ಸಿದ್ದರಾಮಯ್ಯ ಬಸವ ವಿರೋಧಿಯೋ, ಬೆಂಬಲಿಗರೋ ಮುಕ್ತವಾಗಿ ಚಿಂತಿಸೋಣ

ಬೆಂಗಳೂರು

ಲಿಂಗಾಯತ ಪ್ರಮುಖರು ಭೇಟಿಯಾಗಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಪ್ರಸಾರ ಮಾಡಲು ಬೆಂಬಲ, ಅನುದಾನ ಕೋರಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪವೂ ಸ್ಪಂದಿಸಿಲ್ಲವೆಂಬುದು ಬಹಳ ಚರ್ಚೆಯಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹೋಗಿದ್ದ ತಂಡದಲ್ಲಿದ್ದ ಬಹುಪಾಲು ಜನರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿಗಳಾಗಿದ್ದರು ಎಂಬುದು ಗಮನಿಸಬೇಕಾದ ಅಂಶ.

ಇವರು 12ನೆಯ ಶತಮಾನದಲ್ಲಿ ಬಸವಣ್ಣನವರನ್ನು ಗಡಿಪಾರು ಮಾಡಿಸಿ, ಸಾವಿರಾರು ಶರಣರನ್ನು ಕೊಲ್ಲಿಸಿ, ವಚನಗಳನ್ನು ಸುಟ್ಟವರ ಪಕ್ಷ, ಸಂಘ ಸಂಸ್ಥೆಗಳ ಪರ ನಾಚಿಕೆಯಿಲ್ಲದೆ ನಿಂತಿದ್ದಾರೆ.

ಮನುವಾದಿ ಮನಸ್ಥಿತಿಯ ಈ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬಸವ ಧರ್ಮದ ಏಳಿಗೆ ಕುಂಠಿತವಾಗಿದೆ. ಆದರೂ ಹಣೆಗೆ ಕುಂಕುಮ ಇಟ್ಟುಕೊಳ್ಳುವ ಕೆಲವೇ ಲಿಂಗಾಯತ ನಾಯಕರ ಹಿತಕ್ಕಾಗಿ ಶೇಕಡಾ ಎಂಬತ್ತರಷ್ಟು ಲಿಂಗಾಯತರು ಬಸವ ತತ್ವದ ವಿರೋಧಿ ಶಕ್ತಿಗಳ ಬೆಂಬಲಿಗರಾಗಿ ದುಡಿಯುತ್ತಿದ್ದಾರೆ.

ಸಿದ್ದರಾಮಯ್ಯ ಲಿಂಗಾಯತ ಸಮುದಾಯದಲ್ಲಿ ಹುಟ್ಟಿಲ್ಲ. ಆದರೆ ಇದುವರೆಗೂ ಯಾವುದೇ ಲಿಂಗಾಯತ ಮುಖ್ಯಮಂತ್ರಿ ಮಾಡದ ಕಾರ್ಯಗಳನ್ನು ಬಸವ ತತ್ವಕ್ಕೆ ಮಾಡಿದ್ದಾರೆ.

  1. ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬಸವ ಜಯಂತಿಯ ದಿನ ವಿಶ್ವಗುರು ಬಸವಣ್ಣ ನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು.
  2. 2016ರಲ್ಲಿ ಬಸವಣ್ಣನವರ ಕರ್ಮ ಭೂಮಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿಸಲು ಗೊರು ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅವರಿಂದ ವಿಸ್ತೃತ ವರದಿ ಪಡೆದರು. ನಂತರ ನೂರು ಎಕರೆ ಜಾಗದಲ್ಲಿ 650 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವ ವಿಖ್ಯಾತ ಕಟ್ಟಡ ಕಟ್ಟಲು 2018 ರ ಬಡ್ಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದರು. ಅವರ ನಂತರ ಮುಂದೆ ಮುಖ್ಯಮಂತ್ರಿ ಪಟ್ಟಕ್ಕೆ ಬಂದ ಜೆಡಿಎಸ್ ನ ಕುಮಾರಸ್ವಾಮಿ ಅದರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ.
  3. ನಂತರ ಬಿಎಸ್ ಯಡಿಯೂರಪ್ಪರ ಆಡಳಿತ ಕಾಲದಲ್ಲಿ ಕೆಲಸಕ್ಕೆ ಮತ್ತೆ ಚಾಲನೆ ಸಿಕ್ಕಿತು. ಸಿದ್ದರಾಮಯ್ಯ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗ ಮತ್ತೆ ಅನುಭವ ಮಂಟಪ ಕಟ್ಟಿಸಲು ಆಸಕ್ತಿವಹಿಸಿ ಅವಶ್ಯಕವಾದ ಹಣ ಬಿಡುಗಡೆ ಮಾಡುತ್ತಿದ್ದಾರೆ. ಕಟ್ಟಡದ ಕಾಮಗಾರಿ ಈ ವರ್ಷದ ಕೊನೆಯಲ್ಲಿ ಮುಗಿಯುವ ಸಾಧ್ಯತೆ ಇದೆ.
  4. ವಿಜಯಪುರದಲ್ಲಿ ಇದ್ದ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಲಿಂಗಾಯತ ಧರ್ಮದ ಸಪ್ತ ಗಣಗಳಲ್ಲಿ ಒಬ್ಬರಾದ ವೀರ ವಿರಾಗಿಣಿ ಅಕ್ಕ ಮಹಾದೇವಿ ಹೆಸರು ಇಟ್ಟರು.
  5. 2016ರಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಫೋಟೋ ಹಾಕಲು ಆದೇಶ ನೀಡಿದ್ದಾರೆ.
  6. ಬಸವಣ್ಣನವರ ವಿದ್ಯಭೂಮಿ ಮತ್ತು ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲಿ ಹಿಂದೆಯೇ ಕಟ್ಟಿರುವ ಷಟ್ಸ್ಥಲ ಭವನದ ಬಳಿ ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಬಸವೇಶ್ವರ ಮ್ಯೂಸಿಯಂ ಕಟ್ಟಿಸಲು 2018ರಲ್ಲಿ 139 ಕೋಟಿ ಅನುದಾನ ಕೊಟ್ಟು ಶಿಲಾನ್ಯಾಸ ನೆರವೇರಿಸಿದರು. ಅನಂತರ ಬಂದ ಯಾವ ಮುಖ್ಯಮಂತ್ರಿಯೂ ಅದರ ಬಗ್ಗೆ ಆಸಕ್ತಿ ವಹಿಸಲಿಲ್ಲ. ಮತ್ತೊಮ್ಮೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಚಾಲನೆ ಕೊಟ್ಟರು. ಕಟ್ಟಡದ ವಿನ್ಯಾಸ(structure) ಈಗ ಮುಗಿದಿದೆ.

