ಬಾಗಲಕೋಟೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸುತ್ತಿಲ್ಲ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಸಿದ್ದರಾಮಯ್ಯ ಅವರಿಗೆ ನಮ್ಮ ಭಯ ಇಲ್ಲ. ಬದಲಿಗೆ ಇವರನ್ನು ಕಂಡರೆ ನಾವು ಭಯ ಪಡುವಂತಂತಾಗಿದೆ ಎಂದರು.
ಬೊಮ್ಮಾಯಿ (ಹಿಂದಿನ ಸಿಎಂ) ಅವರಿಗೆ ಪಂಚಮಸಾಲಿ ಸಮಾಜದ ಓಟಿನ ಬಗ್ಗೆ ಭಯ ಮತ್ತು ಗೌರವ ಇತ್ತು, ಎಲ್ಲೆ ಕರೆದ್ರೂ ಬರ್ತಿದ್ರು. ಈಗ ಆದ್ರೆ ನಾವೇ ಸಿಎಂ ಮನೆ ಬಾಗಿಲಿಗೆ ಹೋಗೋ ಪರಿಸ್ಥಿತಿ ಬಂದಿದೆ.
ಪಂಚಮಸಾಲಿಗಳಿಗೆ ಹೋರಾಟ ಆರಂಬಿಸಿದ ಬಳಿಕ ಇಬ್ಬರು ಸಿಎಂಗಳು ಹೋಗಿ ಮೂರನೇಯವರು ಬಂದಿದ್ದಾರೆ. ಈಗಲ್ಲದಿದ್ದರೂ ಇನ್ನೂ ಐದು, ಹತ್ತು ವರ್ಷಕ್ಕಾದರೂ ನಮ್ಮ ಮೀಸಲಾತಿಗೆ ಸ್ಪಂದಿಸುವ ಸಿಎಂ ಬರುತ್ತಾರೆ.
ಮೀಸಲಾತಿ ಹೋರಾಟದ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಯಾವುದೇ ಮೃದು ಧೋರಣೆಯಿಲ್ಲ ಎಂದು ಸ್ಪಷ್ಟ ಪಡಿಸಿದರು. “ಮೃಧು ಧೋರಣೆ ಏನಿಲ್ಲಾ, ಹೊಸದಾಗಿ ಸಿಎಂ ಆಗಿದ್ದಾರೆ ಅಂತ ಲಿಂಗ ಕೈಯಲ್ಲಿ ಹಿಡಿದು ಪೂಜೆ ಮಾಡಿದ್ವಿ, ಅಷ್ಟೇ” ಎಂದರು.
ನಮ್ಮ ಸಮಾಜದ ಶಾಸಕರ ಮೂಲಕವೂ ಒತ್ತಡ ಹಾಕುತ್ತೇನೆ. ವಕೀಲರ ಮೂಲಕವೂ ಒತ್ತಡ ಹಾಕುತ್ತೇನೆ. ಸ್ವತಃ ವಕೀಲರು ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಕೀಲರನ್ನು ನೋಡಿಯಾದರೂ ಮನಸ್ಸು ಕರಗಿ ನಮಗೆ ಮೀಸಲಾತಿ ಘೋಷಣೆ ಮಾಡಬಹುದು.
ಈಗ ವಕೀಲರ ಹೋರಾಟವನ್ನೂ ಸಹ ನಿರ್ಲಕ್ಷ್ಯ ಮಾಡಿದ್ರೆ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತೆ, ಎಂದು ಎಚ್ಚರಿಸಿದರು.