತಿ ಅಥವಾ ಆತ್ಮವಂಚನೆಯಾಗುತ್ತೆ. ಒಂದು ವೇಳೆ ಅವರು ನಂಬಿದ ಸಿದ್ದಾಂತಕ್ಕೆ ವಿರುದ್ದವಾಗಿ ಮಾತಾಡಿದರೆ ನಾ ನಂಬಿದ ಆ ಭಾವೈಕ್ಯತೆಯ ಸಂಭಂದಕ್ಕೆ ಧಕ್ಕೆಯಾಗುತ್ತೆ ಅವರ ಮನಸ್ಸಿಗೂ ನೋವು ಆಗುತ್ತೆ ಹಾಗಾಗಿ ನಾನು ಆ ಕಾರ್ಯಕ್ರಮವನ್ನು ಅಟೆಂಡ್ ಮಾಡಲಿಲ್ಲ. ಅದಕ್ಕೆ ಅವರಲ್ಲಿ ಕ್ಷಮೆಯಾಚಿಸುವೆ.
ಮೂಲತವಾಗಿ ಮಾದಾರ ಚೆನ್ನಯ್ಯನ ಪರಂಪರೆಯವರಾದ ನಾವು ಮತ್ತು ನಮ್ಮ ಮನೆತನ ಲಿಂಗ ದೀಕ್ಷೆ ತೆಗೆದುಕೊಂಡು ಆ ಲಿಂಗಾಯತ ಸಿದ್ದಾಂತಕ್ಕೆ ತಕ್ಕಂತೆ ಎಷ್ಟು ಸಾಧ್ಯವೂ ಅಷ್ಟಕ್ಕೂ ಮೀಗಿಲಾಗಿ ಬದುಕುವ ನಿಟ್ಟಿನಲ್ಲಿ ನಮ್ಮ ಬದುಕು ಸಾಗುತ್ತಿದೆ. ಇದಕ್ಕೆ ಸಾಕ್ಷಿಯಂತೆ ನಮ್ಮ ಮನೆಯಲ್ಲಿ ಆ ಜಾತಿಯನ್ನು ಮೀರಿ ಬದುಕುವುದರಲ್ಲಿರುವ ಖುಷಿಯನ್ನು ಕಂಡಿದ್ದೆವೆ. ಮೀಸಲಾತಿ ಎಂಬುವುದು ನಮ್ಮ ತಲೆಮಾರಿಗೆ ನಿಂತು ಹೋಗಿದೆ.
ನನ್ನ ತಂಗಿಯ ಮಂಜುಳಾ ನಾರನಾಳ, ನಿರುಪಾದಿ ತಿಡಿಗೋಳ ಕುಟುಂಬ ಮೈಸೂರಿನಲ್ಲಿದೆ. ಅವರು ತಮ್ಮ ಬದುಕಿನಲ್ಲಿ ತಮ್ಮ ಮಕ್ಕಳಿಗೆ ಯಾವುದೇ ಮೀಸಲಾತಿ ಪಡೆದಿಲ್ಲ. ಮಕ್ಕಳಿಗೆ ಲಿಂಗಾಯತ ಅಂತ ಬರೆಯಿಸಿ ಆ ಮೀಸಲಾತಿಯನ್ನು ತಮ್ಮ ತಲೆಮಾರಿಗೆ ನಿಲ್ಲಿಸಿ ಈಗ ಮಕ್ಕಳು ಇಂಜನಿಯರಿಂಗ ಮಾಡುತ್ತಿದ್ದಾರೆ.
ಅಣ್ಣ ಉಮೇಶ ನಾರನಾಳ ಮತ್ತು ಶಿಲ್ಪಾ ಕರಡಿಯವರ ಮಗ ಮಹಾಂತ ಚಿನ್ನಿದಿಯ ಸರ್ಟೀಫಿಕೆಟ್ ನಲ್ಲಿ ಲಿಂಗಾಯತ ಅಂತ ಬರೆಸಿ ಆ ಮೀಸಲಾತಿಯನ್ನು ಮೀರಿ ಇಂದು MBBS ಮಾಡುತ್ತಿದ್ದಾನೆ. ಇನ್ನೂ ನಾನು ನನ್ನ ಮಕ್ಕಳಿಗೆ ಎಲ್ಲಿಯೂ ಮೀಸಲಾತಿಯ ಯಾವುದೇ ಸ್ಕಾಲರ್ಶಿಪ್ ಪಡೆಯದೆ General category ಶುಲ್ಕದೊಂದಿಗೆ ಇಂದು ಇಬ್ಬರು ಮಕ್ಕಳು ದೀಕ್ಷಾ ಮತ್ತು ಭಕ್ತಿ ದಾವಣಗೆರೆಯ ಬಾಪೂಜಿ ಸಂಸ್ಥೆಯಲ್ಲಿ ಒಬ್ಬಳು ಡೆಂಟಲ್ ಮಾಡುತ್ತಿದ್ದಾಳೆ, ಇನ್ನೊಬ್ಬಳು C.S. ಇಂಜನಿಯರಿಂಗ್ ಮಾಡುತ್ತಿದ್ದಾಳೆ.
ಇದೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ ನಾವು ನಂಬಿದಂತ ಸಿದ್ದಾಂತಕ್ಕೆ ತಕ್ಕಂತೆ ಬದುಕುವ ನಿಟ್ಟಿನಲ್ಲಿ ನಮ್ಮ ಬದುಕು ಸಾಗುತ್ತಿದೆ. ಹಂಗಂತ ನನ್ನ ಸಾರ್ವತ್ರಿಕ ಬದುಕು ಯಾರನ್ನೂ, ಯಾವುದನ್ನೂ, ಮತ್ತು ಇನ್ನೊಬ್ಬರ ಸಿದ್ದಾಂತಗಳನ್ನು, ಇನ್ನೊಬ್ಬರ ನಂಬಿಕೆಗಳಿಗೆ ಧಕ್ಕೆಯಾಗದಂತೆ ಬದುಕುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿರುವೆವು. ಹಾಗಾಗಿ ಸಹೋದರ ಆನಂದ ಅಕ್ಕಿಯವರಲ್ಲಿ ನಾನು ಕ್ಷಮೆಯಾಚಿಸುತ್ತಾ ನನ್ನ ಸಂದಿಗ್ದತೆಯ ಕಾರಣಕ್ಕಾಗಿ ಭಾಗವಹಿಸಲಿಲ್ಲವೆ ಹೊರತು ಯಾವುದೇ ಅನ್ಯತ ಭಾವನೆಗಳಿಂದ ಅಲ್ಲ ಎನ್ನುವುದು ಸ್ಪಷ್ಟಪಡಿಸುತ್ತಾ ನಾ ಅವರಲ್ಲಿ ಕ್ಷಮೆಯಾಚಿಸುವೆ . ಶರಣು ಸಹೋದರ ಆನಂದ ಅಕ್ಕಿ
ಇದಕ್ಕೆ ಅಂತಾರೆ ನೈಜ ಬದುಕಿನವರು ಎಂದು !! ಡಾ ರಾಜಶೇಖರ ನಾರಿನಾಳ ಒಳಗೊಳ್ಳುವ ಸಂಸ್ಕೃತಿಯವರು. ಇವರ ನಡೆ ನೂರಕ್ಕೆ ನೂರು ಸರಿಯಾಗಿದೆ.
ಕಳೆದ ಸುಮಾರು 30-35 ವರ್ಷಗಳಿಂದ ಅವರ ತಂದೆ ಮಾನ್ಯ ಹಿರಿಯ ಶರಣರಾದ ಸಿ. ಹೆಚ್. ನಾರಿನಾಳವರ ವಾಸ್ತವಿಕವಾದ ಜೀವನ ಮತ್ತು ಅವರ ಪ್ರಭಾವಿ ಅನುಭಾವ ((ಉಪನ್ಯಾಸ)ಗಳಿಂದ ಪ್ರಭಾವಿತನಾದವನು ನಾನು. ನಾನು ಮತ್ತು ಡಾ ರಾಜಶೇಖರ ಒಂದೇ ಇಲಾಖೆಯಲ್ಲಿ ಸಹೋದ್ಯೋಗಿಗಳಾಗಿದ್ದವರು. ಅಣ್ಣ-ತಮ್ಮಂದಿರು ಆಗಿ ಇರುವವರು.
ಸಾರ್ವತ್ರಿಕ ಬದುಕು ಯಾರನ್ನೂ, ಯಾವುದನ್ನೂ, ಮತ್ತು ಯಾವ ಸಿದ್ದಾಂತಗಳಿಗೆ, ನಂಬಿಕೆಗಳಿಗೆ ಧಕ್ಕೆಯಾಗದಂತೆ ಬದುಕುವ ಡಾ ರಾಜಶೇಖರ ಅವರ ನಡೆ ಎಷ್ಟೊಂದು ಸಮನ್ವಯವಾಗಿದೆ ಎಂದರೆ ; ಅವರು ಮಾದಾರ ಚೆನ್ನಯ್ಯನ ಪರಂಪರೆಯವರು ಎಂಬುದು ಇಂದಿನವರೆಗೂ ನನಗೆ ಗೊತ್ತೇ ಇದ್ದಿಲ್ಲ. ಅಷ್ಟೊಂದು “ಸರ್ವ ಸಮನ್ವಯ ಕುಟುಂಬ” ಅವರದ್ವಾದ್ಗಿದಾಗಿದೆ.
ಡಾ ರಾಜಶೇಖರವರಿಗೆ ಮನದುಂಬಿ ಅಭಿನಂದಿಸುತ್ತೇನೆ