6 . 2018ರಲ್ಲಿ ಲಿಂಗಾಯತ ಧರ್ಮದ ಅನುಯಾಯಿಗಳ ಬಹು ವರ್ಷಗಳ ಬೇಡಿಕೆಯಾದ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನ ಕೈಗೊಂಡು ಅಂತಿಮ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

  1. 2023 ರಲ್ಲಿ ಶಿವಮೊಗ್ಗದ ಒಂದು ಪಾರ್ಕಿಗೆ ಅಲ್ಲಮಪ್ರಭುಗಳ ಹೆಸರು ಇಟ್ಟರು.
  2. 2024ರ ಜನವರಿಯಲ್ಲಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ.
  3. ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಚನ್ನಮ್ಮನ ಕಿತ್ತೂರು ಎಂದು ಹೆಸರು ಇಟ್ಟಿದ್ದಾರೆ.

ಇಷ್ಟು ಕಾರ್ಯಗಳು ಯಾವುದಾದರೂ ಲಿಂಗಾಯತ ಮುಖ್ಯಮಂತ್ರಿ ಮಾಡಿದ್ದರೆ ತಿಳಿಸಿ. ಜೊತೆಗೆ ಸಿದ್ದರಾಮಯ್ಯ ಬಸವ ವಿರೋಧಿಯೋ ಅಥವಾ ಬೆಂಬಲಿಗರೂ ಎಂದು ಮುಕ್ತವಾಗಿ ಚಿಂತಿಸಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GavGlyNxCLf7iBbDBH8P5b

Share This Article
4 Comments
  • ಅಪ್ಪಟ ಬಸವಣ್ಣ ಅವರ ಅನುಯಾಯಿ ♥️💐🌹 ಬಡವರ ಬಂಧು ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು 💐ಶರಣು ಶರಣಾರ್ಥಿ ಗಳು

  • ಬಸವ ಭಕ್ತರಿಗೆ ಮಾನ್ಯ ಶ್ರೀ ಸಿದ್ದರಾಮಯ್ಯ ನವರ ಈ ಕಾರ್ಯಗಳು ತೃಪ್ತಿ ಯಾಗಿದೆ.

    • ತನ್ನ ಜೀವನದಲ್ಲಿ ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಸವಣ್ಣನವರ ತತ್ವ ಆದರ್ಶಕ್ಕೆ ಅನುಗುಣವಾಗಿ ಆಡಳಿತವನ್ನು ನೀಡುವಂತಹ ವ್ಯಕ್ತಿ ಸಿದ್ದರಾಮಯ್ಯನವರು ಶರಣು ಶರಣಾರ್ಥಿ 💐💐🙏🙏

  • ಹಲಗಿ ಹಬ್ಬ, ದುರ್ಗಾ ದೌಡ್, ಗಾಳಿ ಪಟ ಉತ್ಸವ,
    ಆಕಾಶ ಬುಟ್ಟಿ ಉತ್ಸವ ಇಂಥ ಜನಪ್ರೀಯ
    ಕಾರ್ಯಕ್ರಮಗಳನ್ನು ಮಾಡುವ ಬ್ಲೂಜೆಪಿಯವರನ್ನು
    ಜನ ಹಿಂದೂ ರಕ್ಷಕರೆಂದು ತಿಳಿಯುತ್ತಾರೆ.

    ಇಂಥ ಮೌಢ್ಯ ಉತ್ಸವಗಳನ್ನು ಬೆಂಬಲಿಸದ
    ಸಿದ್ರಾಮಯ್ಯ ಬಸವ ತತ್ವ ಹೇಳುತ್ತಾರೆ ಅದಕ್ಕೆ
    ಮೂಢ ಲಿಂಗಾಯತರೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಘಟಕ