ಬೆಂಗಳೂರು
ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧಿಪತಿಗಳು ಮತ್ತು ಗಣ್ಯರು ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವಾರು ಬೇಡಿಕೆಗಳನ್ನು ಮಂಡಿಸಿದ್ದರು.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ 2025ರ ಬಜೆಟನ್ನು ಮಂಡಿಸಿದ ನಂತರ ಸಮುದಾಯದಿಂದ ಬರುತ್ತಿರುವ ಪ್ರತಿಕ್ರಿಯೆಗಳು.
ಮಹತ್ವದ ಹೆಜ್ಜೆ: ಎಂ ಬಿ ಪಾಟೀಲ್
ಅಂತಾರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರ ಸ್ಥಾಪನೆಯತ್ತ ಮಹತ್ವದ ಹೆಜ್ಜೆ!
ಮಾನ್ಯ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ನಲ್ಲಿ ಅಂತಾರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರ ಸ್ಥಾಪನೆಗೆ ತಾತ್ವಿಕ ಅನುಮೋದನೆ ನೀಡಿರುವುದು ಅಭಿನಂದನಾರ್ಹ.
“ಅಂತಾರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ, ವಿಸ್ತೃತ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕಟಿಸಿದ್ದು, ಎಲ್ಲ ಬಸವ ಭಕ್ತರ ಪರವಾಗಿ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಬೇಡಿಕೆಗಳು ಈಡೇರಿಲ್ಲ: ಸಿ. ಸೋಮಶೇಖರ್
ಬಸವ ಆಧ್ಯಾತ್ಮಿಕ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಬಗ್ಗೆ ತೀರ್ಮಾನಿಸಿದ್ದು ಅದರ ಬಗ್ಗೆ ತಜ್ಞರ ಸಮಿತಿ ನೇಮಿಸುವುದಾಗಿ ಘೋಷಿಸಿದ್ದಾರೆ.
ನಮ್ಮ ಒತ್ತಾಯ ಇದ್ದದ್ದು ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ಘೋಷಣೆ ಯಡಿ ಒಂದು ಪ್ರತ್ಯೇಕ ವಚನ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂಬುದಾಗಿತ್ತು. ಜೊತೆಗೆ ಅನೇಕ ಶರಣರ ಸ್ಮಾರಕಗಳ ಅಭಿವೃದ್ಧಿ, ವಚನ ಸಾಹಿತ್ಯ ಪ್ರಕಟಣೆ ಹಾಗೂ ಒಂದು ಅಂತರ್ ರಾಷ್ಟ್ರೀಯ ಬಸವ ದರ್ಶನ ಕೇಂದ್ರ ಸ್ಥಾಪಿಸಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಇದು ಈಡೇರಿಲ್ಲ.
ಹಂತ ಹಂತವಾಗಿ ಐದು ವರ್ಷ ಗಳಲ್ಲಿ ಈ ಎಲ್ಲಾ ವಚನ ಸಾಹಿತ್ಯಧಾರಿತ ಯೋಜನೆ ಗಳಿಗೆ 500 ಕೋಟಿ ಅನುದಾನ ಘೋಷಿಸಲು ಮುಖ್ಯ ಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು ಕನಿಷ್ಠ ಈ ವರ್ಷದ ಬಜೆಟ್ ನಲ್ಲಿ ಈ ಉದ್ದೇಶ ಕ್ಕಾಗಿ 100 ಕೋಟಿ ಅನುದಾನ ನಿರೀಕ್ಷೆಸಲಾಗಿತ್ತು.
ಜೊತೆಗೆ ವಚನ ಸಾಹಿತ್ಯ ಪ್ರಸಾರಕ್ಕಾಗಿಯೇ ಸ್ಥಾಪಿತ ವಾಗಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೂ ವಾರ್ಷಿಕ ಅನುದಾನ ನೀಡಲು ಮುಖ್ಯ ಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು ಬಸವಾ ಭಿಮಾನಿಗಳಾದ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಂದ ಈ ಮೇಲ್ಕಂಡ ಯೋಜನೆಗಳಿಗೆ ಸಕರಾತ್ಮಕ ಸ್ಪಂದನೆ ಯನ್ನು ನೀರೀ ಕ್ಷಿಸಲಾಗಿತ್ತು. ಪೂರಕ ಬಜೆಟ್ ನಲ್ಲಿಯಾದರೂ ಈ ಬಗ್ಗೆ ನಮ್ಮ ಆಶಯವನ್ನು ಮುಖ್ಯ ಮಂತ್ರಿಗಳು ಪೂರೈಸುತ್ತಾರೆ ಎಂದು ನಂಬಬಹುದೇ?
(ಶರಣ ಸಾಹಿತ್ಯ ಪರಿಷತ್)
ತೋಂಟದ ಶ್ರೀಗಳು: ಅನುದಾನ ಘೋಷಣೆಯಾಗಿಲ್ಲ
ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧಿಪತಿಗಳು ಮತ್ತು ಗಣ್ಯರು ಬಜೆಟ್ ಪೂರ್ವದಲ್ಲಿ ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಹಲವಾರು ಬೇಡಿಕೆಗಳನ್ನು ಮಂಡಿಸಿದ್ದರು. ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂಬ ಘೋಷಣೆ ಮಾತ್ರ ಆಗಿದೆಯೇ ಹೊರತು ಅದಕ್ಕಾಗಿ ಪ್ರತ್ಯೇಕ ಅನುದಾನ ಘೋಷಣೆಯಾಗಿಲ್ಲ.
ಡಾ. ಜೆ ಎಸ್ ಪಾಟೀಲ: ಹಿನ್ನಡೆಗೆ ಕೆಲವು ಮಠಗಳ ಇಬ್ಬಗೆ ನೀತಿ ಕಾರಣ
ವಿಜಯಪುರ
ಆಯವ್ಯಯಕ್ಕೆ ಮುಂಚೆ ಲಿಂಗಾಯತ ಮಠಾಧೀಶರುˌ ರಾಜಕಾರಣಿಗಳುˌ ಚಿಂತಕರುˌ ಹಾಗೂ ಸಮಾಜದ ಹಿರಿಯರು ಸೇರಿ ಶರಣ ತತ್ವದ ಪ್ರಚಾರˌ ಹಾಗೂ ಪ್ರಸಾರಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದು ನಾವು ಬಲ್ಲೆವು.
ಆದರೆ ನಿನ್ನೆ ಮಂಡಿಸಲಾದ ಆಯವ್ಯಯದಲ್ಲಿ ಲಿಂಗಾಯತರ ಬೇಡಿಕೆಗೆ ಸರಕಾರ ಯಾವ ರೀತಿಯಲ್ಲಿ ಸ್ಪಂದಿಸಿದೆ ಎನ್ನುವ ಕುರಿತು ಸಮಾಜದ ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
೧. ಶರಣ ಸಮಾಜದ ಬೇಡಿಕೆಗಳ ಕುರಿತು ಬಜೆಟ್ ಸ್ಪಂದಿಸಿದೆಯೆ?
ಶರಣ ಸಮಾಜದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂದೆ ಹೇಳಬೇಕು.
೨. ಸ್ಪಂದಿಸದಿರಲು ಕಾರಣ?
ಮುಖ್ಯಮಂತ್ರಿ ಸಿದ್ಧರಿಮಯ್ಯನವರು ತಮ್ಮ ಅಧಿಕಾರದ ಎರಡೂ ಅವಧಿಯಲ್ಲಿ ಶರಣ ಸಮಾಜದ ಅನೇಕ ಬೇಡಿಕೆಗಳನ್ನು ಈಡೇರಿಸಿದ ಏಕೈಕ ಮುಖ್ಯಮಂತ್ರಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.
ಆದರೆ ಲಿಂಗಾಯತ ಸಮುದಾಯವನ್ನು ಹಾಗೂ ಶರಣ ಸಂಸ್ಕೃತಿಯನ್ನು ನಾಶಗೊಳಿಸುವ ಹುನ್ನಾರ ಮಾಡುತ್ತಿರುವ ಸಂಘ-ಪರಿವಾರ ಮತ್ತು ಬಿಜೆಪಿಯೊಂದಿಗೆ ಲಿಂಗಾಯತ ಮಠಾಧೀಶರ ಒಡನಾಟ ಸಹಜವಾಗಿ ಜಾತ್ಯಾತೀತರು ಮತ್ತು ಸಮಾಜವಾದಿಗಳಿಗೆ ಸರಿ ಬರುವುದಿಲ್ಲ. ಮುಖ್ಯಮಂತ್ರಿಗಳು ಸ್ಪಂದಿಸದೆ ಇರಲು ನಮ್ಮ ಕೆಲವು ಮಠಾಧೀಶರ ಈ ಇಬ್ಬಗೆ ನೀತಿಯೆ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
೩. ಬಸವ ಅನುಯಾಯಿಗಳ ಪ್ರತಿಕ್ರಿಯೆ ಹೇಗಿರಬೇಕು?
ಬಸವಾನುಯಾಯಿಗಳು ಸರಿಯಾಗಿಯೆ ಇದ್ದಾರೆ. ಕೆಲವು ಬಸವಪ್ರಣೀತ ವಿರಕ್ತ ಮಠಗಳ ಇಬ್ಬಂದಿತನˌ ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಶಕ್ತಿಗಳೊಂದಿಗಿನ ಒಡನಾಟ ನಿಲ್ಲಬೇಕು. ನಿಜವಾದ ಬಸವತತ್ವದ ಆಶಯದಂತೆ ಮಠಗಳು ಕಾರ್ಯ ಮಾಡಬೇಕು. ಲಿಂಗಾಯತರಲ್ಲಿ ತಮ್ಮ ಸಂಸ್ಕೃತಿಯ ವೈರಿಗಳು ಯಾರು ಎನ್ನುವ ರಾಜಕೀಯ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯ ಮಠಗಳು ಮಾಡಬೇಕಿದೆ.
ಮೊದಲು ಮಠಗಳೆ ಬದಲಾಗಬೇಕಿದೆ. ವೀರಶೈವ ಮಹಾಸಭಾˌ ಪಂಚಪೀಠಗಳು ಮತ್ತು ವಿರಕ್ತ ಮಠಾಧೀಶರ ಅಸ್ಪಷ್ಟ ರಾಜಕೀಯ ನಿಲುವು ನಮ್ಮ ಸಮಾಜವು ಛಿದ್ರಗೊಳ್ಳಲು ಕಾರಣವಾಗಿದೆ. ಕಾಲಕಾಲಕ್ಕೆ ನಮ್ಮ ರಾಜಕೀಯ ನಿಲುವುಗಳು ನಮ್ಮ ಸಮಾಜದ ಬೇಡಿಕೆಗನುಗುಣವಾಗಿ ಬದಲಾಗದಿದ್ದರೆ ಈ ಸಮಸ್ಯೆಗೆ ಪರಿಹಾರವಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಬಜೆಟ್ ಪ್ರತಿಕ್ರಿಯೆ: ಬಸವ ಪರ ಸಿದ್ದರಾಮಯ್ಯ ಬೇಡಿಕೆಗಳನ್ನು ಕಡೆಗಣಿಸಿದ್ದೇಕೆ?
2025 ಬಜೆಟಿಗೆ ಶರಣ ಸಮಾಜದ ಪ್ರತಿಕ್ರಿಯೆ
ಬೆಂಗಳೂರು
ಕರ್ನಾಟಕ ಬಜೆಟ್ ಕುರಿತಂತೆ ಬಸವ ಮಿಡಿಯಾ ಪ್ರಶ್ನೆಗಳು ಮತ್ತು ನನ್ನ ಅಭಿಪ್ರಾಯ.
(೧) ಶರಣ ಸಮಾಜದ ಬೇಡಿಕೆಗಳ ಬಗ್ಗೆ ಬಜೆಟ್ ಸ್ಪಂದಿಸಿದೆಯೇ?
ಬಜೆಟ್ ಮಂಡನೆಗೆ ಕೆಲವು ವಾರಗಳ ಹಿಂದೆ (ಫೆಬ್ರವರಿ ೨೪, ೨೦೨೫) ಲಿಂಗಾಯತ ಮಠಾಧೀಶರು ಹಾಗೂ ರಾಜಕೀಯ ಪ್ರಮುಖರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಸವಣ್ಣ ಮತ್ತು ಲಿಂಗಾಯತಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಮಂಡಿಸಿದ್ದರು. ಇವುಗಳಲ್ಲಿ ಎರಡು ಬೇಡಿಕೆಗಳಿಗೆ ಆಶ್ವಾಸನೆ ಬಿಟ್ಟರೆ ಉಳಿದವಕ್ಕೆ ಸರ್ಕಾರ ಸ್ಪಂದಿಸಿಲ್ಲ.
ಇಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಸಿದ್ಧರಾಮಯ್ಯನವರು ತಮ್ಮ ಮುಖ್ಯಮಂತ್ರಿ ಮೊದಲ ಅವಧಿಯಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮನ್ನಣೆ ನೀಡುವ ಸಾಹಸದ ಕ್ರಮ ತೆಗೆದುಕೊಂಡಿದ್ದರು. ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಟ್ಟಿರು. ಈಗ ಎರಡನೆಯ ಅವಧಿಯಲ್ಲಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಕುಂಕುಮಧಾರಿಗಳ ಕೋಟೆ ಶಿವಮೊಗ್ಗದಲ್ಲಿ ಒಂದು ಉದ್ಯಾನಕ್ಕೆ ಅಲ್ಲಮಪ್ರಭುಗಳ ಹೆಸರಿಟ್ಟಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಾವ ಲಿಂಗಾಯತರೂ ಬಸವಣ್ಣನವರಿಗೆ ನ್ಯಾಯ ದೊರಕಿಸರಲಿಲ್ಲ. ಹಿಂದಿನ ಕುಂಕುಮಧಾರಿ ಲಿಂಗಾಯತ ಮುಖ್ಯಮಂತ್ರಿ ಕನ್ನಡವನ್ನು ಕಡೆಗಣಿಸಿ ಸಂಸ್ಕೃತ ವಿಶ್ವವಿದ್ಯಾಯವನ್ನು ಆರಂಭಿಸಿದ್ದರು. ಬಜೆಟ್ ಮಂಡನೆಯ ಸಂದರ್ಭದಲ್ಲಿ ಈ ಕುಂಕುಧಾರಿಯು ಬಜೆಟ್ ಫೈಲಗೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದರು. ಅದೊಂದು ಮಹಾಮೌಢ್ಯದ ಆಚರಣೆಯಾಗಿತ್ತು.
ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ದಿನ ಪ್ರತಿಮೆಗೆ ನಮಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೂ ಸಮುದಾಯದ ಬೇಡಿಕೆಗಳನ್ನು ಸಿದ್ಧರಾಮಯ್ಯ ಕಡೆಗಣಿಸಲು ಕಾರಣವೇನು.
(೨) ಸ್ಪಂದಿಸದಿರಲು ಕಾರಣವೇನು?
(ಅ) ಸಿದ್ಧರಾಮಯ್ಯನವರು ಬಸವಣ್ಣನವರ ಬಗ್ಗೆ ಮತ್ತು ಲಿಂಗಾಯತದ ಬಗ್ಗೆ ಯಾವ ಧೋರಣೆಯನ್ನು ತಳೆದಿದ್ದಾರೋ ಅಂತಹದ್ದೇ ಧೋರಣೆ ಅನೇಕ ಲಿಂಗಾಯತ ಮಠಾಧೀಶರಲ್ಲಿ ಕಾಣುತಿಲ್ಲ. ಇನ್ನೂ ಕೆಲವರು ‘ಲಿಂಗಾಯತ – ವಿರಶೈವ’ ಎಂಬ ಅಡ್ಡಗೋಡೆಯ ಮೇಲೆ ಕುಳಿತಿದ್ದಾರೆ. ಲಿಂಗಾಯತರಲ್ಲಿ ಬಹಳಷ್ಟು ಜನರು ಆರ್ ಎಸ್ ಎಸ್ ಹಿಂಬಾಲಕರು ಎಂಬುದು ಸಿದ್ಧರಾಮಯ್ಯನವರಿಗೆ ಗೊತ್ತಿದೆ.
(ಆ) ರಾಜ್ಯದ ಎರಡು ದೊಡ್ಡ ಲಿಂಗಾಯತ ಮಠಗಳು ಆರ್ ಎಸ್ ಎಸ್ ಕೃಪಾ ಪೋಷಿತವಾಗಿದೆ. ಇದರಲ್ಲಿ ಒಂದು ಮಠದ ಸ್ವಾಮಿ ವಿಪ್ರರ “ವಚನ ದರ್ಶನ”ಕ್ಕೆ ಶುಭಾಶಯ ಬರೆದಿದ್ದಾರೆ. ಅವು ಲಿಂಗಾಯತದ ಜೊತೆಯೂ ಇಲ್ಲ; ಸಿದ್ದರಾಮಯ್ಯನವರ ಜೊತೆಯಲ್ಲಿಯೂ ಇಲ್ಲ. ಇವು ಲಿಂಗಾಯತರ ಶಕ್ತಿ ಕುಂದಿಸಿವೆ.
(ಇ) ಸಿದ್ಧರಾಮಯ್ಯಮವರ ಕ್ಯಾಬಿನೆಟ್ಟಿನಲ್ಲಿರುವ ಲಿಂಗಾಯತ ಮಂತ್ರಿಗಳು ಪೂರ್ಣ ಒತ್ತಡ ಹಾಕಿವ ಸ್ಥಿತಿಯಲ್ಲಿಲ್ಲ. ಅಲ್ಲಿ ಒಳಗುಂಪುಗಳಿವೆ.
(ಈ) ಜನತಂತ್ರದಲ್ಲಿ ಸರ್ಕಾರ ಸಂಖ್ಯೆಯ ಮೇಲೆ ನಡೆಯುತ್ತದೆ. ಸದ್ಯ ಸಿದ್ಧರಾಮಯ್ಯನವರು ತಮ್ಮದೇ ಪಕ್ಷ ವಿವಿಧ ಲಾಬಿಗಳ ನಡುವೆ ಸಮನ್ವಯವನ್ನು ಸಾಧೀಸಿಕೊಳ್ಳಬೇಕಾಗಿದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮದೇ ರಾಜಕೀಯ ನಡೆಸುತ್ತಿದ್ದಾರೆ. ಸಿದ್ಧರಾಮಯ್ಯನವರು ತಮ್ಮ ಬೆಂಬಲಿಗರ ನೆಲೆ ಗಟ್ಟಿಗೊಳಿಸಬೇಕಾಗಿದೆ.
(೩) ಇದಕ್ಕೆ ಬಸನ ಅನುಯಯಿಗಳ ಪ್ರತಿಕ್ರಿಯೆ ಹೇಗಿರಬೇಕು?
ಸಿದ್ಧರಾಮಯ್ಯನವರು ಸ್ಪಂದಿಸದಿರುವುದಕ್ಕೆ ಕಾರಣಗಳನ್ನು ಕುರಿತಂತೆ ಸೂಕ್ಶ್ಮವಾಗಿ ಅಲೋಚಿಸಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ಬಗ್ಗೆ ಎಚ್ಚರದಿಂದ ನಮ್ಮ ಮುಂದಿನ ನಡೆಯನ್ನು ರೂಪಿಸಬೇಕು. ಸಿದ್ಧರಾಮಯ್ಯ ಬಸವ ಪರವಿದ್ದಾರೆ ಎಂಬುದನ್ನು ಮರೆಯಬಾರದು.
ಒಂದು ಎಚ್ಚರ: ಲಿಂಗಯತರ ಹೆಸರು ಹೇಳಿಕೊಂಡು ಬಜೆಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಮನ್ನಿಸಿಲ್ಲವೆಂದು ಸಿದ್ಧರಾಮಯ್ಯನವರ ವಿರುದ್ಧ ಒಳಗೊಳಗೆ “ರಾಜಕೀಯ” ಮಾಡುವ ಜನರಿದ್ದಾರೆ. ಉದಾ: ಲಿಂಗಾಯತರ ಒಂದು ದೊಡ್ಡ ಮಠ ನಡೆಸುತ್ತಿರುವ ಸಂಸ್ಥೆಯೊಂದರ ಅಧ್ಯಕ್ಷರು ಈಗಾಗಲೆ ಅಪಸ್ವರ ಎತ್ತುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು. ನಮ್ಮ ಅಸಮಧಾನವನ್ನು ಆರ್ ಎಸ್ ಎಸ್ ತನ್ನ ಉದ್ದೇಶಕ್ಕೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.